ಹುಡುಗಿ ಪಕ್ಕದಲ್ಲಿದ್ರೂ ನಿದ್ದೆ ಮಾಡೋದಾ! ಛೇ ಎಂಥ ಮಾರ್ರೆ!

Published : May 22, 2019, 12:18 PM ISTUpdated : May 22, 2019, 12:46 PM IST
ಹುಡುಗಿ ಪಕ್ಕದಲ್ಲಿದ್ರೂ ನಿದ್ದೆ ಮಾಡೋದಾ! ಛೇ ಎಂಥ ಮಾರ್ರೆ!

ಸಾರಾಂಶ

ಬಾಲಿವುಡ್ ನಟ ಅಜಯ್ ದೇವಗನ್ ಸೆನ್ಸ್ ಆಫ್ ಹ್ಯೂಮರ್ ನಿಂದ ಸುತ್ತಮುತ್ತಲಿನವರನ್ನು ಕಾಲೆಳೆಯುತ್ತಾ ಖುಷಿಯಾಗಿಡುತ್ತಾರೆ. ಆತ್ಮೀಯ ಗೆಳತಿ ಟಬುವನ್ನು ತಮಾಷೆ ಮಾಡಿದ್ದಾರೆ. ಅಜಯ್ ತಮಾಷೆಯಿಂದ ಟಬು ತಬ್ಬಿಬ್ಬು!

ಬಾಲಿವುಡ್ ನಟ ಅಜಯ್ ದೇವಗನ್ ಆಗಾಗ ಕಾಮಿಡಿಯನ್ನ ಸಕತ್ತಾಗಿಯೇ ಮಾಡುತ್ತಾರೆ. ಸಿನಿಮಾ ಸೆಟ್ ನಲ್ಲಿ ಸಹ ನಟರನ್ನು ಆಗಾಗ ಕಾಲೆಳೆಯುತ್ತಾ ಮಜಾ ತೆಗೆದುಕೊಳ್ಳುತ್ತಾರೆ. ಅಜಯ್ ಹಾಗೂ ಟಬು ದೇ ದೇ ಪ್ಯಾರ್ ದೇ ಎನ್ನುವ ಸಿನಿಮಾ ಮಾಡುತ್ತಾರೆ. ಇವರಿಬ್ಬರ ಜೋಡಿ ತೆರೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. 

ಅಜಯ್ ತಮಾಷೆಯಾಗಿ ಟಬು ಕಾಲೆಳೆದಿದ್ದಾರೆ. 1994 ರಲ್ಲಿ ತೆರೆ ಕಂಡ ಚಿತ್ರ ವಿಜಯ್ ಪಥ್ ಸಿನಿಮಾದ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಅಜಯ್ ಬಾಯಿ ತೆರೆದು ನಿದ್ದೆ ಮಾಡುತ್ತಿದ್ದಾರೆ. ಪಕ್ಕದಲ್ಲಿ ಟಬು ಬೇಜಾರಾಗಿ ಕುಳಿತಿದ್ದಾರೆ. ಅದಕ್ಕೆ ‘ ನಾನ್ಯಾಕೆ ನಿದ್ದೆ ಹೋದೆ ಎಂಬುದು ಇನ್ನೂ ಒಗಟಾಗಿಯೇ ಇದೆ‘ ಎಂದು ಬರೆದುಕೊಂಡಿದ್ದಾರೆ. 

 

ವಿಜಯ್ ಪಥ್ ಸಿನಿಮಾದ ಆಯಿಯೇ ಆಪ್ಕ ಇಂತಜಾರ್ ಥ ಹಾಡಿನ ಶೂಟಿಂಗ್ ಸಮಯವಿದು. 

ಟಬು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಅಜಯ್ ಬಗ್ಗೆ ಮಾತನಾಡುತ್ತಾ, ನಾವಿಬ್ಬರೂ 25 ವರ್ಷಗಳಿಂದ ಸ್ನೇಹಿತರು. ನನ್ನ ಕಸಿನ್ ಸಮೀರ್ ಆರ್ಯ ಹಾಗೂ ಅಜಯ್ ಒಳ್ಳೆಯ ಸ್ನೇಹಿತರು. ಇಬ್ಬರೂ ಸೇರಿ ನನ್ನನ್ನು ಬೇಹುಗಾರಿಕೆ ಮಾಡ್ತಾ ಇದ್ರು. ಯಾರದರೂ ಹುಡುಗರು ನನ್ನ ಹಿಂದೆ ಬಿದ್ದಿದಾರಾ, ಮಾತಾಡ್ತಾರಾ ಎಂದು ಗಮನಿಸುತ್ತಿದ್ದರು. ಅಂತವರಿಗೆ ಏಟು ಕೊಡುತ್ತಿದ್ದರು. ನಾನು ಇವತ್ತು ಸಿಂಗಲ್ಲಾಗಿದೀನಿ ಅಂದ್ರೆ ಅದಕ್ಕೆ ಅಜಯ್ ಕಾರಣ‘ ಎಂದಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಕ್ಷಯ್ ಖನ್ನಾ ವೃತ್ತಿಜೀವನದ ಅತಿ ಹೆಚ್ಚು ಗಳಿಕೆಯ 5 ಚಿತ್ರಗಳು, ಎಲ್ಲ 100 ಕೋಟಿ!
Travel Movies: ನೀವು ಟ್ರಾವೆಲ್ ಪ್ರಿಯರಾಗಿದ್ರೆ ಈ ಸಿನಿಮಾಗಳನ್ನು ಮಿಸ್ ಮಾಡದೆ ನೋಡಿ