ಆದರ್ಶ್ ಈಶ್ವರಪ್ಪ ನಿರ್ದೇಶನದ 'ಭಿನ್ನ'ಗೆ ಝೀ5 ಸಾಥ್!

By Web DeskFirst Published Oct 3, 2019, 10:41 AM IST
Highlights

ಒಂದು ಕಡೆ ಎಲ್ಲಾ ಭಾಷೆಯಲ್ಲೂ ಸಿನಿಮಾ ರಿಲೀಸ್‌ ಮಾಡುವ ಟ್ರೆಂಡ್‌ ಚಾಲ್ತಿಯಲ್ಲಿದ್ದರೆ ಇನ್ನೊಂದು ಕಡೆ ಅದಕ್ಕೆ ಭಿನ್ನವಾದ ಪ್ರಯೋಗ ನಡೆಯುತ್ತಿದೆ. ವೆಬ್‌ಚಾನೆಲ್‌ನಲ್ಲಿ ಸಿನಿಮಾ ರಿಲೀಸ್‌ ಮಾಡುವ ವಿಶಿಷ್ಟಪ್ರಯೋಗ ಇದು. ಈ ಹೊಸ ಪದ್ಧತಿ ಶುರುಮಾಡಿರುವುದು ಭಿನ್ನ ಚಿತ್ರತಂಡ.

ಆದರ್ಶ್ ಈಶ್ವರಪ್ಪ ನಿರ್ದೇಶನದ, ಗಣೇಶ್‌ ಪಾಪಣ್ಣ ನಿರ್ಮಾಣದ ‘ಭಿನ್ನ’ ಸಿನಿಮಾ ಅಕ್ಟೋಬರ್‌ 8ರಂದು ನೇರವಾಗಿ ಝೀ5 ಆ್ಯಪ್‌ನಲ್ಲಿ ಬಿಡುಗಡೆಯಾಗಲಿದೆ. ಈ ಮೂಲಕ ಕನ್ನಡ ಸಿನಿಮಾ ಪ್ರಿಯರಿಗೆ ಕುತೂಹಲ ಮೂಡಿಸಿದೆ.

ಇಲ್ಲೂ ಜನ ಮೆಚ್ಚುಗೆ ಇದೆ

ಸಿನಿಮಾ ಚಿತ್ರಮಂದಿರಕ್ಕೆ ಬಂದು, ದೊಡ್ಡ ಸದ್ದು ಮಾಡಿ, ಸಂಭ್ರಮಿಸುವುದು ಆರಂಭದಿಂದಲೂ ಬಂದ ಸಂಪ್ರಾದಾಯ. ಆ ಮೂಲಕವೇ ನಿರ್ದೇಶಕರು, ನಟ-ನಟಿಯರು ಜನರ ನಡುವೆ ಗುರುತಿಸಿಕೊಳ್ಳುವುದಕ್ಕೂ ಸಾಧ್ಯ ಎನ್ನುವ ನಂಬಿಕೆ ಆರಂಭದಿಂದಲೂ ಇದೆ. ಈಗ ಡಿಜಿಟಲ್‌ ರಿಲೀಸ್‌ ಎನ್ನುವುದು ಇಂತಹ ಸಂಭ್ರಮ, ಜನಪ್ರಿಯತೆಗೆ ಧಕ್ಕೆ ತರುತ್ತಾ ಎನ್ನುವ ಪ್ರಶ್ನೆಯೂ ಇದೆ. ಆದರೆ, ತಮಗೆ ಅಂತಹ ಯಾವುದೇ ಆತಂಕ ಇಲ್ಲ ಎನ್ನುತ್ತಾರೆ ನಿರ್ದೇಶಕ ಆದಶ್‌ರ್‍ ಈಶ್ವರಪ್ಪ.

ಮಧ್ಯರಾತ್ರಿ ಶಾರೂಕ್ ನೆನೆಸಿಕೊಂಡು ‘ನನಗೆ ಕಾಲ್ ಮಾಡಬೇಕಿತ್ತು’ ಎಂದು ಟ್ವೀಟ್ ಮಾಡಿದ ದೀಪಿಕಾ!

‘ಜನರ ಮನಸ್ಥಿತಿಗೆ ತಕ್ಕಂತೆ ಪರಿಸ್ಥಿತಿಯೂ ಬದಲಾಗಿದೆ. ಹಾಗೆ ನೋಡಿದರೆ, ನನ್ನ ಹಿಂದಿನ ಚಿತ್ರ ಶುದ್ಧಿ ನೋಡಿ ಮೆಚ್ಚಿಕೊಂಡವರಲ್ಲಿ ಡಿಜಿಟಲ್‌ ವೀಕ್ಷಕರೇ ಹೆಚ್ಚಿದ್ದರು. ಅವರೆಲ್ಲ ಸೋಷಲ್‌ ಮೀಡಿಯಾದ ಮೂಲಕವೇ ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಂಸಿದರು. ಕಾಲ ಬದಲಾದಂತೆ ನಾವು ಕೂಡ ಬದಲಾಗಲೇಬೇಕು’ ಎನ್ನುತ್ತಾರೆ ಆದರ್ಶ್‌

ಬದಲಾದ ತಂತ್ರಜ್ಞಾನಕ್ಕೆ ಪೂರಕವಾಗಿ ಸಿನಿಮಾ ನೋಡುವ ಪರಿಪಾಠವೂ ಬದಲಾಗಿದೆ. ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌ ಇತ್ಯಾದಿ ವೆಬ್‌ಚಾನೆಲ್‌ಗಳು ಈಗ ಹೊಚ್ಚ ಹೊಸ ಸಿನಿಮಾಗಳನ್ನೇ ಡಿಜಿಟಲ್‌ ವೀಕ್ಷಕರಿಗೆ ನೀಡುತ್ತಿವೆ. ಹೀಗಾಗಿ ಚಿತ್ರಮಂದಿರಗಳಿಗಿಂತ ಇಲ್ಲಿ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಅದೇ ಪ್ರಕಾರ ಝೀ5 ಕೂಡ ತನ್ನದೇ ಬ್ರಾಂಡ್‌ ಮೂಲಕ ಸಿನಿಮಾ ವೀಕ್ಷಕರಿಗೆ ಹತ್ತಿರವಾಗಿದೆ. ಇದನ್ನೇ ವೇದಿಕೆಯಾಗಿಸಿಕೊಂಡು ನಾವು ಯಾಕೆ ಸಿನಿಮಾ ರಿಲೀಸ್‌ ಮಾಡಬಾರದು ಎನ್ನುವ ಆಲೋಚನೆಯಲ್ಲಿದ್ದಾಗ ಝೀ5 ನಮ್ಮ ಪ್ರಯೋಗಕ್ಕೆ ಸಾಥ್‌ ನೀಡಿತು. ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತ ಪ್ರೇಕ್ಷಕರು ನಮ್ಮ ಸಿನಿಮಾ ನೋಡುವ ಅವಕಾಶ ಇಲ್ಲಿ ಲಭ್ಯವಾಗುತ್ತಿದೆ. - ಗಣೇಶ್‌ ಪಾಪಣ್ಣ, ನಿರ್ಮಾಪಕ

 

click me!