ಶೃತಿ ಹರಿಹರನ್ ಬೇಬಿ ಬಂಪ್ ಆಯ್ತು, ಈಗ ಸೀಮಂತ ವಿಡಿಯೋನೂ ರಿವೀಲ್ !

Published : Jul 18, 2019, 12:49 PM IST
ಶೃತಿ ಹರಿಹರನ್ ಬೇಬಿ ಬಂಪ್ ಆಯ್ತು, ಈಗ ಸೀಮಂತ ವಿಡಿಯೋನೂ ರಿವೀಲ್ !

ಸಾರಾಂಶ

ನಟಿ ಶೃತಿ ಹರಿಹರನ್ ಪ್ರೆಗ್ನೆನ್ಸಿ ವಿಚಾರವನ್ನು ಬಹಿರಂಗಪಡಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಈಗ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬೇಬಿ ಶವರ್ ವಿಡಿಯೋ ರಿವೀಲ್ ಮಾಡಿದ್ದಾರೆ.

'ಲೂಸಿಯಾ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಶೃತಿ ಹರಿಹರನ್ ನೋಡ ನೋಡುತ್ತಿದ್ದಂತೆ ಕೈ ಚಾಚಿದಷ್ಟು ಅವಕಾಶಗಳು ಅವರ ಪಾಲಾಗಿತ್ತು. ಯಶಸ್ಸಿನ ಉತ್ತುಂಗದಲ್ಲಿರುವಾಗ #MeToo ಆರೋಪದ ನಂತರ ಸಿನಿಮಾ ರಂಗದಿಂದ ದೂರ ಉಳಿದರು.

ತಾಯಾಗ್ತಿದ್ದಾರೆ ಶ್ರುತಿ ಹರಿಹನ್, ಗಂಡನ ಹೆಸರು ಬಹಿರಂಗ

ಸಿನಿಮಾದಿಂದ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಿಂದಲೂ ದೂರ ಉಳಿದರು. ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.

ಕೆಲ ದಿನಗಳ ಹಿಂದೆ ತಾನು ಗರ್ಭಿಣಿಯಾದ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು 'ಇದೊಂದು ಹೊಸ ಪ್ರಯಾಣದ ಆರಂಭ. ಕ್ಲಾರಿಟಿಗಿಂತ ಕೆಲವೊಮ್ಮೆ ಬ್ಲರ್ ಆಗಿರುವುದೇ ಉತ್ತಮ ' ಎಂದು ಹೇಳಿಕೊಂಡಿದ್ದಾರೆ. ಇನ್ನು ಮೇಡಂ ಸೀಮಂತಾ ಆಯ್ತಾ? ಬೇಬಿ ಶವರ್? ಎಂದು ಕೇಳುತ್ತಿದ್ದವರಿಗೆ ವಿಡಿಯೋ ರಿವೀಲ್ ಮಾಡಿ ಉತ್ತರ ನೀಡಿದ್ದಾರೆ.

'#MajorThrowback ಆಪ್ತ ಗೆಳೆಯರು ಕೊಂಚ ಮೋಜು-ಮಸ್ತಿ ಬೇಕೆಂದು ಮಾಡಿದ ಬೇಬಿ ಶವರ್ ಇದು. #ThePermitRoomBangalore ನಲ್ಲಿ ತುಂಬಾ ದಿನಗಳಿಂದ ತಿನ್ನಬೇಕೆಂದು ಬಯಕೆ ಇತ್ತು. ಅದರಲ್ಲೂ ಮೊಸರನ್ನ ಸಿಕ್ಕಾಪಟ್ಟೆ ಇಷ್ಟವಾಯ್ತು. ಥ್ಯಾಂಕ್ಸ್' ಎಂದು ಬರೆದುಕೊಂಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಮ್ ಚರಣ್ ಮೇಲೆ ದೇಶದಾಚೆಗಿನ ಪ್ರೀತಿ.. ಮೆಗಾ ಪವರ್ ಸ್ಟಾರ್‌ಗಾಗಿ ಭಾರತಕ್ಕೆ ಬಂದ ಆ ವಿದೇಶಿ ಫ್ಯಾನ್ಸ್!
ರಾಜ್ಯದ ಗಡಿ ಆನೇಕಲ್‌ನಲ್ಲಿ ದರ್ಶನ್ 'ಡೆವಿಲ್‌'ಗೆ ಹೀಗೆಲ್ಲಾ ಆಗ್ತಿದ್ಯಾ?