Amala Paul: ಭೇಟಿಯಾದ 2 ತಿಂಗಳಲ್ಲೇ ಗರ್ಭಿಣಿ, ಆಮೇಲೆ ಮದುವೆ; ಸತ್ಯ ಬಿಚ್ಚಿಟ್ಟ ನಟಿ!

Published : Mar 16, 2026, 08:56 AM IST
Amala Paul

ಸಾರಾಂಶ

ಪತಿ ಜಗತ್‌ ದೇಸಾಯಿ ಅವರನ್ನು ಭೇಟಿಯಾದ ಎರಡೇ ತಿಂಗಳಲ್ಲಿ ತಾನು ಗರ್ಭಿಣಿಯಾಗಿದ್ದೆ, ನಂತರವಷ್ಟೇ ಮದುವೆಯಾಗಿದ್ದು ಎಂದು ನಟಿ ಅಮಲಾ ಪೌಲ್ ಬಹಿರಂಗಪಡಿಸಿದ್ದಾರೆ. ಮಗ ಹುಟ್ಟಿದ ಮೇಲೆ ತಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ ಎಂದೂ ಅವರು ಹೇಳಿದ್ದಾರೆ.

ಬೆಂಗಳೂರು (ಮಾ.16): 'ನೀಲತಾವರಂ' ಎಂಬ ಮಲಯಾಳಂ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ಅಮಲಾ ಪೌಲ್, ಇಂದು ದಕ್ಷಿಣ ಭಾರತದ ಪ್ರಮುಖ ನಟಿಯರಲ್ಲಿ ಒಬ್ಬರು. ಮಲಯಾಳಂ ಮಾತ್ರವಲ್ಲದೆ, ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲೂ ಅವರು ಮಿಂಚಿದ್ದಾರೆ. 2023ರಲ್ಲಿ ತಮ್ಮ ಗೆಳೆಯ ಜಗತ್‌ ದೇಸಾಯಿ ಅವರನ್ನು ಮದುವೆಯಾದರು. ಕನ್ನಡದ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ್ದ ಅಮಲಾ ಪೌಲ್‌ 2024ರ ಜೂನ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಅಮಲಾ ಪೌಲ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಡಿರುವ ಮಾತುಗಳು ಸಖತ್ ವೈರಲ್ ಆಗಿವೆ.

ತಮ್ಮ ಪತಿ ಜಗತ್‌ ಅವರನ್ನು ಭೇಟಿಯಾದ ಎರಡೇ ತಿಂಗಳಲ್ಲಿ ತಾನು ಗರ್ಭಿಣಿಯಾಗಿದ್ದೆ ಎಂದು ಅಮಲಾ ಪೌಲ್ ಹೇಳಿಕೊಂಡಿದ್ದಾರೆ. ಆ ನಂತರವೇ ತಾವು ಮದುವೆಯಾದೆವು. ಒಂದು ವೇಳೆ ಮಗು ನಮ್ಮ ಜೀವನಕ್ಕೆ ಬರದೇ ಇದ್ದಿದ್ದರೆ, ನಮ್ಮ ಸಂಬಂಧ ಹೇಗಿರುತ್ತಿತ್ತೋ ಹೇಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ. ತಮಿಳಿನ 'jfw ಡಿಜಿಟಲ್' ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

"ನಾವಿಬ್ಬರೂ ಭೇಟಿಯಾಗಿ ಒಂದು ಅಥವಾ ಎರಡು ತಿಂಗಳಲ್ಲೇ ನಾನು ಗರ್ಭಿಣಿಯಾದೆ. ಆಮೇಲೆ ನಾವು ಮದುವೆಯಾಗಿದ್ದು. ನಮ್ಮ ಮಗು ನಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿದೆ ಅಂತ ನಾನು ನಂಬುತ್ತೇನೆ. ಒಂದು ವೇಳೆ ಅವನು ನಮ್ಮ ಜೀವನದಲ್ಲಿ ಇಲ್ಲದಿದ್ದರೆ, ಈ ಸಂಬಂಧ ಎಲ್ಲಿಗೆ ಹೋಗುತ್ತಿತ್ತೋ ಹೇಳಲಾಗದು. ಮಗ ಬಂದ ನಂತರ, ನಮ್ಮಿಬ್ಬರ ನಡುವಿನ ಅಹಂ ಎಲ್ಲವನ್ನೂ ಬದಿಗಿಟ್ಟು, ಮಗುವಿಗೆ ಪ್ರಾಮುಖ್ಯತೆ ಕೊಟ್ಟೆವು. ಇದರಿಂದ ನಮ್ಮ ಸಂಬಂಧ ಇನ್ನಷ್ಟು ಆರೋಗ್ಯಕರವಾಯಿತು. ಅವನು ದೈವಸ್ವರೂಪಿ. ದೇವರು ನಮಗೆ ಕೊಟ್ಟ ಮಗು ಅವನು. ಅದಕ್ಕಾಗಿ ನಾವು ಕೃತಜ್ಞರಾಗಿದ್ದೇವೆ" ಎಂದು ಅಮಲಾ ಪೌಲ್ ಹೇಳಿದ್ದಾರೆ.
 

ಪರ-ವಿರೋಧ ಚರ್ಚೆ

ಈ ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಕಮೆಂಟ್‌ಗಳು ಬಂದಿವೆ. ಇಷ್ಟೊಂದು ಧೈರ್ಯವಾಗಿ ಸತ್ಯ ಹೇಳಿದ್ದಕ್ಕೆ ಅಮಲಾ ಪೌಲ್ ಅವರನ್ನು ಹೆಚ್ಚಿನವರು ಹೊಗಳಿದ್ದಾರೆ. ಆದರೆ, ಕೆಲವರು ನೆಗೆಟಿವ್ ಕಮೆಂಟ್‌ಗಳನ್ನೂ ಹಾಕಿದ್ದಾರೆ. 'ಇಂತಹ ಹೇಳಿಕೆಗಳು ಮುಂದಿನ ಪೀಳಿಗೆಗೆ ತಪ್ಪು ಸಂದೇಶ ನೀಡುತ್ತವೆ' ಎಂದು ಕೆಲವರು ಟೀಕಿಸಿದ್ದಾರೆ. ಅಂದಹಾಗೆ, ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ವಿಚಾರವನ್ನು ಅಮಲಾ ಪೌಲ್ ಈ ಹಿಂದೆಯೂ ಬಹಿರಂಗವಾಗಿ ಹೇಳಿಕೊಂಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಒಂದು ಫ್ಲಾಪ್, ಸಾಲು ಸಾಲು ಹಿಟ್! ಚಿರಂಜೀವಿ ರಿಜೆಕ್ಟ್ ಮಾಡಿದ್ದಕ್ಕೆ ಆವೇಶದಲ್ಲಿ ತಪ್ಪು ಮಾಡಿದೆ ಎಂದ ನಿರ್ಮಾಪಕ
Balakrishna Manchu Manoj: ಮತ್ತೆ ಒಂದಾಗ್ತಾರಾ ಬಾಲಯ್ಯ-ಮನೋಜ್? ಈ ಬಾರಿಯಾದ್ರೂ ಹಿಟ್ ಸಿಗುತ್ತಾ?