ವೀಲ್‌ಚೇರ್‌ನಲ್ಲಿ ಅಕ್ಷಯ್ ತಾಯಿ; ಲಂಡನ್ ಬೀದಿಗಳಲ್ಲಿ ಆ್ಯಕ್ಷನ್ ಕಿಂಗ್

By Web Desk  |  First Published Aug 28, 2019, 12:41 PM IST

ಅಮ್ಮನ ಜೊತೆ ಲಂಡನ್ ಬೀದಿಗಳನ್ನು ಸುತ್ತುತ್ತಿದ್ದಾರೆ ಅಕ್ಷಯ್ ಕುಮಾರ್ | ಮೊಣಕಾಲು ಸರ್ಜರಿಗಾಗಿ ಲಂಡನ್ ಗೆ ತೆರಳಿದ್ದಾರೆ ಅಕ್ಷಯ್ ಕುಮಾರ್ ಕುಟುಂಬ | 


ಬಾಲಿವುಡ್ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ತುಂಬಾ ಡೌನ್ ಟು ಅರ್ತ್ ನೇಚರ್ ಇರುವ ವ್ಯಕ್ತಿ. ಸರಳತೆಯನ್ನು ಇಷ್ಟಪಡುವ ನಟ. 

ಅಮ್ಮನನ್ನು ವೀಲ್ ಚೇರ್ ಮೇಲೆ ಕೂರಿಸಿಕೊಂಡು ಲಂಡನ್ ಬೀದಿಗಳಲ್ಲಿ ಸುತ್ತಾಡುತ್ತಿರುವ ವಿಡಿಯೊವೊಂದನ್ನು ಶೇರ್ ಮಾಡಿ, ‘ಶೂಟಿಂಗನ್ನು ಸದ್ಯಕ್ಕೆ ನಿಲ್ಲಿಸಿ ಅಮ್ಮನ ಜೊತೆ ಲಂಡನ್ ನಲ್ಲಿದ್ದೇನೆ. ನೀವು ಜೀವನದಲ್ಲಿ ಎಷ್ಟು ಬ್ಯುಸಿ ಎನ್ನುವುದು ಮುಖ್ಯವಲ್ಲ. ಎಷ್ಟು ಬೆಳೆಯುತ್ತಿದ್ದೀರಿ ಎನ್ನುವುದೂ ಮುಖ್ಯವಲ್ಲ. ನಿಮ್ಮ ಪೋಷಕರಿಗೂ ವಯಸ್ಸಾಗುತ್ತಿದೆ ಎಂಬುದನ್ನು ಮರಿಯಬೇಡಿ. ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ಅವರ ಜೊತೆ ಸಮಯ ಕಳೆಯಿರಿ’ ಎಂದು ಅಕ್ಷಯ್ ಹೇಳಿದ್ದಾರೆ. 

Tap to resize

Latest Videos

75 ವರ್ಷದ ಅರುಣಾ ಭಾಟಿಯ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಸರ್ಜರಿಗಾಗಿ ಲಂಡನ್ ಗೆ ಕರೆದೊಯ್ಯಲಾಗಿತ್ತು. ಸರ್ಜರಿ ಯಶಸ್ವಿಯಾಗಿದೆ. 

 

ಅರುಣಾ ಭಾಟಿಯಾ ಯೋಗ ವಿಡಿಯೋವನ್ನು ಅಕ್ಷಯ್ ಶೇರ್ ಮಾಡಿಕೊಂಡಿದ್ದರು. 

click me!