ಮದುವೆ ಆಗೋ ಮನಸ್ಸಾಗಿದೆಯಂತೆ ಮೊಗ್ಗಿನ ಮನಸು ಹುಡುಗಿಗೆ; ಹುಡುಗ ಹೇಗಿರಬೇಕಂತೆ ಗೊತ್ತಾ?

Published : Dec 26, 2017, 01:34 PM ISTUpdated : Apr 11, 2018, 01:01 PM IST
ಮದುವೆ ಆಗೋ ಮನಸ್ಸಾಗಿದೆಯಂತೆ ಮೊಗ್ಗಿನ ಮನಸು ಹುಡುಗಿಗೆ; ಹುಡುಗ ಹೇಗಿರಬೇಕಂತೆ ಗೊತ್ತಾ?

ಸಾರಾಂಶ

ಗ್ಲಾಮರಸ್ ನಟಿ ಶುಭಾ ಪೂಂಜಾ ಕೊನೆಗೂ ಮದುವೆ ಆಗಲು ನಿರ್ಧರಿಸಿದ್ದಾರೆ. ಮೊಗ್ಗಿನ ಮನಸ್ಸಿನ ಚೆಲುವೆಗೀಗ ಚೆಂದದ ಹುಡುಗ ಬೇಕಿದೆ. ಸದ್ಯಕ್ಕೆ ಆ ಚೆಂದದ ಹುಡುಗನ ತಲಾಷ್ ನಡೆದಿದೆ.

ಬೆಂಗಳೂರು (ಡಿ.26): ಗ್ಲಾಮರಸ್ ನಟಿ ಶುಭಾ ಪೂಂಜಾ ಕೊನೆಗೂ ಮದುವೆ ಆಗಲು ನಿರ್ಧರಿಸಿದ್ದಾರೆ. ಮೊಗ್ಗಿನ ಮನಸ್ಸಿನ ಚೆಲುವೆಗೀಗ ಚೆಂದದ ಹುಡುಗ ಬೇಕಿದೆ. ಸದ್ಯಕ್ಕೆ ಆ ಚೆಂದದ ಹುಡುಗನ ತಲಾಷ್ ನಡೆದಿದೆ.

ಹೊಸ ವರ್ಷಕ್ಕೆ ಶುಭಾಗೆ ಮದುವೆ ಶುಭಯೋಗ ಕಾದಿದೆ! ಶುಭಾ ಪೂಂಜಾ ಬಗ್ಗೆ ಇಷ್ಟು ಹೇಳಿದ್ರೆ ಅದು ತಮಾಷೆಯ ಸಂಗತಿ ಅಂತಲೋ ಅಥವಾ ಅದೊಂದು ಸಿನಿಮಾದ ಸನ್ನಿವೇಶದ ಸಂಗತಿ ಅಂತಲೂ ತಾತ್ಸಾರ ಮಾಡುವವರೇ ಹೆಚ್ಚು. ಆದರೆ ಇದು ಸತ್ಯ ಸಂಗತಿ. ಶುಭ ಪೂಂಜಾ ಅವರ ನಿಜ ಮದುವೆ ವಿಚಾರ. ಹೊಸ ವರ್ಷ 2018  ಕ್ಕೆ ಅವರು ಒಂದಷ್ಟು ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ. ಅದರಲ್ಲಿ ಪ್ರಮುಖವಾದದ್ದು ಅವರ ಮದುವೆ ವಿಚಾರ. ಹೊಸ ವರ್ಷದಲ್ಲಿ ಅವರು ಮದುವೆ ಆಗಲೇಬೇಕು ಅಂತ ಡಿಸೈಡ್ ಮಾಡಿದ್ದಾರೆ. ಆದ್ರೆ ಮದುವೆ ಆಗುವ ಹುಡುಗ ಅವರಿಗೆ ಇನ್ನು ಸಿಕ್ಕಿಲ್ಲ. ಆತನ ಹುಡುಕಾಟ ನಡೆದಿದೆ. ತಾನು ಮದುವೆ ಆಗುವ ಹುಡುಗ ಹೇಗಿರಬೇಕು ಅನ್ನೋದನ್ನು ಅವರೇ ಹೇಳಿಕೊಂಡಿದ್ದಾರೆ. ಅವರ ಪ್ರಕಾರ ಹುಡುಗನಿಗೆ ಇರಬೇಕಾದ ಮಾನದಂಡಗಳೇನು? ಪ್ರಮುಖವಾಗಿ ಅವರು ಮುಂದಿಟ್ಟಿರುವ ಐದು ಮಾನದಂಡ ಇಲ್ಲಿದೆ ಅನ್ನೋದು ಇಲ್ಲಿದೆ ನೋಡಿ. ಅದು ಅವರೇ ಬಹಿರಂಗಪಡಿಸಿದ ಸಂಗತಿ. ಅವರು ಹೇಳುವ ಮಾನದಂಡಗಳಲ್ಲಿ ಅರ್ಹನಾದ ಹುಡುಗ ನಿಮಗೂ ಸಿಕ್ಕರೂ ಹೇಳಬಹುದು.

ಶುಭಾ ಪೂಂಜಾ ತನ್ನ ಹುಡುಗನಲ್ಲಿ ಬಯಸುವ 5 ಗುಣಗಳು

ಪ್ರಾಣಿಗಳನ್ನು ಪ್ರೀತಿಸಬೇಕು

ಹಳ್ಳಿ ಜೀವನಕ್ಕೆ ಸಿದ್ಧವಾಗಿರಬೇಕು

ಮಹತ್ವಾಕಾಂಕ್ಷೆಗಳು ಇರಬಾರದು

ಕಪ್ಪು ಬಣ್ಣ ನನಗಿಷ್ಟ, ತೀರಾ ಕಪ್ಪಗಲ್ಲದಿದ್ದರೂ ಗೋಧಿ ಬಣ್ಣದಲ್ಲಿದ್ದರೆ ಸಾಕು

ಎಲ್ಲಕ್ಕಿಂತ ಮುಖ್ಯವಾಗಿ ಒಳ್ಳೆಯ ಮನುಷ್ಯನಾಗಿರಬೇಕು

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಇನ್‌ಫ್ಲುಯೆನ್ಸರ್‌ನ್ನು ಮಂಚಕ್ಕೆ ಕರೆದ್ನಾ ಮಾಜಿ ಬಿಗ್ ಬಾಸ್ ಸ್ಪರ್ಧಿ? ಚಾಟ್ ಸ್ಕ್ರೀನ್‌ಶಾಟ್ ಲೀಕ್
2026ರ ಆರಂಭದಲ್ಲೇ ಖ್ಯಾತ ನಟಿ ಬದುಕಲ್ಲಿ ಬಿರುಗಾಳಿ, ಮದ್ವೆಯಾದ ಎರಡೇ ವರ್ಷಕ್ಕೆ ಡಿವೋರ್ಸ್