
ಚೆನ್ನೈ(ಅ.27): ನಿನ್ನೆಯಷ್ಟೇ ತನ್ನ ದಾಂಪತ್ಯದ ಹಕ್ಕುಗಳಿಗಾಗಿ ಕೋರ್ಟ್ ಮೊರೆಹೋಗಿದ್ದ ರಂಭಾ ತನ್ನ ಮತ್ತು ತನ್ನ ಮಕ್ಕಳ ತಿಂಗಳ ಖರ್ಚಿಗಾಗಿ ತನ್ನ ಪರಿತ್ಯಕ್ತ ಪತಿಯಿಂದ ತಿಂಗಳಿಗೆ 25 ಲಕ್ಷ ರೂಪಾಯಿ ಕೊಡಿಸುವಂತೆ ಕೋರಿ ಕೋರ್ಟ್`ನಲ್ಲಿ ಮನವಿ ಮಾಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಹಿಂದೂ ವಿವಾಹ ಕಾಯ್ದೆ ಪ್ರಕಾರ, ತನ್ನ ಖರ್ಚಿಗೆ ತಿಂಗಳಿಗೆ 1.5 ಲಕ್ಷ ರೂ. ಮತ್ತು ಇಬ್ಬರು ಮಕ್ಕಳ ವಿದ್ಯಾಭ್ಯಾಸ ಇನ್ನಿತರೆ ವೆಚ್ಚಕ್ಕಾಗಿ ತಲಾ 50 ಸಾವಿರ ರೂಪಾಯಿ ಕೊಡಿಸುವಂತೆ ಕೋರ್ಟ್`ಗೆ ಮೊರೆ ಹೋಗಿದ್ಧಾರೆ.
ರಂಭಾ ಅರ್ಜಿಯ ತಿಳಿಸಿರುವಂತೆ, ಮದುವೆಗೆ ಮುನ್ನ ನಾನು ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ಈಗ ನಾನು ಯಾವುದೇ ಚಿತ್ರಗಳಲ್ಲಿ ನಟಿಸದ ಹಿನ್ನೆಲೆಯಲ್ಲಿ ಜೀವನ ನಡೆಸಲು ಮತ್ತು ಮಕ್ಕಳ ಪೋಷಣೆಗೆ ಯಾವುದೇ ಆದಾಯದ ಮೂಲ ಇಲ್ಲ ಎಂದು ತಿಳಿಸಿದ್ದಾರೆ.
CLICK HERE.. ರುದ್ರೇಶ್ ಹಂತಕರು ಯಾವ ಸಂಘಟನೆ ಸೇರಿದವರು ಗೊತ್ತಾ..?
ರಂಭಾ ಅವರ ಹಿರಿಯ ಪುತ್ರಿ ಲಾವಣ್ಯ ಖಾಸಗಿ ಬಶಾಲೆಯಲ್ಲಿ ಓದುತ್ತಿದ್ದು, ವಾರ್ಷಿಕ 3.5 ಲಕ್ಷ ರೂಪಾಯಿ ಶಾಲಾ ಶುಲ್ಕ ಪಾವತಿಸಬೇಕಿದೆ. ಒಂದೂವರೆ ವರ್ಷದ 2ನೇ ಪುತ್ರ ಸಾಶಾಗೆ ನಿಯಮಿತವಾಗಿ ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕಿರುವುದರಿಂದ ಒಟ್ಟು 2.5 ಲಕ್ಷ ರೂ. ಅಗತ್ಯವಿದೆ ಎಂದು ಕೋರ್ಟ್`ನಲ್ಲಿ ಮನವಿ ಮಾಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.