ಕೇವಲ ಸ್ಯಾರಿಯಲ್ಲ, ಇದೊಂದು ಭಾವನೆ! ಎಂಗೇಜ್ಮೆಂಟ್ ಸೀರೆಯ ಮೇಲೆ ಐಶ್ವರ್ಯಾ ಸಿಂದೋಗಿ ವಿಶೇಷವಾಗಿ ಮಾಡಿಸಿದ್ದೇನು?

Published : Nov 24, 2026, 05:59 PM IST
Aishwarya Sindhogi Shishir Shastry Engagement

ಸಾರಾಂಶ

ಕನ್ನಡ ಕಿರುತೆರೆಯ ಸ್ಟಾರ್ ಜೋಡಿಗಳಾದ ಐಶ್ವರ್ಯ ಸಿಂಧೋಗಿ ಹಾಗೂ ಶಿಶಿರ್ ಶಾಸ್ತ್ರಿ ಅವರ ನಿಶ್ಚಿತಾರ್ಥ ನೆರವೇರಿದೆ. ಬೆನ್ನಲ್ಲೇ ಮಾಧ್ಯಮಗಳ ಜೊತೆ ಮಾತನ್ನಾಡಿರುವ ಅವರು, ಅಭಿಮಾನಿಗಳಿಗಾಗಿ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. 'ಐಶಿರ್' ಎಂಬ ಟ್ಯಾಗ್‌ಲೈನ್ ಸಿಕ್ರೇಟ್ ಕೂಡ ರಿವೀಲ್ ಮಾಡಿದ್ದಾರೆ.

ನವೆಂಬರ್ 12 ರಂದು ನಟಿ ಐಶ್ವರ್ಯ ಸಿಂಧೋಗಿ ಹಾಗೂ ನಟ ಶಿಶಿರ್ ಶಾಸ್ತ್ರಿಯ ನಿಶ್ಚಿತಾರ್ಥ ನೆರವೇರಿದೆ. ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಟಾರ್ ಜೋಡಿ ಮುಂದಿನ ಫೆಬ್ರವರಿಯಲ್ಲಿ ಮದುವೆ ಮಾಡಿಕೊಳ್ಳೋದಾಗಿ ಘೋಷಣೆ ಮಾಡಿದ್ದಾರೆ.

ಇನ್ನು ಇವರ ಎಂಗೇಜ್ಮೆಂಟ್ ಶಿವನ ಥೀಮ್‌ನಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿದೆ. ಇಬ್ಬರು ಶಿವನ ಭಕ್ತರಾಗಿದ್ದು, ಈ ಹಿನ್ನೆಲೆಯಲ್ಲಿ ಶಿವನ ಥೀಮ್‌ನಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎಂಗೇಜ್ಮೆಂಟ್ ಬಳಿಕ ಸುದ್ದಿಗೋಷ್ಟಿಯಲ್ಲಿ ಅಭಿಮಾನಿಗಳಿಗೆ ಗೊತ್ತಿರುವ ವಿಚಾರಗಳನ್ನ ಈ ಜೋಡಿ ರಿವೀಲ್ ಮಾಡಿತು.

ಏನಂದ್ರು ಲವ್ ಬರ್ಡ್ಸ್‌?

ಐಶ್ವರ್ಯ ಸಿಂದೋಗಿ ಮಾತನ್ನಾಡಿ.. ನಾವಿಬ್ಬರು ಶಿವನ ಪರಮ ಭಕ್ತರು. ನಮ್ಮ ಜೀವನದಲ್ಲಿ ಏನೇ ಒಳ್ಳೆಯದಾದರೂ ಶಿವ ಕೊಟ್ಟಿರೋದು ಎಂದು ನಂಬುತ್ತೇವೆ. ಅದೇ ರೀತಿ ಕೆಟ್ಟದಾದರೂ ಆ ದೇವರೇ ನಮಗೆ ಪಾಠ ಕಲಿಸುತ್ತಿದ್ದಾನೆ ಎಂದು ನಂಬಿದ್ದೇವೆ. ನಾವೀಗ ಬದುಕಿನ ಹೊಸ ಅಧ್ಯಾಯ ಆರಂಭಿಸುತ್ತಿದ್ದೇವೆ. ನಮಗೆ ಶಿವ ಪಾರ್ವತಿಯರ ಆರ್ಶೀವಾದ ಬೇಕಿತ್ತು. ಅದೇ ಕಾರಣಕ್ಕೆ ನಾವು ಎಂಟ್ರಿ ಡೆಕೋರ್‌ನಿಂದ ಹಿಡಿದು ಬ್ಯಾಕ್‌ಸ್ಟೇಜ್‌ವರೆಗೆ ಪ್ರತಿಯೊಂದನ್ನೂ ಶಿವನ ಥೀಮ್‌ನಲ್ಲಿಯೇ ಅಲಂಕಾರ ಮಾಡಿಸಿದ್ದೇವು.

ಶಿಶಿರ್ ಮಾತನ್ನಾಡಿ.. ತಮ್ಮ ದೇಹದ ಮೇಲೆ ಶಿವ ಮತ್ತು ಡಮರು ಟ್ಯಾಟೂಗಳಿವೆ. ಶಿವನೆಂದರೆ ಭಕ್ತಿ, ಭಯ ಹಾಗೂ ಅಪಾರ ಪ್ರೀತಿ. ಇದೇ ವಿಚಾರವಾಗಿ ತಾವಿಬ್ಬರೂ ಬಹಳ ಆಳವಾಗಿ ಕನೆಕ್ಟ್ ಆಗಿದ್ದೇವೆ ಎಂದರು.

ಇನ್ನು ಮದುವೆ ನಿಶ್ಚಿತಾರ್ಥದ ವೇಳೆ ಧರಿಸಿದ್ದ ಡ್ರೆಸ್ ಬಗ್ಗೆ ಮಾತನ್ನಾಡಿ.. ಶಿಶಿರ್ ಅವರ ಡ್ರೆಸ್‌ನಲ್ಲಿ ತ್ರಿಶೂಲ ಮತ್ತು ಡಮರು ವಿನ್ಯಾಸಗಳಿವೆ. ಇನ್ನು ಐಶ್ವರ್ಯಾ ಸಿಂದೋಗಿ ತಮ್ಮ ಎಂಗೇಜ್ಮೆಂಟ್ ಸೀರೆಯ ಬಗ್ಗೆ ವಿವರಿಸಿದರು. ಸೀರೆಯಲ್ಲಿ ಶಿವ, ಚಂದ್ರ ಮತ್ತು ಡಮರು ಮೋಟಿಫ್‌ಗಳ ಎಂಬ್ರಾಯ್ಡರಿ ಮಾಡಲಾಗಿದೆ. ಹಾಗೂ ಬ್ಲೌಸ್ ತೋಳಿನಲ್ಲೂ ಅದೇ ವಿನ್ಯಾಸವನ್ನು ಹಾಕಿಸಲಾಗಿದೆ ಎಂದರು. ಇದರೊಂದಿಗೆ ಸೀರೆಯ ಮೇಲೆ ಶಿವ-ಪಾರ್ವತಿಯರ ಕೈಗಳ ವಿನ್ಯಾಸವನ್ನು ಬಹಳ ವಿಶೇಷವಾಗಿ ಎಂಬ್ರಾಯ್ಡರಿ ಮಾಡಿಸಿರೋದಾಗಿ ತೋರಿಸಿದರು.

‘ಐಶಿರ್’ ವಿಶೇಷತೆ!

ಅಷ್ಟೇ ಅಲ್ಲ ಸೀರೆಯ ಮೇಲೆ 'ಐಶಿರ್' ಎಂಬ ಲೋಗೋ ಹಾಕಿಸಲಾಗಿತ್ತು. ಐಶಿರ್ ಎಂದು ಅಭಿಮಾನಿಗಳು ಪ್ರೀತಿಯಿಂದ ಇಬ್ಬರಿಗೂ ಬಿರುದು ನೀಡಿದ್ದಾರೆ ಎಂಬುದನ್ನು ಸ್ಮರಿಸಿದ ಜೋಡಿ.. ಬಿಗ್ ಬಾಸ್ ಮನೆಯಿಂದ ಹೊರಬಂದಾಗ ಅನೇಕ ಟೈಟಲ್‌ಗಳು ಸಿಗುತ್ತವೆ. ಆದರೆ ಎರಡು ವರ್ಷಗಳಾದರೂ ಅಭಿಮಾನಿಗಳು ಈ ಹೆಸರನ್ನು ಅಷ್ಟೇ ಪ್ರೀತಿಯಿಂದ ಕರೆದುಕೊಂಡು ಬರುತ್ತಿದ್ದಾರೆ. ಬಿಗ್ ಬಾಸ್ ಒಳಗಿದ್ದಾಗಿನಿಂದಲೂ ಹಲವು ಫ್ಯಾನ್ ಪೇಜ್‌ಗಳಿದ್ದವು. ಅಭಿಮಾನಿಗಳು ನಮ್ಮನ್ನು ಐಶ್ವರ್ಯಾ ಅಥವಾ ಶಿಶಿರ್ ಎಂದು ಪ್ರತ್ಯೇಕವಾಗಿ ಕರೆಯದೆ ಇಬ್ಬರನ್ನೂ ಸೇರಿಸಿ ‘ಐಶಿರ್’ ಎಂದೇ ಕರೆಯುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಏನೇ ನೆಗೆಟಿವ್ ವಿಚಾರಗಳು ಬಂದರೂ ಅವರು ನಮ್ಮ ಪರವಾಗಿ ನಿಂತು ಧ್ವನಿ ಎತ್ತುತ್ತಾರೆ. ಹಾಗಾಗಿ ಅಭಿಮಾನಿಗಳು ಕೊಟ್ಟ ಹೆಸರನ್ನೇ ನಾವು ಹೆಮ್ಮೆಯಿಂದ ಮುಂದುವರಿಸಿದ್ದೇವೆ ಎಂದು ತಿಳಿಸಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಹೆಲ್ಲಲ್ಲಲ್ಲೋ'.. ಇಷ್ಟವಿಲ್ಲದ ಕೆಲಸವನ್ನು ಯಾವ ಕಾರಣಕ್ಕೂ ಮಾಡುವುದಿಲ್ಲ, ಮಿಕ್ಕಿದ್ದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ
'ಕೊಟ್ಟ ಮನೆಗೂ, ಹುಟ್ಟಿದ ಮನೆಗೂ ಕೀರ್ತಿಯ ಕಳಶವಾಗಿರಿ' – ಅಭಿಮಾನಿಗೆ ಅಣ್ಣಾವ್ರು ಬರೆದ ಪತ್ರ