ಕೆಲ ದಿನಗಳ ಹಿಂದೆ ಯಶ್- ರಾಧಿಕಾ ದಂಪತಿ ಮಗಳ ಮೊದಲ ಫೋಟೋ ರಿವೀಲ್ ಆದಾಗ ಅಭಿಮಾನಿಗಳಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ರಾಧಿಕಾ ಪಂಡಿತ್ ತಮ್ಮ ಮಗಳಿಗೆ 6 ತಿಂಗಳು ತುಂಬಿದ ಸಂತಸವನ್ನು ಹಂಚಿಕೊಂಡಿದ್ದಾರೆ.
ಬಹುದಿನಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಅಕ್ಷಯ ತೃತೀಯ ದಿನ ಯಶ್ ಮತ್ತು ರಾಧಿಕಾ ದಂಪತಿ ಪುಟ್ಟ ಮಗುವಿನ ಚಿತ್ರ ರಿವೀಲ್ ಮಾಡಿದ್ದರು. ಇದೀಗ ಮಗುವಿಗೆ 6 ತಿಂಗಳು ತುಂಬುತ್ತಿರುವ ಸಂತಸವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ.
ಇವಳು ಬರೋವರ್ಗು ಯಶ್ ಹವಾ, ಬಂದ್ಮೇಲೆ ಇವಳದ್ದೇ ಹವಾ!
ನಮ್ಮ ಮಗುವಿಗೆ 6 ತಿಂಗಳು ತುಂಬಿದೆ. ಒಂದು ವರ್ಷದ ಹಾದಿಯಲ್ಲಿ ಅರ್ಧ ದಾರಿಯನ್ನು ಆಕೆ ಕ್ರಮಿಸಿದ್ದಾಳೆ. ಈ ಒಂದು ಸ್ಪೇಶಲ್ ದಿನಕ್ಕೆ ಆಕೆಯ ತುಂಟಾಟದ ವಿಡಿಯೋ ಒಂದಿದೆ. ಇದು ಆಕೆ ಮೂರು ತಿಂಗಳ ಮಗುವಾಗಿದ್ದಾಗ ತೆಗೆದಿದ್ದು.. ಆಕೆಯೇ ನಮಗೆ ಆಶೀರ್ವಾದ.. ನಮ್ಮ ದೇವತೆ.. ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.