ಶ್ರದ್ಧಾ ಶ್ರೀನಾಥ್ ಸಮಂತಾಗೆ ಬೈದಿದ್ದು ನಿಜಾನಾ?

Published : Apr 18, 2019, 09:41 AM IST
ಶ್ರದ್ಧಾ ಶ್ರೀನಾಥ್ ಸಮಂತಾಗೆ ಬೈದಿದ್ದು ನಿಜಾನಾ?

ಸಾರಾಂಶ

ಕನ್ನಡದ ‘ಯೂಟರ್ನ್‌’ ಚಿತ್ರ ತೆಲುಗು ಹಾಗೂ ತಮಿಳಿಗೂ ರಿಮೇಕ್‌ ಆಗಿದ್ದು ನಿಮಗೂ ಗೊತ್ತು. ಕನ್ನಡದ ‘ಯೂಟರ್ನ್‌’ನಲ್ಲಿ ಶ್ರದ್ಧಾ ಶ್ರೀನಾಥ್‌ ಅಭಿನಯಿಸಿದ್ದ ರಚನಾ ಪಾತ್ರಕ್ಕೆ ತೆಲುಗು ಮತ್ತು ತಮಿಳಿನಲ್ಲಿ ಸಮಂತಾ ಬಣ್ಣ ಹಚ್ಚಿದ್ದಾರೆ.

ಇತ್ತೀಚೆಗೆ ಶ್ರದ್ಧಾ ಶ್ರೀನಾಥ್‌ ಅವರು ಸಮಂತಾ ಅಭಿನಯದ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ತಾವು ಹಾಗೆ ಹೇಳಿಲ್ಲ, ಸಮಂತಾ ನಟನೆಯ ಬಗ್ಗೆ ತಾವೆಲ್ಲೂ ಮಾತನಾಡಿಲ್ಲ, ಬದಲಿಗೆ ತೆಲುಗಿನ ‘ಯೂಟರ್ನ್‌’ ನೋಡಲು ಹೋಗಿದ್ದ ತಾವು 30 ನಿಮಿಷಗಳಲ್ಲೇ ಚಿತ್ರಮಂದಿರದಿಂದ ಎದ್ದು ಬಂದೆ ಎನ್ನುವುದು ಶ್ರದ್ಧಾ ಶ್ರೀನಾಥ್‌ ವಾದ.

‘ಯೂಟರ್ನ್‌ ನಾನು ಅಭಿನಯಿಸಿದ ನನ್ನ ಮೊದಲ ಚಿತ್ರ. ಮೊದಲ ಸಿನಿಮಾ ಎನ್ನುವ ಕಾರಣಕ್ಕೆ ಅಲ್ಲಿನ ರಚನಾ ಪಾತ್ರವನ್ನು ತುಂಬಾ ಫೀಲ್‌ ಮಾಡಿಕೊಳ್ಳುತ್ತೇನೆ. ನಾನು ಯಾವುದೇ ಸಿನಿಮಾ ಮಾಡುವಾಗಲೂ ಆ ಪಾತ್ರ ನನ್ನ ಕಣ್ಣ ಮುಂದೆ ಬರುತ್ತದೆ. ಸಹಜವಾಗಿಯೇ ಇನ್ನೊಬ್ಬರು ಆ ಪಾತ್ರದಲ್ಲಿ ಕಾಣಿಸಿಕೊಂಡರೆ ಪೊಸೆಸಿವ್‌ನೆಸ್‌ ಶುರುವಾಗುತ್ತೆ. ಅದ್ಯಾಕೆ ಹಾಗೆ ಅಂದ್ರೆ, ಅದು ನನ್ನ ಮೊದಲ ಪಾತ್ರ ಎನ್ನುವುದು ಕೂಡ ಕಾರಣ. ಆ ದೃಷ್ಟಿಯಿಂದಲೇ ನಾನು ತೆಲುಗಿನ ಯೂಟರ್ನ್‌ ನೋಡಲು ಕುಳಿತಾಗ ಸಿನಿಮಾ ಶುರುವಾದ 30 ನಿಮಿಷಗಳಲ್ಲೇ ಚಿತ್ರಮಂದಿರದಿಂದ ಎದ್ದು ಬಂದೆ. ಅದರರ್ಥ ನನಗೆ ಸಮಂತಾ ಅವರ ಪಾತ್ರ ಪೋಷಣೆ ಇಷ್ಟಆಗಲಿಲ್ಲ ಅಂತಲ್ಲ. ಆ ಪಾತ್ರದ ಬಗೆಗೆ ನನ್ನಲಿರುವ ಪೊಸೆಸಿವ್‌ನೆಸ್‌ ಕಾರಣ’ಎನ್ನುತ್ತಾರೆ ಶ್ರದ್ಧಾ ಶ್ರೀನಾಥ್‌.

ಶ್ರದ್ಧಾ ಶ್ರೀನಾಥ್‌​ ಲಿಪ್‌ಲಾಕ್‌ ವೈರಲ್‌

ಶ್ರದ್ಧಾ ಮತ್ತು ಸಮಂತಾ ನಡುವಿನ ಗೆಳೆತನ ಹೇಗಿದೆ ಅಂತ ಕೇಳಿದರೆ, ಜಸ್ಟ್‌ ಫ್ರೆಂಡ್ಸ್‌. ಇಂತಹ ಕಾಮೆಂಟ್ಸ್‌ಗೆಲ್ಲ ತಲೆ ಕೆಡಿಸಿಕೊಳ್ಳುವಷ್ಟುಸಮಯ ಅವರಿಗೆ ಇರಲಿಕ್ಕಿಲ್ಲ ಅಂತಾರೆ ಶ್ರದ್ಧಾ. ಸದ್ಯಕ್ಕೆ ಟಾಲಿವುಡ್‌ನಲ್ಲಿ ಬ್ಯಾಕ್‌ ಟು ಬ್ಯಾಕ್‌ ಅವಕಾಶಗಳೊಂದಿಗೆ ಬ್ಯುಸಿ ಆಗಿರುವ ಶ್ರದ್ಧಾ ಶ್ರೀನಾಥ್‌, ಅಲ್ಲಿನ ವೆಬ್‌ಸೈಟ್‌ ಒಂದಕ್ಕೆ ಸಂದರ್ಶನ ನೀಡಿದ್ದರಂತೆ. ಆ ಸಂದರ್ಶನದಲ್ಲಿ ತೆಲುಗಿನ ಯೂಟರ್ನ್‌ ಚಿತ್ರ ನೋಡಿದ ಅನುಭವ ಹೇಳಿ ಎಂದಾಗ, ಚಿತ್ರ ನೋಡಲು ಕುಳಿತ 30 ನಿಮಿಷಗಳಲ್ಲಿ ಚಿತ್ರಮಂದಿರದಿಂದ ಎದ್ದು ಬಂದೆ ಎನ್ನುವ ಹೇಳಿಕೆಯೇ ವಿವಾದ ಎಬ್ಬಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2025ರ IMDbಯ ಟಾಪ್ 10 ಜನಪ್ರಿಯ ಚಿತ್ರಗಳ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್ ಪರಿಮಳ
The Devil Movie: ಏನ್ರೀ ಹವಾ ಇದು... ಗಿಲ್ಲಿ ನಟ ಎಣ್ಣೆಯಲ್ಲಿ ಮುಖ ತೊಳ್ಕೊಂಡಿದ್ದಾರೆ ಎಂದ ವೀಕ್ಷಕರು