
ನಟಿ ಶೋಭಿತಾ ಧೂಳಿಪಾಲ ತಮ್ಮ ಪತಿ, ನಟ ನಾಗ ಚೈತನ್ಯ ಅವರ ಹುಟ್ಟುಹಬ್ಬಕ್ಕೆ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ. ನವೆಂಬರ್ 23ರಂದು ನಾಗ ಚೈತನ್ಯ ತಮ್ಮ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಈ ವೇಳೆ ಪತಿಗೆ ಮುತ್ತಿಡುತ್ತಿರುವ ವೆಕೇಶನ್ ಫೋಟೋವನ್ನು ಶೋಭಿತಾ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಕೆಲವು ಕ್ಯಾಂಡಿಡ್ ಫೋಟೋ ಮತ್ತು ವಿಡಿಯೋಗಳನ್ನು ಹಾಕಿ 'ಹ್ಯಾಪಿ ಬರ್ತ್‌ಡೇ ಲವರ್' ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ನಾಗ್ ಹಬ್ಬಕ್ಕೆ ಶೋಭಿತಾ ಸ್ವೀಟ್ ವಿಶ್!
ಸೈಪ್ರೈಸ್ ಟ್ರಿಪ್‌ನಲ್ಲಿ ಹಳದಿ ಆರ್ಚ್‌ವೇ ಕೆಳಗೆ ಇಬ್ಬರೂ ಲಿಪ್ ಲಾಕ್ ಮಾಡಿಕೊಂಡಿದ್ದ ಹಳೆಯ ಫೋಟೋವನ್ನು ಶೋಭಿತಾ ಹಂಚಿಕೊಂಡಿದ್ದಾರೆ. ಗ್ರ್ಯಾಂಡ್ ಆಗಿ ಮದುವೆಯಾದ ನಂತರ ಈ ಜೋಡಿಯ ಲೈಫ್ ಹೇಗಿದೆ ಎಂಬುದನ್ನು ಈ ರೊಮ್ಯಾಂಟಿಕ್ ಪೋಸ್ಟ್ ಅಭಿಮಾನಿಗಳಿಗೆ ತೋರಿಸಿದೆ. ಹುಟ್ಟುಹಬ್ಬದ ದಿನ ಪತಿಗೆ ಮುತ್ತಿಡುವ ಮೂಲಕ ಶೋಭಿತಾ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಲವ್ ಸ್ಟೋರಿ ಶುರುವಾಗಿದ್ದು ಹೇಗೆ?
ಒಂದು ಸಿಂಪಲ್ ಕಮೆಂಟ್‌ನಿಂದ ಇವರ ಲವ್ ಸ್ಟೋರಿ ಶುರುವಾಯಿತು. ಚೈತನ್ಯ ಅವರ ಕ್ಲೌಡ್ ಕಿಚನ್ 'ಶೋಯು' ಬಗ್ಗೆ ಮಾಡಿದ್ದ ಪೋಸ್ಟ್‌ಗೆ ಶೋಭಿತಾ ಕಮೆಂಟ್ ಮಾಡಿದ್ದರು. ಈ ಮೂಲಕ ಆನ್‌ಲೈನ್‌ನಲ್ಲಿ ಪರಿಚಯವಾದ ಇವರು, 2022ರ ಆರಂಭದಲ್ಲಿ ಡೇಟಿಂಗ್ ಶುರು ಮಾಡಿದ್ದರು. ಆಮೇಲೆ ಮುಂಬೈನಲ್ಲಿ ಸೀಕ್ರೆಟ್ ಆಗಿ ಲಂಚ್ ಡೇಟ್ ಮಾಡಿದ್ದರು. ಜೊತೆಗೆ ಬಂಡೀಪುರ ಮತ್ತು ಲಂಡನ್‌ಗೂ ಟ್ರಿಪ್ ಹೋಗಿದ್ದರು. ಫಾಸ್ಟ್ ಕಾರುಗಳ ಮೇಲಿನ ಪ್ರೀತಿ ಇಬ್ಬರನ್ನೂ ಬೇಗ ಹತ್ತಿರವಾಗಿಸಿತು. ಈಗ ಶೋಭಿತಾ ಬರೆದಿರುವ ಆ ನಾಲ್ಕು ಪದಗಳ ಕ್ಯಾಪ್ಷನ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇನ್ನು 2024ರ ಆಗಸ್ಟ್ 8ರಂದು ಇವರ ನಿಶ್ಚಿತಾರ್ಥ ನಡೆದಿತ್ತು. ಚೈತನ್ಯ ಅವರ ತಂದೆ, ಹಿರಿಯ ನಟ ಅಕ್ಕಿನೇನಿ ನಾಗಾರ್ಜುನ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಿದ್ದರು. ನಂತರ ಡಿಸೆಂಬರ್ 4, 2024ರಂದು ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋಸ್‌ನಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಇವರು ಹಸೆಮಣೆ ಏರಿದರು. ಡಿಸೆಂಬರ್ 4, 2024ರಂದು ಸಾಂಪ್ರದಾಯಿಕ ತೆಲುಗು ಶೈಲಿಯಲ್ಲಿ ಇವರ ಮದುವೆ ನಡೆಯಿತು. ಚೈತನ್ಯ ಅವರ ತಾತ, ಲೆಜೆಂಡರಿ ನಟ ಅಕ್ಕಿನೇನಿ ನಾಗೇಶ್ವರ ರಾವ್ ಕಟ್ಟಿದ್ದ ಅನ್ನಪೂರ್ಣ ಸ್ಟುಡಿಯೋಸ್ ಈ ಮದುವೆಗೆ ಸಾಕ್ಷಿಯಾಯಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.