ಮೈ ತುಂಬ ಹಚ್ಚೆ ಹಾಕಿಸಿಕೊಂಡ ಕನ್ನಡ ನಟಿ

Published : Nov 02, 2017, 06:35 PM ISTUpdated : Apr 11, 2018, 12:37 PM IST
ಮೈ ತುಂಬ ಹಚ್ಚೆ ಹಾಕಿಸಿಕೊಂಡ ಕನ್ನಡ ನಟಿ

ಸಾರಾಂಶ

ಕಲಾವಿದೆ ಚಂದನಾ ಆರಾಧ್ಯ ಈ ಚಿಟ್ಟೆ ಬಿಡಿಸಿರುವ ಕಲೆಗಾರ್ತಿ. ಸುಮಾರು ನಾಲ್ಕು ಗಂಟೆಗಳ ಕಾಲ ಸುಮ್ಮನೆ ಕೂತು ಚಿಟ್ಟೆಯನ್ನು ತನ್ನ ಮೈಯಲ್ಲಿ ಆವಾಹಿಸಿಕೊಂಡಿದ್ದಾರೆ

ಪಾತರಗಿತ್ತಿ ಪಕ್ಕಾ, ನೋಡಿದ್ಯೇನೆ ಅಕ್ಕಾ! ಸದ್ಯ, ಗಾಂಧಿನಗರದಲ್ಲಿ ಈ ಹಾಡು ಹಾಡುತ್ತಿರುವುದು ಹರ್ಷಿಕಾ ಪೂಣಚ್ಚ. ಯಾಕಂದ್ರೆ, ಬಣ್ಣದ ಚಿಟ್ಟೆ ಅವರ ಬೆನ್ನ ಮೇಲೆ ಕೂತಿದೆ. ಚಿಟ್ಟೆಯಂತಹ ಚೆಲುವೆ ಹರ್ಷಿಕಾ ಬೆನ್ನಲ್ಲೀಗ ಚಿಟ್ಟೆಯದೇ ಕಾರುಬಾರು. ಹಾಗಾಗಿ ಸಿನಿರಸಿಕರ ಕಣ್ಣು ಅವರ ಬಯಲು ಬೆನ್ನಿನತ್ತ ತಿರುಗಿದೆ. ಇಷ್ಟಕ್ಕೂ ಹರ್ಷಿಕಾ ಬೆನ್ನಿಗೆ ಪಾತರಗಿತ್ತಿ ಅಂಟಿಸಿದ್ದು ಯಾರು? ಯಾಕೆ? ಅದರ ಹಿಂದೊಂದು ಕತೆ ಇದೆ. ಎಂ.ಎಲ್. ಪ್ರಸನ್ನ ನಿರ್ದೇಶನದ ‘ಚಿಟ್ಟೆ’ ಚಿತ್ರದಲ್ಲಿ ಹರ್ಷಿಕಾ ನಾಯಕಿ.

ನಾಯಕ ಯಶಸ್ ಸೂರ್ಯ. ಚಿತ್ರದಲ್ಲಿ ಯಶಸ್‌ಗೆ ಒಬ್ಬ ಕಲಾವಿದನ ಪಾತ್ರ. ಅವನು ಬಿಡಿಸುವ ಚಿತ್ರಗಳು ಅವಳನ್ನು ಪುಳಕಿತಳನ್ನಾಗಿಸುತ್ತವೆ. ಹಾಗಾಗಿ ಒಂದು ರೊಮ್ಯಾಂಟಿಕ್ ಸನ್ನಿವೇಶ ಎದುರಾಗುತ್ತದೆ.ಅದೇ ಬೆನ್ನಲ್ಲಿ ಚಿಟ್ಟೆಯ ಚಿತ್ರ ಬಿಡಿಸುವ ಸನ್ನಿವೇಶ. ಅವನು ಕುಂಚ ಕೈಗೆತ್ತಿಕೊಳ್ಳುತ್ತಾನೆ. ಅವಳು ಬೆರಗಾಗಿ ಮಂತ್ರ ಮುಗ್ಧಳಾಗಿ ನಿಲ್ಲುತ್ತಾಳೆ. ಅವನು ತನ್ಮಯತೆಯಿಂದ ಚಿಟ್ಟೆ ಬಿಡಿಸುತ್ತಾ ಹೋಗುತ್ತಾನೆ. ಅವಳ ಬೆನ್ನು ನಾಚಿ ಕೆಂಪಗಾಗಿ ಕಡೆಗೆ ಚಿಟ್ಟೆಯಾಗುತ್ತದೆ. ಅಂದಹಾಗೆ ಇದು ‘ಚಿಟ್ಟೆ’ ಚಿತ್ರದಲ್ಲಿ ಬರುವ ಸನ್ನಿವೇಶ. ಅದನ್ನು ಇತ್ತೀಚೆಗೆ ಚಿತ್ರೀಕರಿಸಲಾಗಿದೆ. ಕಲಾವಿದೆ ಚಂದನಾ ಆರಾಧ್ಯ ಈ ಚಿಟ್ಟೆ ಬಿಡಿಸಿರುವ ಕಲೆಗಾರ್ತಿ. ಸುಮಾರು ನಾಲ್ಕು ಗಂಟೆಗಳ ಕಾಲ

ಸುಮ್ಮನೆ ಕೂತು ಚಿಟ್ಟೆಯನ್ನು ತನ್ನ ಮೈಯಲ್ಲಿ ಆವಾಹಿಸಿಕೊಂಡಿದ್ದು ಹರ್ಷಿಕಾ ಪೂಣಚ್ಚ. ಅವರ ಕಾಳ್ಮೆಯನ್ನು ನಿಜಕ್ಕೂ ಮೆಚ್ಚಬೇಕು. ಇಂಟರೆಸ್ಟಿಂಗ್ ಅಂದ್ರೆ ಹರ್ಷಿಕಾ ಪೂಣಚ್ಚ ಇಲ್ಲಿ ಎರಡು ಶೇಡ್'ಗಳಿರುವ ವಿಭಿನ್ನವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರಂತೆ. ಸದ್ಯ ಚಿತ್ರದ ಚಿತ್ರೀಕರಣವೀಗ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಎರಡು ಹಾಡುಗಳ ಚಿತ್ರೀಕರಣ ಬಾಕಿಯಿದೆ.ಮಧ್ಯೆಯೇ ಪ್ರಮೋಷನ್ ಕೆಲಸಕ್ಕೆ ಚಾಲನೆ ಸಿಕ್ಕಿದೆ. ಪ್ರಚಾರಕ್ಕಂತಲೇ ಚಿತ್ರದ ಫಸ್ಟ್ ಲುಕ್ ಲಾಂಚ್ ಆಗಿದೆ. ಅದೇ ಈಗ ಸಖತ್ ಸೌಂಡ್ ಮಾಡುತ್ತಿರುವುದು. ಎಂ.ಎಲ್. ಪ್ರಸನ್ನ ನಿರ್ದೇಶನದ ಚಿತ್ರವಿದು.

ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಗೀತ ಸಂಯೋಜನೆ ಮಾಡಿದ್ದಲ್ಲದೆ, ನಿರ್ಮಾಣದ ಜವಾಬ್ದಾರಿಯೂ ಅವರದ್ದೇ. ಶ್ರೀನಿವಾಸರಾವ್ ಈ ಸಾಹಕ್ಕೆ ಸಾಥ್ ನೀಡಿದ್ದಾರೆ. ಈ ಚಿತ್ರದ ಬಗ್ಗೆ ಪ್ರಸನ್ನ ಹೇಳುವುದಿಷ್ಟು: ‘ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ತಪ್ಪು ಮಾಡುವುದು ಸಹಜ. ಕೆಲವು ತಪ್ಪುಗಳು ತಿಳಿಯದೆ ಆಗುತ್ತವೆ. ಮತ್ತೆ ಕೆಲವು ಉದ್ದೇಶ ಪೂರ್ವಕವಾಗಿ ನಡೆಯುತ್ತವೆ. ಆದ್ರೆ ಆ ತಪ್ಪುಗಳು ಸೃಷ್ಟಿಸುವ ಅನಾಹುತ ದೊಡ್ಡದು. ಅಂತಹ ತಪ್ಪುಗಳಿಂದ ಏನೆಲ್ಲ ಆಗುತ್ತೆ ಎನ್ನುವ ಕಥೆಯೊಂದನ್ನು ಹೇಳುವುದರ ಮೂಲಕವೇ ಒಬ್ಬ ಚಿತ್ರಕಾರನ ಬದುಕಿನ ಕಥೆ ಹೇಳಲಿದೆ ‘ಚಿಟ್ಟೆ’ ಚಿತ್ರ’.

ಈ ಚಿತ್ರದಲ್ಲಿ ನಾಗೇಶ್ ಕಾರ್ತಿಕ್, ‘ಕುಲವಧು’ ಧಾರಾವಾಹಿ ಖ್ಯಾತಿಯ ದೀಪಿಕಾ ಹಾಗೂ ನಿರ್ದೇಶಕ ಬಿ.ಎಂ. ಗಿರಿರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕನ್ನಡ ಇಂಡಸ್ಟ್ರಿಗೆ ಪ್ರಾಣ ಕೊಟ್ಟರೂ ಚೆನ್ನಾಗಿ ನೋಡಿಕೊಂಡಿಲ್ಲ: ಕಣ್ಣೀರು ಹಾಕಿದ ತುಪ್ಪದ ಬೆಡಗಿ ರಾಗಿಣಿ ಹೇಳಿದ್ದೇನು?
Bigg Bossನಲ್ಲಿ 10 ಪಟ್ಟು ಹೆಚ್ಚು ಸಂಭಾವನೆ ಸಿಕ್ಕಿದ್ದು ನಿಜ: ರಜತ್, ಚೈತ್ರಾ​ ಕುಂದಾಪುರ ರಿವೀಲ್​ ಮಾಡಿದ್ದೇನು?