
ಆ ಹಾಡಿನ ದೃಶ್ಯ ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಟಾಲಿವುಡ್ ಸಿನಿಮಾ ಮಂದಿ ಆ ದೃಶ್ಯವನ್ನು ಅಚ್ಚರಿಯಿಂದ ನೋಡುತ್ತಿದ್ದರೆ, ಇತ್ತ ಕನ್ನಡ ಚಿತ್ರರಸಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಅಲ್ಲಾದ್ರೆ ಹಂಗೆ, ಇಲ್ಲಾದ್ರೆ ಹಿಂಗ್ಯಾಕೆ’ ಎಂಬುದಾಗಿ ಪ್ರಶ್ನಿಸಿದ್ದಾರೆ. ಅದಕ್ಕೀಗ ಶ್ರದ್ಧಾ ಶ್ರೀನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ‘ಅದೊಂದು ಪಾತ್ರವೆಂದು ಭಾವಿಸಿ. ಒಂದು ಪಾತ್ರ ಮತ್ತು ಕತೆಗೆ ಏನ್ ಬೇಕಾಗುತ್ತದೆಯೋ, ಅಷ್ಟನ್ನು ನಾನು ಇತಿ ಮಿತಿಗಳ ನಡುವೆ ನಾನು ಅಭಿನಯಿಸಲು ಸಿದ್ಧ’ ಎಂದು ಹೇಳಿದ್ದಾರೆ.
ದರ್ಶನ್‌ಗೆ U-Turn ಹೊಡೆದ್ರಾ ಶ್ರದ್ಧಾ ಶ್ರೀನಾಥ್?
ನಾನಿ ಹಾಗೂ ಶ್ರದ್ಧಾ ಶ್ರೀನಾಥ್ ಅಭಿನಯದ ‘ಜೆರ್ಸಿ’ ಚಿತ್ರದ ಲಿಪ್‌ಲಾಕ್ ದೃಶ್ಯ ವೈರಲ್ ಆಗುವುದಕ್ಕೂ ಕಾರಣವಿದೆ. ಕನ್ನಡದಲ್ಲಿ ಬೋಲ್ಡ್ ಪಾತ್ರಗಳೆಂದ್ರೆ ಮಾರುದ್ದ ಹಾರುವ ನಟಿಯರು ಪರಭಾಷೆಗಳಲ್ಲಿ ಹಸಿಬಿಸಿ ದೃಶ್ಯಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಟಾಲಿವುಡ್‌ನಲ್ಲೀಗ ರಶ್ಮಿಕಾ ಮಂದಣ್ಣ ನಂತರ ಶ್ರದ್ಧಾ ಶ್ರೀನಾಥ್ ಅದೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಕನ್ನಡದಲ್ಲಿ ಇದುವರೆಗೂ ಅಷ್ಟುಬೋಲ್ಡ್ ಪಾತ್ರಗಳಲ್ಲಿ ಶ್ರದ್ಧಾ ಅಭಿನಯಿಸಿದ್ದೇ ಇಲ್ಲ. ಆದರೆ ಅವರು ಕಾಲಿವುಡ್, ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳಿನ ವಿಕ್ರಂ ವೇದ ಚಿತ್ರದಲ್ಲೂ ಅಂಥದ್ದೇ ಒಂದು ಬೋಲ್ಡ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಟಾಲಿವುಡ್‌ನಲ್ಲಿ ನಾನಿ ಜತೆಗೆ ಲಿಪ್‌ಲಾಕ್ ಮಾಡಿ ಸುದ್ದಿ ಆಗಿದ್ದಾರೆ. ಅದಕ್ಕೆ ಪರ-ವಿರೋಧ ವ್ಯಕ್ತವಾಗಿದೆ. ಮೆಚ್ಚುಗೆ ಹೇಳಿದವರಿಗೆ ಧನ್ಯವಾದ ಹೇಳಿದ್ದಾರೆ. ಹಾಗೆಯೇ ವಿರೋಧಿಸಿದವರಿಗೆ ಅದೊಂದು ಪಾತ್ರವಾಗಿ ಭಾವಿಸಿ ಎಂದು ಸಲಹೆ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.