
ಮುಂಬೈ (ಮೇ 22): ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ (Akshay Kumar) ಮುಂಬರುವ ಚಿತ್ರ 'ಪೃಥ್ವಿರಾಜ್' (Prithviraj) ಮುಂದಿನ ತಿಂಗಳು ಜೂನ್ 3, 2022 ರಂದು ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನವೇ ಚಿತ್ರ ವಿವಾದಗಳಿಂದ ಸುತ್ತುವರಿದಿದೆ. ಈ ಹಿಂದೆ ಗುರ್ಜರ್ ಮಹಾಸಭಾವೊಂದು ಪೃಥ್ವಿರಾಜ್ ಚೌಹಾಣ್ ರಜಪೂತರಲ್ಲ, ಗುರ್ಜರ್ ರಾಜ ಎಂದು ಪ್ರತಿಪಾದಿಸಿತ್ತು. ಇದೀಗ ಈ ಚಿತ್ರದ ಹೆಸರು ಬದಲಾಯಿಸುವಂತೆ ರಜಪೂತರ ಪ್ರತಿನಿಧಿ ಎಂದು ಕರೆಸಿಕೊಳ್ಳುವ ಕರ್ಣಿ ಸೇನೆ (Karni Sena) ಆಗ್ರಹಿಸಿದೆ. ಚಿತ್ರದ ಹೆಸರನ್ನು 'ಪೃಥ್ವಿರಾಜ್' ನಿಂದ 'ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್' ಎಂದು ಬದಲಾಯಿಸುವಂತೆ ಕರ್ಣಿ ಸೇನೆ ಒತ್ತಾಯಿಸಿದೆ.
ಕರ್ಣಿ ಸೇನೆಯ ವಕ್ತಾರ ಹೇಳಿದ್ದೇನು?: “ನಾವು ಈಗಾಗಲೇ ಯಶ್ ರಾಜ್ ಫಿಲ್ಮ್ಸ್ ಸಿಇಒ ಅಕ್ಷಯ್ ವಿಧಾನಿ ಅವರನ್ನು ಭೇಟಿ ಮಾಡಿದ್ದೇವೆ ಮತ್ತು ಅವರು ಚಿತ್ರದ ಹೆಸರನ್ನು ಬದಲಾಯಿಸುವ ಭರವಸೆ ನೀಡಿದ್ದಾರೆ. ಅವರು ನಮ್ಮ ಬೇಡಿಕೆಯನ್ನು ಒಪ್ಪಿಕೊಳ್ಳಲು ಸಿದ್ಧರಿದ್ದಾರೆ. ಆದರೆ, ಈ ಬಗ್ಗೆ ಯಶ್ ರಾಜ್ ಯಾವುದೇ ಉತ್ತರ ನೀಡಿಲ್ಲ. ಚಿತ್ರರಂಗದ ಕೆಲವು ಮೂಲಗಳು ಚಿತ್ರದ ಹೆಸರನ್ನು ಬದಲಾಯಿಸುವ ಬಗ್ಗೆ ಇನ್ನೂ ಯಾವುದೇ ಮಾಹಿತಿಯಿಲ್ಲ ಎಂದು ಹೇಳುತ್ತವೆ" ಎಂದು ಕರ್ಣಿ ಸೇನೆಯ (Karni Sena) ವಕ್ತಾರ ಸುರ್ಜಿತ್ ಸಿಂಗ್ ರಾಥೋಡ್ ಹೇಳಿದ್ದಾರೆ
ರಾಜಸ್ಥಾನದಲ್ಲಿ ಬಿಡುಗಡೆ ಇಲ್ಲ?: ಇನ್ನು ಚಿತ್ರದ ಹೆಸರು ಬದಲಾವಣೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ರಾಥೋಡ್ ಅವರಿಗೆ ತಿಳಿಸಿದಾಗ, ''ಸಿನಿಮಾದ ಹೆಸರನ್ನು ಬದಲಿಸದಿದ್ದರೆ, ಚಿತ್ರ ಬಿಡುಗಡೆಯನ್ನು ನಿಲ್ಲಿಸದಿದ್ದರೆ 'ಪೃಥ್ವಿರಾಜ್' ಚಿತ್ರ ರಾಜಸ್ಥಾನದಲ್ಲಿ ಬಿಡುಗಡೆಯಾಗುವುದಿಲ್ಲ" ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ v/s ಕಮಲ್ ಹಾಸನ್; ಬಾಕ್ಸ್ ಆಫೀಸ್‌ನಲ್ಲಿ ಮತ್ತೊಂದು ಮೆಗಾವಾರ್, ಗೆಲ್ಲೋರ್ಯಾರು?
ಇನ್ನು 'ಈ ಬಗ್ಗೆ ನಾವು ಈಗಾಗಲೇ ರಾಜಸ್ಥಾನದ ಥಿಯೇಟರ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದೇವೆ. ಚಿತ್ರದ ಹೆಸರನ್ನು ಬದಲಾಯಿಸದಿದ್ದರೆ ರಾಜಸ್ಥಾನದಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ. ಆದರೆ, ರಾಜಸ್ಥಾನದ ಥಿಯೇಟರ್ ಮಾಲೀಕರು ಮತ್ತು ವಿತರಕರಿಗೂ ಚಿತ್ರದ ಹೆಸರು ಬದಲಾವಣೆಯ ಬಗ್ಗೆ ತಿಳಿದಿಲ್ಲ" ಎಂದು ರಾಥೋಡ್ ಹೇಳಿದ್ದಾರೆ
ಮಾನುಷಿ ಚಿಲ್ಲರ್ ಪದಾರ್ಪಣೆ: ಅಕ್ಷಯ್ ಕುಮಾರ್ (Akshay Kumar) ಜೊತೆಗೆ ಸಂಜಯ್ ದತ್, ಸೋನು ಸೂದ್, ಅಶುತೋಷ್ ರಾಣಾ ಮತ್ತು ಮಾನವ್ ವಿಜ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಈ ಚಿತ್ರವು ಚಾಂದಬಾರ್ದಾಯಿ ಅವರ ಮಹಾಕಾವ್ಯವಾದ 'ಪೃಥ್ವಿರಾಜ್ ರಾಸೋ' ಆಧರಿಸಿದೆ ಮತ್ತು ಇದನ್ನು ಡಾ. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶಿಸಿದ್ದಾರೆ.
ಇದನ್ನೂ ಓದಿ: ತಂಬಾಕು ಆ್ಯಡ್‌ನಲ್ಲಿ ಅಕ್ಷಯ್ ಕುಮಾರ್: ಕ್ಷಮೆ ಕೋರಿದ Bollywood ನಟ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.