‘ಅಮರ್’ ರಿಲೀಸ್‌ಗೂ ಮುನ್ನ 1 ಲಕ್ಷಕ್ಕೆ ಟಿಕೆಟ್ ಖರೀದಿಸಿದ ಅಭಿಮಾನಿ

Published : May 28, 2019, 03:27 PM IST
‘ಅಮರ್’ ರಿಲೀಸ್‌ಗೂ ಮುನ್ನ 1 ಲಕ್ಷಕ್ಕೆ ಟಿಕೆಟ್ ಖರೀದಿಸಿದ ಅಭಿಮಾನಿ

ಸಾರಾಂಶ

ಅಭಿಷೇಕ್ ಅಂಬರೀಶನ್ನು ತೆರೆ ಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ ಅಭಿಮಾನಿಗಳು | ಮೇ 31 ಕ್ಕೆ ತೆರೆ ಮೇಲೆ ಬರಲಿದೆ ಅಮರ್ ‘ಸಿನಿಮಾ’  

ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಮರ್ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಕುತೂಹಲ ಮೂಡಿಸಿದೆ. ಸಿನಿಮಾದ ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡಿದೆ. ‘ಅಮರ್’ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

ದಾವಣಗೆರೆ ಮೂಲದ ಮಂಜುನಾಥ್ ಅಂಬರೀಶ್ ಅವರ ಕಟ್ಟಾ ಅಭಿಮಾನಿ. ಅಮರ್ ಚಿತ್ರದ ಫಸ್ಟ್ ಡೇ ಫಸ್ಟ್ ಶೋ ನೋಡಲು ಕಾತರರಾಗಿದ್ದಾರೆ.ಚಿತ್ರದ ಮೊದಲ ಟಿಕೆಟ್ ತಾವೇ ಖರೀದಿಸಬೇಕೆಂದು ರಿಲೀಸ್ ಗೂ ಮುನ್ನ ಖರೀದಿಸಿದ್ದಾರೆ.  ನಿರ್ಮಾಪಕ ಸಂದೇಶ್ ನಾಗರಾಜ್ ಅವರಿಗೆ ಮಂಜುನಾಥ್ 1 ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ.

ಅಮರ್ ಚಿತ್ರ ಮೇ 31 ಕ್ಕೆ ರಿಲೀಸಾಗುತ್ತಿದ್ದು ಅಭಿಷೇಕ್ ಅಂಬರೀಶ್ ಹಾಗೂ ತಾನ್ಯಾ ಹೋಪ್ ನಟಿಸಿದ್ದಾರೆ. ನಾಗಶೇಖರ್ ನಿರ್ದೇಶನ ಮಾಡಿದ್ದು ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದಾರೆ.  ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Lakshmi Nivasa Serial: ಪೊಲೀಸ್​ ಕಂಪ್ಲೇಂಟ್​ ಕೊಡಲು ಮುಂದಾದ ವೀಕ್ಷಕರು- ಆಗಿದ್ದೇನು?
BBK 12: ಟ್ರಿಗರ್ ಮಾಡಿದ್ರೆ ಉಗುರಲ್ಲೇ ಹೊಡೆದು ಸಾಯಿಸ್ತೀನಿ: ಧ್ರುವಂತ್‌ಗೆ ಗಿಲ್ಲಿ ವಾರ್ನಿಂಗ್