ಅಭಿಮಾನಿಗಳ ಮಾತಿಗೆ ಕಿವಿಗೊಡಬೇಡಿ; ಜನತೆಗೆ ದರ್ಶನ್ ಮನವಿ

Published : Mar 27, 2019, 04:04 PM IST
ಅಭಿಮಾನಿಗಳ ಮಾತಿಗೆ ಕಿವಿಗೊಡಬೇಡಿ; ಜನತೆಗೆ ದರ್ಶನ್ ಮನವಿ

ಸಾರಾಂಶ

ಮಂಡ್ಯದಲ್ಲಿ ಜೋರಾಗಿದೆ ಸುಮಲತಾ-ನಿಖಿಲ್ ಕುಮಾರಸ್ವಾಮಿ ಪರ-ವಿರೋಧ ವಾಕ್ಸಮರ | ಅಭಿಮಾನಿಗಳ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ; ದರ್ಶನ್ ಮನವಿ 

ಬೆಂಗಳೂರು (ಮಾ. 27): ಮಂಡ್ಯ ಲೋಕಸಭಾ ಅಖಾಡದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾಗೆ ಯಶ್, ದರ್ಶನ್ ಬೆಂಬಲ ನೀಡುತ್ತಿರುವುದಕ್ಕೆ ದರ್ಶನ್, ಯಶ್ ಫ್ಯಾನ್ಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಟೀಕೆ, ಪ್ರತಿಟೀಕೆಗಳು ನಡೆಯುತ್ತಿವೆ. ಇದು ಇಷ್ಟಕ್ಕೆ ಸೀಮಿತವಾಗಿದ್ದರೆ ಸುಮ್ಮನಾಗಬಹುದಿತ್ತು. ಆದರೆ ಇದು ವೈಯಕ್ತಿಕ ಮಟ್ಟಕ್ಕೆ ಇಳಿದಿದ್ದು ಬೇಸರದ ಸಂಗತಿ. 

ಯಶ್, ದರ್ಶನ್ ಜೋಡೆತ್ತುಗಳಲ್ಲ ಕಳ್ಳೆತ್ತುಗಳು ಎಂದು ಕಾಮೆಂಟ್ ಮಾಡಿದ್ದು ಯಶ್, ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ. ಸಿಎಂ ಮೇಲೆ ಟ್ರೋಲ್ ಗಳು ಹೆಚ್ಚಾಗುತ್ತಿವೆ. ಈ ಸಂದರ್ಭದಲ್ಲಿ ದರ್ಶನ್ ಟ್ವೀಟ್ ಮಾಡಿ ಜನರಿಗೆ ಮನವಿ ಮಾಡಿದ್ದಾರೆ.

 

 

" ಚುನಾವಣೆ ಸಂದರ್ಭದಲ್ಲಿ ಇವೆಲ್ಲಾ ಮಾಮೂಲು. ನಾನು ಇದಕ್ಕೆಲ್ಲಾ ಬೇಸರ ಮಾಡಿಕೊಳ್ಳುವುದಿಲ್ಲ. ನನ್ನ ಅಭಿಮಾನಿಗಳು ಸಹ ಏನೇ ಹೇಳಿದ್ರು ಅದರ ವಿರುದ್ಧ ಪೋಸ್ಟ್ ಮಾಡುವುದಾಗಲಿ, ವಿಡಿಯೋ ಮಾಡುವುದಾಗಲಿ ಮಾಡಬೇಡಿ. ಶಾಂತಿ ಕಾಪಾಡೋಣ‘ ಎಂದು ಜನತೆಯನ್ನು ಮನವಿ ಮಾಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?