ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡ ಕಡ್ಡಾಯ ಆಗಬೇಕು ಎಂದ ಸ್ಯಾಂಡಲ್'ವುಡ್ ನಟ

By Suvarna Web DeskFirst Published Nov 2, 2017, 6:58 PM IST
Highlights

ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡ ಕಡ್ಡಾಯ ಆಗಬೇಕು ಎಂದ ಸ್ಯಾಂಡಲ್'ವುಡ್ ನಟ

ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡ ಕಡ್ಡಾಯ ಆಗಬೇಕು ಎಂದಿರುವ  ಸ್ಯಾಂಡಲ್'ವುಡ್ ನಟ ವಶಿಷ್ಟ ಸಿಂಹ ಅವರ ಕೆಲವು ಮಾತುಗಳು

೧. ಕನ್ನಡದ ಮೇಲಿನ ಬೂಟಾಟಿಕೆಯ ಅಭಿಮಾನ ದೂರವಾಗಿಬೇಕು. ನಿಜವಾದ ಅಭಿಮಾನ ತೋರುವಂತಹ ವಾತಾವರಣ ಹೆಚ್ಚಾಗಬೇಕು.

೨. ಉದ್ಯೋಗ ಕ್ಷೇತ್ರದಲ್ಲಿ ಕನ್ನಡ ಕಡ್ಡಾಯ ಆಗಬೇಕು. ಕನ್ನಡವನ್ನೇ ಪ್ರಧಾನವಾಗಿ ಕಲಿತರೆ ಸರ್ಕಾರಿ ಉದ್ಯೋಗ ಎನ್ನುವ ಕಾನೂನು ಬರಬೇಕು.

೩. ನಮ್ಮದೇ ನೆಲದಲ್ಲಿ ಸ್ಥಾಪನೆ ಆಗುವ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡ ಕಡ್ಡಾಯ ಆಗಬೇಕು. ಐಟಿ, ಬಿಟಿ ಇತ್ಯಾದಿ ಕ್ಷೇತ್ರದಲ್ಲಿ ಕನ್ನಡದಲ್ಲಿ ವಾತಾವರಣ ನಿರ್ಮಾಣವಾಗಬೇಕು.

೪. ಕನ್ನಡಿಗರು ತುಂಬಾ ಉದಾರವಾದಿಗಳು ಎನ್ನುವ ಮನಸ್ಥಿತಿಯಿಂದಲೇ ಇವತ್ತು ಕನ್ನಡ ಪ್ರಗತಿಗೆ ದೊಡ್ಡ ತೊಡಕಾಗಿದೆ. ನಮ್ಮದೇ ನೆಲದಲ್ಲಿ ಸಿಗುವ ಪರ ರಾಜ್ಯಗಳ ಜನರ ಜತೆಗೆ ನಾವು ಅವರದೇ ಭಾಷೆಯಲ್ಲಿ ಮಾತನಾಡುವುದು ನಿಲ್ಲಿಸಿ, ನಮ್ಮ ಭಾಷೆ ಅವರಿಗೆ ಪರಿಚಯವಾಗುವಂತೆ ಮಾಡಬೇಕು.

೫. ಅಂಗಡಿ, ಮುಂಗಟ್ಟುಗಳು, ವಾಣಿಜ್ಯ ಸಂಕೀರ್ಣಗಳಲ್ಲಿ ಕನ್ನಡ ನಾಮ ಫಲಕ ಕಡ್ಡಾಯ ಅಂತ ಹೇಳಿದರೂ ಈಗಲೂ ಅದು ಎಲ್ಲೂ ಕಾಣುತ್ತಿಲ್ಲ. ಅದನ್ನು ಕಡ್ಡಾಯ ಮಾಡಬೇಕು

click me!