
ನವದೆಹಲಿ (ನ.02): ಬಾಲಿವುಡ್'ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರೋ ಪದ್ಮಾವತಿ ಸಿನಿಮಾಗೆ ವಿಘ್ನ ಎದುರಾಗಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ ಪದ್ಮಾವತಿ ಬಹುನಿರೀಕ್ಷೆ ಮೂಡಿಸಿದೆ. ಗುಜರಾತ್ ಸರ್ಕಾರ ಪದ್ಮಾವತಿ ಸಿನಿಮಾ ರಿಲೀಸ್ ಮಾಡಲು ತಡೆ ಒಡ್ಡಿದೆ.
ಬಿಜೆಪಿ ಪಕ್ಷದ ನಾಯಕರು ಮೊದಲು ಹಿಂದೂ ಸಮಾಜ ಮತ್ತು ಕ್ಷತ್ರಿಯ ಸಮಾಜದ ಜನರಿಗೆ ಈ ಸಿನಿಮಾವನ್ನ ತೋರಿಸಬೇಕು ಅಂತಾ ಒತ್ತಾಯಿಸಿದ್ದಾರೆ. ಇನ್ನೊಂದು ಕಡೆ ಗುಜರಾತ್ ಮಾಜಿ ಮುಖ್ಯಮಂತ್ರಿ ಶಂಕರ್ ಸಿನ್ಹಾ ವಘೇಲಾ ಕೂಡ ಪದ್ಮಾವತಿ ಸಿನಿಮಾ ರಿಲೀಸ್ ಮಾಡೋದಿಕ್ಕೆ ಬಿಡೋಲ್ಲ ಅಂತಾ ಹೇಳಿದ್ದಾರೆ. ಡಿಸೆಂಬರ್ 1ಕ್ಕೆ ತೆರೆ ಕಾಣಲು ರೆಡಿಯಾಗಿರೋ ಪದ್ಮಾವತಿ ಸಿನಿಮಾಕ್ಕೆ ಈಗ ಬಿಜೆಪಿಯೆ ಅಡ್ಡಗಾಲು ಹಾಕುತ್ತಿದೆ. ಪದ್ಮಾವತಿಯನ್ನ ನೋಡಿ ಕಣ್ತುಂಬಿಕೊಳ್ಳಲು ಕಾಯುತ್ತಿರೋ ಕೋಟ್ಯಾಂತರ ಅಭಿಮಾನಿಗಳಿಗೆ ಇದು ನಿರಾಸೆ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.