
ಲಿಂಗಾಯತ ಸಮುದಾಯದಿಂದ ಮತ್ತೊಬ್ಬ ನಾಯಕನನ್ನು ಬೆಳೆಸಬೇಕು ಎಂಬ ಉದ್ದೇಶದಿಂದಲೇ ಪಕ್ಷದ ಹೈಕಮಾಂಡ್ ಮತ್ತು ಸಂಘ ಪರಿವಾರ ಲಕ್ಷ್ಮಣ ಸವದಿ ಅವರಿಗೆ ಪ್ರಮುಖ ಸ್ಥಾನಮಾನ ನೀಡಿದೆ. ಆದರೆ, ಸೋಲು ಅನುಭವಿಸಿದವರಿಗೆ ಈ ಪರಿಯ ಪ್ರಾಮುಖ್ಯತೆ ಯಾಕೆ ಎಂದು ಅನೇಕ ಶಾಸಕರು, ಪ್ರತಿಪಕ್ಷ ಆಕ್ರೋಶ ವ್ಯಕ್ತಪಡಿಸಿದೆ. ಜೊತೆಗೆ ಸಾರ್ವಜನಿಕ ವಲಯದಿಂದಲೂ ಆಕ್ರೋಶ ವ್ಯಕ್ತವಾಗಿದೆ.
ಲಕ್ಷ್ಮಣ್ ಸವದಿ ಸದನದಲ್ಲಿ ಬ್ಲೂಫಿಲ್ಮ್ ನೋಡಿದ್ದಾರೆ ಎಂಬ ಆರೋಪ ಇದೆ. ಇಂತವರನ್ನು ಡಿಸಿಎಂ ಮಾಡುವುದು ಎಷ್ಟು ಸರಿ ಎಂಬ ಆಕ್ರೋಶ ವ್ಯಕ್ತವಾಗಿದೆ.
ಚಿತ್ರ ನಿರ್ದೇಶಕ ಕೆ ಎಂ ಚೈತನ್ಯ ಸವದಿಗೆ ಡಿಸಿಎಂ ಸ್ಥಾನ ಕೊಟ್ಟಿದ್ದಕ್ಕೆ ಅಸಮಧಾನ ವ್ಯಕ್ತಪಡಿಸಿದ್ದಾರೆ. 'ವಿಧಾನ ಸೌಧದ ಒಳಗೆ ವಿಡಿಯೋ ನೋಡಿದ, ಚುನಾವಣೆಯಲ್ಲಿ ಸೋತ ಒಬ್ಬನನ್ನು, ರಾಜ್ಯದ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟ ಪಕ್ಷಕ್ಕೆ ಸ್ವಲ್ಪವಾದರೂ ನಾಚಿಕೆ ಮಾನ ಮರ್ಯಾದೆ ಇದೆಯಾ? ಇವರುಗಳಾ ನಮ್ಮ ಮುಂದಿನ ನಾಯಕರು? ಥೂ ಬೇವರ್ಸಿಗಳ. ನಿಮ್ಮ ಜನ್ಮಕ್ಕಷ್ಟು' ಎಂದು ಟ್ಟೀಟ್ ಮಾಡಿದ್ದಾರೆ.
ಸಿನಿಮಾ, ರಂಗಭೂಮಿ ಹಾಗೂ ಡಾಕ್ಯುಮೆಂಟ್ರಿ ಮಾಡುತ್ತಾ ಫಿಲ್ಮ್ ಫೇರ್ ಅವಾರ್ಡ್ ಸೌತ್ ಫಾರ್ ಬೆಸ್ಟ್ ನಿರ್ದೇಶಕ ಹಾಗೂ ಬೆಸ್ಟ್ ಫೀಚರ್ ಫಿಲ್ಮ್ ಅವಾರ್ಡ್‌ಗಳನ್ನು ತಮ್ಮ ಮಡಿಲಿಗೇರಿಸಿಕೊಂಡವರು ಚೈತನ್ಯ. ಇವರು ನಿರ್ದೇಶನದಲ್ಲಿ ಮೂಡಿ ಬಂದ 'ಆ ದಿನಗಳು' ಚಿತ್ರ ಕನ್ನಡ ಚಿತ್ರರಂಗದಲ್ಲೇ ಹೊಸ ಅಲೆ ಹುಟ್ಟಿಸಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.