’ಅಯ್ಯೋ ನಿಮ್ಗೆ ಗೊತ್ತಿಲ್ಲ ಸುಮ್ನಿರಿ’ ಎಂದು ವೇದಿಕೆಯಲ್ಲೇ ಎಚ್’ಡಿಕೆಗೆ ಹೇಳಿದ್ಯಾರು?

Published : Jun 23, 2018, 11:51 AM IST
’ಅಯ್ಯೋ ನಿಮ್ಗೆ ಗೊತ್ತಿಲ್ಲ ಸುಮ್ನಿರಿ’ ಎಂದು ವೇದಿಕೆಯಲ್ಲೇ ಎಚ್’ಡಿಕೆಗೆ ಹೇಳಿದ್ಯಾರು?

ಸಾರಾಂಶ

ನೂರಾರು ಜನ ಸೇರಿದ್ದ ಸಭೆಯಲ್ಲಿ ಯಾರಾದರೂ ದರ್ಶನ್ ಅವರನ್ನು ಏಕವಚನದಲ್ಲಿ ಗದರಿಕೊಳ್ಳುವುದಕ್ಕೆ ಸಾಧ್ಯವೇ? ಅದೇ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನೇ ‘ಅಯ್ಯೋ ನಿಮ್ಗೆ ಗೊತ್ತಿಲ್ಲ ಸುಮ್ನಿರಿ’ ಎನ್ನುವುದಕ್ಕೆ ಆಗುತ್ತಾ?

ನೂರಾರು ಜನ ಸೇರಿದ್ದ ಸಭೆಯಲ್ಲಿ ಯಾರಾದರೂ ದರ್ಶನ್ ಅವರನ್ನು ಏಕವಚನದಲ್ಲಿ ಗದರಿಕೊಳ್ಳುವುದಕ್ಕೆ ಸಾಧ್ಯವೇ? ಅದೇ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನೇ ‘ಅಯ್ಯೋ ನಿಮ್ಗೆ ಗೊತ್ತಿಲ್ಲ ಸುಮ್ನಿರಿ’ ಎನ್ನುವುದಕ್ಕೆ ಆಗುತ್ತಾ?  ಇಬ್ಬರು ಹಿರಿಯ ನಟಿಯರ ಹೆಗಲ ಮೇಲೆ ಕೈ ಹಾಕಿಕೊಂಡು ‘ಸ್ಮೈಲ್ ಪ್ಲೀಸ್... ಈಗ ಎಲ್ರೂ ಫೋಟೋ ತಗೊಳ್ಳಿ’ ಎಂದು ದಬಾಯಿಸಬಹುದೇ?

- ಖಂಡಿತ ಇದ್ಯಾವುದೂ ಸಾಧ್ಯವಿಲ್ಲ ಎಂದೇ ಬಹುತೇಕರ ಮಾತು. ಆದರೆ, ಅದೆಲ್ಲವೂ ಸಾಧ್ಯ  ಎಂದು ತೋರಿಸಿದ್ದು ಅಂಬರೀಶ್. ಅದಕ್ಕೆ ಅವರು ರೆಬೆಲ್ ಸ್ಟಾರ್ ಅಂಬರೀಶ್ ಆಗಿದ್ದು. ಅಂದಹಾಗೆ ಇದು ನಡೆದಿದ್ದು ಇಡೀ ಚಿತ್ರೋದ್ಯಮ ಸೇರಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಸನ್ಮಾನ ಮಾಡುವ ಕಾರ್ಯಕ್ರಮದ ವೇದಿಕೆ ಮೇಲೆ.

‘ಏಯ್ ಸುಮ್ನೆ ಕುತ್ಕೊಳ್ರೋ’, ‘ಹೋಗ್ರೋ ಆಚೆ’, ‘ಏಯ್ ಚಿನ್ನೇಗೌಡ ನಿನ್ಗೆ ಓಟ್ ಬೇಕು ಅಂದ್ರೆ  ವೇದಿಕೆಯಿಂದ ಇಳಿ ಬೇಗ’, ‘ಅಯ್ಯೋ ಬಾರಮ್ಮ, ಆ ಮೇಲೆ ಹೂವಿನ ಹಾರ ಹಾಕುವಂತೆ’ ಹೀಗೆ ಇಡೀ ಕಾರ್ಯಕ್ರಮದಲ್ಲಿ ಅಂಬರೀಶ್ ಹಂಗಾಮ ನೋಡಿ ಎಲ್ಲರ ಮುಖದಲ್ಲೂ ನಗು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಜನರದ್ದು ಎಮ್ಮೆಯ ಚರ್ಮ'.. ಅಂದು ಹೇಳಿದ್ದ ಅಕ್ಷಯ್ ಖನ್ನಾ ಮಾತೀಗ ವೈರಲ್.. ಈಗ ನೆಟ್ಟಿಗರು ಹೇಳ್ತಿರೋದೇನು?
ಅಬ್ಬಾ.. ಇತಿಹಾಸ ಸೃಷ್ಟಿಸಿದ 'ಧುರಂಧರ'ನ ದರ್ಬಾರ್; ಹಿಂದಿ ಚಿತ್ರರಂಗದಲ್ಲೇ ಸಾರ್ವಕಾಲಿಕ ದಾಖಲೆ!