
ತಿರುವನಂತಪುರಂ(ಫೆ.14): ಎರಡು ಪೂರು ದಿನಗಳಲ್ಲಿ ವಿಶ್ವದಾದ್ಯಂತ ಕೊಟ್ಯಂತರ ಜನರ ಮನಸ್ಸು ಗೆದ್ದಿದ್ದ 'ಒರು ಅದಾರ್ ಲವ್' ಚಿತ್ರದ ಪ್ರಿಯಾ ಪ್ರಕಾಶ್ ಕಣ್ಣು ಮಿಟುಕಿಸುವ ಹಾಡನ್ನು ಚಿತ್ರ ತಂಡ ಹಿಂತೆಗೆದುಕೊಂಡಿದೆ.
ಚಿತ್ರದ ದೃಶ್ಯ ಹಾಗೂ ಸಾಹಿತ್ಯದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವ ಕಾರಣದಿಂದ ಹೈದರಾಬಾದ್'ನ ಠಾಣೆಯೊಂದರಲ್ಲಿ ದೂರು ದಾಖಲಿಸಲಾಗಿತ್ತು. ಈ ಘಟನೆಯ ನಂತರ ತಾವು ಯಾರ ಮನಸ್ಸು ನೋಯಿಸುವ ಉದ್ದೇಶವಿಲ್ಲ. ಸಿನಿಮಾದಲ್ಲೂ ಕೂಡ ಇರುವುದಿಲ್ಲ. ಯುಟ್ಯೂ'ಬ್'ನಿಂದಲೂ ತೆಗೆದು ಡಿಲಿಟ್ ಮಾಡುತ್ತೇವೆ ಎಂದು ಸಿನಿಮಾದ ನಿರ್ದೇಶಕರಾದ ಒಮರ್ ಲಾಲು' ತಿಳಿಸಿದ್ದಾರೆ.
ಪ್ರಿಯಾ ಪ್ರಕಾಶ್ ಅಭಿನಯದ ಹಾಡನ್ನು ಸಿಎಂಎ ಜಬ್ಬರ್ ರಚಿಸಿದ್ದರು, ಶಾನ್ ರೆಹಮಾನ್ ಸಂಗೀತ ಸಂಯೋಜಿಸಿದ್ದರು. ಹಾಡು ಬಿಡುಗಡೆಯಾದ ಒಂದೇ ದಿನದಲ್ಲಿ ಪ್ರಿಯಾ ಪ್ರಕಾಶ್ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಅಭಿಮಾನಿಗಳಾಗಿದ್ದರು.30 ಕೋಟಿ ವೆಚ್ಚದ ಈ ಚಿತ್ರ ಜೂನ್ 14ರಂದು ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.