ಗಂಜಿ ಕುಡಿಯಲು ನಟನೆಗೆ ಬಂದ್ಯಾ: ಇಬ್ಬರು ಖ್ಯಾತ ನಟಿಯರ ಜಡೆ ಜಗಳಕ್ಕೆ ನೆಟ್ಟಿಗರ ಆಕ್ರೋಶ

Published : Jan 07, 2026, 06:03 PM IST
Sathyabhama derogatory comments against actress Sneha Sreekumar

ಸಾರಾಂಶ

ಮಲಯಾಳಂ ತಾರೆಯರಿಬ್ಬರ ನಡುವಿನ ಕಿತ್ತಾಟವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಆಡಿಕೊಳ್ಳುವವರ ಸರಕಾಗಿದೆ. ನಟಿ ಸ್ನೇಹಾ ಶ್ರೀಕುಮಾರ್ ವಿರುದ್ಧ ಕಲಾಮಂಡಲಂ ಸತ್ಯಭಾಮ ತೀವ್ರ ವಾಗ್ದಾಳಿ ನಡೆಸಿದ್ದು ಇವರಿಬ್ಬರ ಕಿತ್ತಾಟಕ್ಕೆ ಈಗ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಮಲಯಾಳಂ ತಾರೆಯರಿಬ್ಬರ ನಡುವಿನ ಕಿತ್ತಾಟವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಆಡಿಕೊಳ್ಳುವವರ ಸರಕಾಗಿದೆ. ನಟಿ ಸ್ನೇಹಾ ಶ್ರೀಕುಮಾರ್ ವಿರುದ್ಧ ಕಲಾಮಂಡಲಂ ಸತ್ಯಭಾಮ ತೀವ್ರ ವಾಗ್ದಾಳಿ ನಡೆಸಿದ್ದು, ಈ ಹಿಂದೆ, ಡ್ಯಾನ್ಸರ್ ಹಾಗೂ ನಟ ಕಲಾಭವನ್ ಮಣಿ ಅವರ ಸಹೋದರ ಆರ್‌ಎಲ್‌ವಿ ರಾಮಕೃಷ್ಣನ್ ಕುರಿತು ಸತ್ಯಭಾಮ ನೀಡಿದ್ದ ವಿವಾದಾತ್ಮಕ ಹೇಳಿಕೆಗಳಿಗೆ ಸ್ನೇಹಾ ಪ್ರತಿಕ್ರಿಯಿಸಿದ್ದರು. ಸ್ನೇಹಾ ಅವರು ಆರ್‌ಎಲ್‌ವಿ ರಾಮಕೃಷ್ಣನ್ ಅವರನ್ನು ಬೆಂಬಲಿಸಿ ಸತ್ಯಭಾಮ ಅವರನ್ನು ಟೀಕಿಸಿದ್ದೇ, ಇದೀಗ ಇಬ್ಬರು ನಟಿಯರ ವಾಗ್ವಾದಕ್ಕೆ ಕಾರಣವಾಗಿದೆ.

ಸ್ನೇಹಾ ಹೇಳಿಕೆಗೆ ಪ್ರತಿಕ್ರಿಯಿಸಿ ಸತ್ಯಭಾಮ ಹೊಸ ಫೇಸ್‌ಬುಕ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸ್ನೇಹಾ ವಿರುದ್ಧ ವೈಯಕ್ತಿಕ ನಿಂದನೆ ಮತ್ತು ಬಾಡಿ ಶೇಮಿಂಗ್ ಮಾಡುವ ಮೂಲಕ ಸತ್ಯಭಾಮ ಪ್ರತಿಕ್ರಿಯಿಸಿದ್ದು, ಹಿರಿಯ ನಟಿಯ ನಡೆಯ ವಿರುದ್ಧವೀಗ ಮಲೆಯಾಳಂ ಚಿತ್ರರಂಗವೂ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.

ಮಲಯಾಳಂ ಸೀರಿಯಲ್ 'ಮರಿಮಾಯಂನಲ್ಲಿ ನನಗೆ ಬೇಸರ ಮೂಡಿಸಿದ, ನನ್ನ ವಿರುದ್ಧ ಪೋಸ್ಟ್ ಹಾಕಿದ ಒಬ್ಬಳಿದ್ದಾಳೆ. ನಿಮ್ಮೆಲ್ಲರಿಗೂ ಅವಳು ಗೊತ್ತು, ಪೂರ್ತಿ ಉಂಡೆಯಾಗಿರುವ ಒಬ್ಬಳು. ಕಲಾಮಂಡಲದಲ್ಲಿ ಓಟಂತುಳ್ಳಲ್ (ಕೇರಳದ ಪ್ರಖ್ಯಾತ ನೃತ್ಯ ಪ್ರಾಕಾರ) ಕಲಿತವಳಂತೆ. ಇವಳು ಯಾವ ಕುಣಿತ ಕಲಿತಿದ್ದಾಳೋ ನನಗಂತೂ ಗೊತ್ತಿಲ್ಲ. ಅವಳು ನನ್ನನ್ನು 'ಈ ಮಹಿಳೆ' ಎಂದು ಕರೆದಳು. ಅವರು ಹೇಳಿದ್ದನ್ನೆಲ್ಲಾ ನನ್ನ ಫೋನ್‌ನಲ್ಲಿ ಸೇವ್ ಮಾಡಿಟ್ಟಿದ್ದೇನೆ. ನನಗೆ ಇಂತಹ ಅವಕಾಶ ಸಿಗುತ್ತೆ ಅಂತ ನೀನು ಅಂದುಕೊಂಡಿರಲಿಲ್ಲ. ಇಂಟರ್ವ್ಯೂನಲ್ಲಿ ಡ್ಯಾನ್ಸ್‌ಗೆ ಸೀಟ್ ಸಿಗದ ಕಾರಣಕ್ಕಲ್ಲವೇ ನೀನು ಓಟಂತುಳ್ಳಲ್ ತೆಗೆದುಕೊಂಡಿದ್ದು? ನೀನು ಓಟಂತುಳ್ಳಲ್ ಕುಣಿತೀಯಾ? ಮೊದಲು ನೀನು ಕಲಿತ ವೃತ್ತಿಯನ್ನು ಸರಿಯಾಗಿ ಮಾಡು,' ಎಂದು ಸತ್ಯಭಾಮ ನಟಿ ಸ್ನೇಹಾ ಶ್ರೀಕುಮಾರ್ ವಿರುದ್ದ ವೈಯಕ್ತಿಕವಾಗಿ ನಿಂದಿಸಿದ್ದಾರೆ.

ಇದನ್ನೂ ಓದಿ: ವಿಗ್ ಧಿರಿಸಿ ಬೋಳು ತಲೆ ಮುಚ್ಚಿಟ್ಟು ಮದುವೆಯಾದ ವ್ಯಕ್ತಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

ಸತ್ಯಭಾಮ ವಿರುದ್ಧ ಹೆಚ್ಚಾದ ಟೀಕೆಗಳು

ನೀನು ಹುಟ್ಟುವುದಕ್ಕೂ ಮುಂಚೆ ಬಣ್ಣ ಹಚ್ಚಿ ಫೀಲ್ಡ್‌ಗೆ ಇಳಿದವಳು ನಾನು. ನೀನೊಮ್ಮೆ ಕುಣಿದು ತೋರಿಸು. ಗಂಜಿ ಕುಡಿದು ಬದುಕಲೆಂದೇ ಅಲ್ಲವೇ ನಟಿಸಲು ಹೋಗಿದ್ದು? ನೀನು ದೊಡ್ಡ ಕಲಾವಿದೆ ಎಂದುಕೊಂಡಿದ್ದೀಯಾ? ನಾನು ಕಲಾಮಂಡಲದಿಂದ ಗೌರವಯುತವಾಗಿ ಪದವಿ ಪಡೆದಿದ್ದೇನೆ. ನಿನ್ನ ಊರಿನಲ್ಲಿ ಒಂದು ಕಾರ್ಯಕ್ರಮಕ್ಕೆ ನನ್ನನ್ನು ಕರೆಯಿರಿ, ನಾನು ಬಂದು ಕುಣಿಯುತ್ತೇನೆ. ನನ್ನನ್ನು ಟೀಕಿಸಿದ ಕೆಲವು ದಿನಗಳ ನಂತರ ನಿನಗೆ ಶಿಕ್ಷೆಯಾಯಿತು. ನಿನ್ನ ಗಂಡ ಅತ್ಯಾ*ಚಾರ ಪ್ರಕರಣದಲ್ಲಿ ಆರೋಪಿಯಾದ, ಹೌದಾ? ಅದೆಲ್ಲಾ ಮರೆತು ಬಿಟ್ಟೆಯಾ? ನಾವೆಲ್ಲಾ ಮರೆಯುತ್ತೇವೆ ಎಂದು ಕೊಂಡೆಯಾ? ಅದಕ್ಕಾಗಿಯೇ ದೇವರು ಎಂಬ ಶಕ್ತಿ ಇರುವುದು. ಒಬ್ಬರ ಬಗ್ಗೆ ತಿಳಿಯದೆ ಸುಮ್ಮನೆ ಮಾತನಾಡಬಾರದು ಎಂದು ದು ಕಟು ಮಾತುಗಳಲ್ಲಿ ಸ್ನೇಹಾ ವಿರುದ್ಧ ಸತ್ಯಭಾಮ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಸತ್ಯಭಾಮ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಸಹಜ ಹೆರಿಗೆ: 10 ಹೆಣ್ಣು ಮಕ್ಕಳ ನಂತರ ಕಡೆಗೂ ಜನಿಸಿದ ಗಂಡು ಮಗ: ದಿಲ್‌ಖುಷ್ ಅಂತ ಹೆಸರಿಟ್ಟ ಕುಟುಂಬ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ದಿನಗಳು ಎಷ್ಟು ಬೇಗನೇ ಹೋಗುತ್ತಿದೆ..' ಕ್ಯೂಟಿ ಅಮ್ಮ ಪವಿತ್ರಾ ಗೌಡಗೆ ಬರ್ತ್‌ಡೇ ವಿಶ್‌ ಮಾಡಿದ ಮಗಳು ಖುಷಿ!
ಮಗನ ಹೆಸರು ಹೇಳಿ ಮುದ್ದಾದ ಕೈ ಜಗತ್ತಿಗೆ ತೋರಿಸಿದ ಕತ್ರಿನಾ ಕೈಫ್; ನೆಟ್ಟಿಗರ ರಿಯಾಕ್ಷನ್ಸ್‌ ಏನು?