Sonal Monteiro: ಮದ್ವೆಯಾದ ತಕ್ಷಣವೇ ಪ್ರೆಗ್ನೆಂಟ್​ ಅನ್ನೋ ಸುದ್ದಿ ಬಂತು: ಆ ಶಾಕಿಂಗ್​ ಘಟನೆ ನೆನೆದ ಸೋನಲ್

Published : Jun 18, 2025, 09:02 PM IST
Sonal Monteiro

ಸಾರಾಂಶ

ಮದ್ವೆಯಾದ ತಕ್ಷಣವೇ ಪ್ರೆಗ್ನೆಂಟ್​ ಅನ್ನೋ ಸುದ್ದಿ ಬಂತು. ಅದನ್ನು ಕೇಳಿ ಹೇಗಾಯಿತು ಎನ್ನುವ ಬಗ್ಗೆ ನಟಿ ಸೋನಲ್ ಮೊಂಥೆರೋ ಮಾತನಾಡಿದ್ದಾರೆ. ಅವರು ಏನಂದ್ರು ನೋಡಿ! 

ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅವರ ಅದ್ಧೂರಿ ವಿವಾಹ ಕಳೆದ ಆಗಸ್ಟ್​ 11ರಂದು ನಡೆದಿದೆ. ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಈ ಜೋಡಿ ತಮ್ಮ ನಾಲ್ಕು ವರ್ಷದ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಿದ್ದಾರೆ. ಹಿಂದೂ ಸಂಪ್ರದಾಯದಂತೆ ಮೊದಲಿಗೆ ಮದುವೆ ನಡೆದಿತ್ತು. ಸೋನಲ್​ ಅವರ ಹುಟ್ಟುಹಬ್ಬದಂದೇ ಮದುವೆಯಾಗಿದ್ದು ವಿಶೇಷವೇ. ಕೊನೆಗೆ ಜೋಡಿ ಮಂಗಳೂರಿನಲ್ಲಿ ಕ್ರೈಸ್ತ ಸಮುದಾಯದಂತೆ ಮದುವೆ ಮಾಡಿಕೊಂಡಿತು. ಇದಕ್ಕೆ ಕಾರಣ ಸೋನಲ್​ ಅವರು ಕ್ರೈಸ್ತ ಸಮುದಾಯಕ್ಕೆ ಸೇರಿದವರು. ಈ ದಂಪತಿ ತಮ್ಮ ವೈವಾಹಿಕ ಜೀವನವನ್ನು ಸಂತಸದಿಂದ ಕಳೆಯುತ್ತಿದ್ದಾರೆ. ಇದೀಗ ಅವರು ಮದುವೆಯ ಬಳಿಕ ಮಾದೇವ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದು, ಶೀಘ್ರದಲ್ಲಿ ಅದು ಬಿಡುಗಡೆಯಾಗಲಿದೆ. ನವೀನ್ ರೆಡ್ಡಿ ಬಿ ನಿರ್ದೇಶನದ ಮತ್ತು ವಿನೋದ್ ಪ್ರಭಾಕರ್ ನಟಿಸಿರುವ ಮಾದೇವ ಚಿತ್ರವು ಕಳೆದ, ಮೇ 30 ರಂದು ತೆರೆಕಂಡಿದೆ. ಈ ಚಿತ್ರದ ಖುಷಿಯಲ್ಲಿದ್ದಾರೆ ನಟಿ.

ಸೆಲೆಬ್ರಿಟಿಗಳು ಅಂದ್ರೆ ಫ್ಯಾನ್ಸ್​ಗೆ ಅದೇನೋ ಒಂಥರಾ ಲವ್ವು. ಮೊದಲು ಅವರ ಅಭಿಮಾನಿಗಳಿಗೆ ಮದುವೆ ಚಿಂತೆ. ಮದುವೆಯಾಗುತ್ತಿದ್ದಂತೆಯೇ ಮಕ್ಕಳ ಚಿಂತೆ. ಮದುವೆಯಾದವರಿಗೆ ಅವರ ಭವಿಷ್ಯ, ಕರಿಯರ್‍‌ ಬಗ್ಗೆ ಯೋಚನೆಯಾಗಿದ್ದರೆ, ಅಭಿಮಾನಿಗಳಿಗೆ ಮಕ್ಕಳ ಸುದ್ದಿ ಯಾವಾಗ ಕೊಡ್ತಾರೆ ಎನ್ನುವ ಬಗ್ಗೆ ಕಾತರದಿಂದ ಕಾಯುತ್ತಿದ್ದಾರೆ. ಮದುವೆಯಾದ ಹೊಸತರಲ್ಲಿ ತರುಣ್‌ ಮತ್ತು ಸೋನಲ್‌ ಅವರ ವಿಷಯದಲ್ಲಿಯೂ ಹಾಗೆಯೇ ಆಗಿತ್ತು. ಇವರಿಬ್ಬರು ಆಸ್ಪತ್ರೆಗೆ ಹೋಗಿದ್ದರು. ಈ ವಿಷಯವನ್ನು ಅರ್ಧಂಬರ್ಧ ತಿಳಿದ ಇವರ ಅಭಿಮಾನಿಗಳಿಗೆ ಖುಷಿಯೋ ಖುಷಿ. ಏನೋ ಗುಡ್‌ ನ್ಯೂಸ್‌ ಇದೆ ಎಂದೇ ಎಂದುಕೊಂಡರು. ಅಷ್ಟೇ ಅಲ್ಲದೇ ಆಸ್ಪತ್ರೆಗೆ ಹೋದ ತರುಣ್‌ ಅವರು ಅಲ್ಲಿ ಅಭಿನಂದನೆಯನ್ನೂ ಸಲ್ಲಿಸಿದ್ದರು. ಆದರೆ ಅವರು ಪಶು ಆಸ್ಪತ್ರೆ ಉದ್ಘಾಟನೆಗೆ ಹೋಗಿದ್ದರಷ್ಟೇ.

ಆದರೆ ಅದಾಗಲೇ ಸೋಷಿಯಲ್​ ಮೀಡಿಯಾಗಳಲ್ಲಿ ಇವರು ಆಸ್ಪತ್ರೆಗೆ ಹೋಗಿದ್ದು ಸದ್ದು ಮಾಡಿತ್ತು. ಈ ಬಗ್ಗೆ ಇದೀಗ ನಟಿ ಬಾಸ್​ ಟಿವಿಯ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸೆಲೆಬ್ರಿಟಿಗಳು ಎಂದರೆ ಗಾಸಿಪ್​ ಇದ್ದದ್ದೇ. ನನಗೂ ಹಾಗೇ ಆಗಿತ್ತು. ಟಿವಿಯಲ್ಲಿ ಬಂದ ಸುದ್ದಿ ನೋಡಿ ಎಲ್ಲಾ ಕಂಗ್ರಾಟ್ಸ್​ ಹೇಳಲು ಶುರು ಮಾಡಿದ್ದರು. ಇದನ್ನು ನೋಡಿ ಆರಂಭದಲ್ಲಿ ನನಗೂ ಶಾಕ್​ ಆಯಿತು ಎಂದಿದ್ದಾರೆ. ಇದೇ ವೇಳೆ, ಫ್ಯಾಮಿಲಿ ಪ್ಲ್ಯಾನ್​ ಏನೂ ಇಲ್ಲ, ಯಾವಾಗ ಆಗುತ್ತೋ ಆವಾಗ ಮಗು ಆಗಲಿ ಎಂದಿರುವ ಸೋನಲ್​, ನಮ್ಮ ಮನೆಯಲ್ಲಿ ಹೆಚ್ಚು ಹೆಣ್ಣುಮಕ್ಕಳೇ ಇರುವುದರಿಂದ ನನಗೆ ಗಂಡು ಮಗು ಇಷ್ಟ, ತರುಣ್​ ಮನೆಯಲ್ಲಿ ಹೆಚ್ಚಾಗಿ ಗಂಡುಮಕ್ಕಳೇ ಇರುವುದರಿಂದ ಅವರಿಗೆ ಹೆಣ್ಣುಮಗು ಇಷ್ಟ. ಸೋ ಏನಾಗುತ್ತೋ ಆಗಲಿ ಎಂದಿದ್ದಾರೆ.

ಇನ್ನು ತರುಣ್‌ ಅವರು ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡುತ್ತಿದ್ದರೆ, ಸೋನಲ್‌ ಅವರು, ಎಕ್ಕ ಸಕ್ಕ ಎಂಬ ತುಳು ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಬಳಿಕ ಯಮುನಕ್ಕ ಸೇರಿದಂತೆ ಕೆಲವು ತುಳು ಚಿತ್ರಗಳಲ್ಲಿ ನಟಿಸಿದ್ದಾರೆ. 2018ರಲ್ಲಿ ಅಭಿಸಾರಿಕೆ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಎಂಟ್ರಿ ಕೊಟ್ಟರು. 2019ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಬಳಿಕ ತರುಣ್ ನಿರ್ದೇಶನದ ರಾಬರ್ಟ್ ಚಿತ್ರದಲ್ಲಿ ಸೋನಲ್ ಪ್ರಮುಖ ಪಾತ್ರದಲ್ಲಿ ನಟಿಸಿದರು. ಆನಂತರ ಶುಗರ್‌ ಫ್ಯಾಕ್ಟರಿ, ಬನಾರಸ್‌, ಗರಡಿ, ಮದುವೆ ದಿಬ್ಬಣ, ಡೆಮೊ ಪೀಸ್‌, ಶಂಭೋ ಶಿವ ಶಂಕರ್‌ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ಉಪೇಂದ್ರ ನಟನೆಯ ಬುದ್ಧಿವಂತ 2, ರೋಲೆಕ್ಸ್ ಹಾಗೂ ಮಾರ್ಗರೆಟ್ ಲವ್ ಆಫ್ ರಾಮಾಚಾರಿ ಚಿತ್ರದಲ್ಲಿ ಸೋನಲ್ ಅಭಿನಯಿಸಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?