ನಮ್ಮ ಕನ್ನಡ ಭಾಷೆ, ಕರ್ನಾಟಕದ ಬಗ್ಗೆ ಯಾರೇ ಏನೇ ಹೇಳಿದ್ರು ತಪ್ಪಿದ್ದಲ್ಲಿ ಖಂಡಿತವಾಗಿ ತಗೊಳೋಕೆ ಆಗೊಲ್ಲ: ನಟಿ ಸುಧಾರಾಣಿ

Published : Jun 01, 2025, 03:59 PM IST
Sudharani Kamal Haasan

ಸಾರಾಂಶ

ಕಮಲ್ ಹಾಸನ್ ವಿವಾದದ ವಿಚಾರಕ್ಕೆ ನಟಿ ಸುಧಾರಣಿ ಪ್ರತಿಕ್ರಿಯೆ ನೀಡಿದ್ದಾರೆ. 'ನಮ್ಮ ಕನ್ನಡ, ಕರ್ನಾಟಕ, ಭಾಷೆ ಬಗ್ಗೆ ಯಾರೇ ಏನೇ ಹೇಳಿದ್ರು ತಪ್ಪಿದ್ದಲ್ಲಿ ಖಂಡಿತವಾಗಿ ತಗೊಳೋಕೆ ಆಗೊಲ್ಲ. ನಾವು ಎಲ್ಲರೂ ಒಟ್ಟಿಗೆ ನಿಂತೇ ನಿಲ್ತಿವಿ. ಆದ್ರೆ ಆವತ್ತು ಅಲ್ಲಿ ಏನು ನಡಿತು ಅಂತಾ ನನಗೆ ಗೊತ್ತಿಲ್ಲ…

ತಮಿಳು ನಟ ಕಮಲ್ ಹಾಸನ್ (Kamal Haasan) ಅವರು ಕನ್ನಡ ಭಾಷೆಯ ಬಗ್ಗೆ ಅವಹೇಳನ ಮಾಡಿರುವ ಹಿನ್ನೆಲೆಯಲ್ಲಿ ವಿವಾದ ಆಗಿರೋದು ಬಹುತೇಕ ಎಲ್ಲರಿಗೂ ಗೊತ್ತಿದೆ. ಈ ಹಿನ್ನೆಲೆಯಲ್ಲಿ ಅಚ್ಚಗನ್ನಡದ ನಟಿ ಸುಧಾರಾಣಿ (Sudha Rani) ಅವರು ಕಮಲ್ ಹಾಸನ್ ವಿವಾದದ ಬಗ್ಗೆ ಮಾತನ್ನಾಡಿದ್ದಾರೆ. ಕನ್ನಡಿಗರು ಈ ವಿಷಯದಲ್ಲಿ ಒಗ್ಗಟ್ಟಾಗಿದ್ದು ಹೋರಾಡಬೇಕು ಎಂದಿದ್ದಾರೆ.

ಕಮಲ್ ಹಾಸನ್ ವಿವಾದದ ವಿಚಾರಕ್ಕೆ ನಟಿ ಸುಧಾರಣಿ ಪ್ರತಿಕ್ರಿಯೆ ನೀಡಿದ್ದಾರೆ. 'ನಮ್ಮ ಕನ್ನಡ, ಕರ್ನಾಟಕ, ಭಾಷೆ ಬಗ್ಗೆ ಯಾರೇ ಏನೇ ಹೇಳಿದ್ರು ತಪ್ಪಿದ್ದಲ್ಲಿ ಖಂಡಿತವಾಗಿ ತಗೊಳೋಕೆ ಆಗೊಲ್ಲ. ನಾವು ಎಲ್ಲರೂ ಒಟ್ಟಿಗೆ ನಿಂತೇ ನಿಲ್ತಿವಿ. ಆದ್ರೆ ಆವತ್ತು ಅಲ್ಲಿ ಏನು ನಡಿತು ಅಂತಾ ನನಗೆ ಗೊತ್ತಿಲ್ಲ. ನಮ್ಮ ಕನ್ನಡ ಭಾಷೆಯ ಬಗ್ಗೆ ಡಾಕ್ಯುಮೆಂಟ್ ಇದೆ ಅದನ್ನ ತೋರಿಸಿ ತಿಳಿಹೇಳಬೇಕು. ಅಲ್ಲಿ ಏನಾಗಿದೆ ಅಂತಾ ನಿಜವಾಗಿಯೂ ನನಗೆ ಗೊತ್ತಿಲ್ಲ, ದಯವಿಟ್ಟು ಆ ಬಗ್ಗೆ ನಾನು ಮಾತಾಡಲ್ಲ..' ಎಂದಿದ್ದಾರೆ.

ಕನ್ನಡಕ್ಕೆ ಅವಮಾನ ಮಾಡಿದ್ದ ತಮಿಳು ನಟ ಕಮಲ್ ಹಾಸನ್ (Kamal Haasan) , ಮತ್ತೆ ತಾವು 'ಕ್ಷಮೆ ಕೇಳೋದಿಲ್ಲ' ಎಂದಿದ್ದಾರೆ. ಅಷ್ಟೇ ಅಲ್ಲ, ನಾನೇನೂ ತಪ್ಪು ಮಾಡಿಲ್ಲ, ಆದರೆ ನ್ಯಾಯದ ಮೇಲೆ ನಂಬಿಕೆ ಇದೆ, ನಾನ್ ಹೇಳಿದ್ದೇ ಸರಿ ಎಂದಿದ್ದಾರೆ ನಟ ಕಮಲ್ ಹಾಸನ್. ನಟ ಕಮಲ್ ಹಾಸನ್ ಕನ್ನಡಪರ ಹೋರಾಟಗಾರರ ಪ್ರತಿಭಟನೆಗೆ ಬಗ್ಗದೇ ಮತ್ತೆ ತಮ್ಮ ಮೊಂಡಾಟ ಮುಂದುವರಿಸಿದ್ದಾರೆ. ತಮ್ಮ ಮೊದಲಿನ ಹೇಳಿಕೆಗೇ ಸ್ಟಿಕ್ ಆಗಿರುವ ನಟ ಕಮಲ್ ಹಾಸನ್ ಅವರು ಇದೀಗ ಇನ್ನೂ ಹೆಚ್ಚು ತಮ್ಮ ಮಾತಿಗೆ ಅಂಟಿಕೊಂಡಿದ್ದು, ತಮ್ಮ ವರಸೆ ಮುಂದುವರಿಸಿದ್ದಾರೆ.

"ಇದು ಪ್ರಜಾಪ್ರಭುತ್ವ ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ... ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದ ಮೇಲಿನ ನನ್ನ ಪ್ರೀತಿಯೂ ನಿಜ... ಯಾರೂ ಇದನ್ನು ಅನುಮಾನಿಸುವುದಿಲ್ಲ... ನನಗೆ ಈ ಹಿಂದೆಯೂ ಬೆದರಿಕೆ ಹಾಕಲಾಗಿತ್ತು... ತಪ್ಪಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ.. ತಪ್ಪೇ ಮಾಡಿಲ್ಲ ಎಂದಮೇಲೆ ಕ್ಷಮೆ ಕೇಳಬೇಕಿಲ್ಲ... ನನ್ನ‌ನಿರ್ಧಾರಕ್ಕೆ ಬದ್ಧವಾಗಿದ್ದೇನೆ" ಎಂದಿದ್ದಾರೆ.

ಇನ್ನು, ಕಮಲ್ ಹಾಸನ್ ಮತ್ತೆ ಮೊಂಡಾಟದ ಹೇಳಿಕೆ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber) ಖಂಡನೆ ವ್ಯಕ್ತಪಡಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, 'ಇಡೀ ಕರ್ನಾಟಕ ಕಮಲ್ ಹಾಸನ್ ವಿರುದ್ಧ ಕೆರಳಿದೆ. ಚಿತ್ರಮಂದಿರದವರೇ ಈಗ ಸಿನಿಮಾ ರಿಲೀಸ್ ಮಾಡಲ್ಲ ಅಂತಾ ಹೇಳಿದ್ದಾರೆ. ವಿತರಕರು ಕೂಡ ಇದೇ ನಿರ್ಧಾರಕ್ಕೆ ಬಂದಿದ್ದಾರೆ. ಈಗ ಮತ್ತೆ ಕ್ಷಮೆ ಕೇಳಲ್ಲ ಅಂತ ಹೇಳಿದ್ದಾರೆ.

ನಟ ಕಮಲ್ ಹಾಸನ್ ಅವರಿಗೆ ರಾಜಕೀಯ ಕಾರಣ ಇರಬಹುದು. ಏನಾದ್ರೂ ಕಾರಣ ಇರುತ್ತೆ. ಈ ತರ ಹಿಂದೆ ಘಟನೆಗಳು ಆದಾಗ ಅನೇಕರು ಕ್ಷಮೆಯಾಚನೆ ಮಾಡಿದ್ದಾರೆ. ರಜನೀಕಾಂತ್ ಸೇರಿದಂತೆ ಸೋನು ನಿಗಮ್ ಕೂಡ ಕ್ಷಮೆಯಾಚನೆ ಮಾಡಿದ್ದಾರೆ. ಆದರೆ, ಕಮಲ್ ಹಾಸನ್ ಈಗ್ಲೂ ಕೂಡ ನಾನು ಕ್ಷಮೆ ಕೇಳಲ್ಲ ಅಂತ ಹೇಳುತ್ತಿದ್ದಾರೆ. ಯಾಕೆ ಇಂತಹ ನಿರ್ಧಾರ ಅಂತ ಗೊತ್ತಿಲ್ಲ!

ಅಂದೊಮ್ಮೆ ನಮ್ಮ ರಜನಿಕಾಂತ್ ಕೂಡ ಕ್ಷಮೆ ಕೇಳಿದ್ರು. ಆದ್ರೆ ಕಮಲ್ ಹಾಸನ್ ನಾನು ತಪ್ಪೆ ಮಾಡಲ್ಲ ಕ್ಷಮೆ ಕೇಳಲ್ಲ ಅಂತಾರೆ. ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾ ರಿಲೀಸ್ ಮಾಡಲ್ಲ ಅಂತ ಹೇಳುತ್ತಿಲ್ಲ, ಕನ್ನಡಪರ ಹೋರಾಟಗಾರರ ಜೊತೆ ನಮ್ಮ ಕನ್ನಡ ಸಿನಿಮಾ ರಂಗ ಇರುತ್ತೆ. ನಾವು ಕಾನೂನು ಪರವಾಗಿ ಏನು ಹೇಳ್ತಾ ಇಲ್ಲ

'ಇಲ್ಲಿ ಗಲಾಟೆ ಆಗ್ತಾ ಇದೆ. ನಾವು ಸಿನಿಮಾ ರಿಲೀಸ್ ಮಾಡಲ್ಲ ಅಂತ ವಿತರಕರು ಪ್ರದರ್ಶಕರು ಹೇಳ್ತಾ ಇದ್ದಾರೆ. ನಮ್ಮ ಕನ್ನಡ ಪರ ಹೋರಾಟಗಾರರು ರಾಜಕಾರಣಿಗಳು ಕಮಲ್ ಹಾಸನ್ ವಿರುದ್ಧ ಸಿಟ್ಟಾಗಿದ್ದಾರೆ..' ಎಂದು ಫಿಲ್ಮ್ ಛೇಂಬರ್ ಅಧ್ಯಕ್ಷ ನರಸಿಂಹುಲು ಹೇಳಿಕೆ ನೀಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?