ಚಿಂತಾಜನಕ ಸ್ಥಿತಿಯಲ್ಲಿದ್ದ ಅಭಿಮಾನಿಗಾಗಿ ಶೂಟಿಂಗ್ ಬಿಟ್ಟು ಓಡಿ ಬಂದ್ರು ಈ ನಟಿ

Published : Jan 31, 2019, 01:56 PM ISTUpdated : Jan 31, 2019, 02:04 PM IST
ಚಿಂತಾಜನಕ ಸ್ಥಿತಿಯಲ್ಲಿದ್ದ  ಅಭಿಮಾನಿಗಾಗಿ ಶೂಟಿಂಗ್ ಬಿಟ್ಟು ಓಡಿ ಬಂದ್ರು ಈ ನಟಿ

ಸಾರಾಂಶ

ಅಭಿಮಾನಿ ಕೊನೆಯಾಸೆ ಈಡೇರಿಸಿದ ಬಾಲಿವುಡ್ ನಟಿ | ಈ ನಟಿಯ ಭೇಟಿ ನಂತರ ಚಿಕಿತ್ಸೆಗೆ ಸ್ಪಂದಿಸುತ್ತಿರುವ ಬಾಲಕಿ | 

ಮುಂಬೈ (ಜ. 31): ಸೆಲಬ್ರಿಟಿಗಳೆಂದರೆ ಅವರ ಸುತ್ತ ಒಂದಷ್ಟು ಅಭಿಮಾನಿಗಳ ಬಳಗವೇ ಇರುತ್ತದೆ. ನೆಚ್ಚಿನ ನಟ, ನಟಿಯರ ಜೊತೆ ಸೆಲ್ಫಿ ತೆಗೆಸಿಕೊಳ್ಳಬೇಕೆಂಬ ಆಸೆ ಇರುತ್ತದೆ. ಕೆಲವೊಮ್ಮೆ ಅವರನ್ನು ಭೇಟಿಯಾಗುವುದು, ಮಾತನಾಡುವುದು ಅವರ ಕೊನೆಯಾಸೆಯಾಗಿರುತ್ತದೆ. 

ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿರುವ 13 ವರ್ಷದ ಬಾಲಕಿ ಸುಮಯ್ಯಾ ಶ್ರದ್ಧಾ ಕಪೂರ್ ಅಭಿಮಾನಿ. ಅವರನ್ನು ಭೇಟಿಯಾಗುವುದು ನನ್ನ ಕೊನೆಯಾಸೆ ಎಂದು ಪೋಷಕರು, ವೈದ್ಯರ ಬಳಿ ಹೇಳಿಕೊಂಡಿದ್ದಾಳೆ. ಈ ವಿಷಯವನ್ನು ಶ್ರದ್ಧಾ ಕಪೂರ್ ಗೆ ತಿಳಿಸಲಾಗಿತ್ತು. 

ಶ್ರದ್ಧಾ ಸಾಹೋ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು. ವಿಷಯ ತಿಳಿದ ಕೂಡಲೇ ಬಾಲಕಿ ಆಸೆ ಈಡೇರಿಸಲು ಶೂಟಿಂಗ್ ಬಿಟ್ಟು ಆಸ್ಪತ್ರೆಗೆ  ಧಾವಿಸಿದ್ದಾರೆ.  ಬೇರೆಯವರಿಗೆ ಗೊತ್ತಾದರೆ ಇತರೆ ರೋಗಿಗಳಿಗೆ ತೊಂದರೆ ಆದೀತೆಂದು ಬುರ್ಖಾ ಧರಿಸಿ ಬಂದಿದ್ದರು. 

ಅಚ್ಚರಿ ಎಂದರೆ ಶ್ರದ್ಧಾ ಭೇಟಿ ನಂತರ ಸುಮಯ್ಯಾ ಖುಷಿಯಾಗಿದ್ದಾಳೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಇದಕ್ಕಿಂತ ಖುಷಿ ವಿಚಾರ ಬೇರೇನಿದೆ ಅಲ್ವಾ? 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!