‘ಚೌಕಿದಾರ್’ ಹೆಸರಲ್ಲಿ ನಟ ಗಣೇಶ್ ಸಿನಿಮಾ

Published : Jun 02, 2019, 09:29 AM IST
‘ಚೌಕಿದಾರ್’ ಹೆಸರಲ್ಲಿ ನಟ ಗಣೇಶ್ ಸಿನಿಮಾ

ಸಾರಾಂಶ

’ಚೌಕಿದಾರ್’ ಹೆಸರಲ್ಲಿ ಬರಲಿದೆ ಸಿನಿಮಾ | ಗೋಲ್ಡನ್ ಸ್ಟಾರ್ ಗಣೇಶ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ | ಆಗಸ್ಟ್ ನಲ್ಲಿ ಚಿತ್ರೀಕರಣ ಶುರು

ಬೆಂಗಳೂರು (ಜೂ. 02): ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದ ಗಮನ ಸೆಳೆದಿದ್ದ ‘ಚೌಕಿದಾರ್’ ಪದ ಈಗ ಸಿನಿಮಾ ಆಗುತ್ತಿದೆ. ‘ಗೋಲ್ಡನ್ ಸ್ಟಾರ್’ ಗಣೇಶ್ ಈ ಚಿತ್ರದಲ್ಲಿ ಚೌಕಿದಾರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಸಮಾಜ ಕಾಯುವ ಕಾವಲುಗಾರನ ಕುರಿತ ಸಿನಿಮಾ ಎಂದು ಸಿನಿಮಾ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಹೇಳಿದ್ದಾರೆ.

ಗಣೇಶ್ ಈ ಸಿನಿಮಾದಲ್ಲಿ 55 ವರ್ಷದ ಹಿರಿಯ ವ್ಯಕ್ತಿಯ ಪಾತ್ರ ಮಾಡುತ್ತಿದ್ದಾರೆ.ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಚೌಕಿದಾರ’ ಟೈಟಲ್ ನೋಂದಣಿ ಆಗಿದೆ. ಈ ಚಿತ್ರ ಯಾರೋ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ಆಗಸ್ಟ್ ನಲ್ಲಿ ಚಿತ್ರೀಕರಣ ಶುರುವಾಗಲಿದೆ ಎಂದು ತಿಳಿಸಿದ್ದಾರೆ. ಆದರೆ ಈ ಕುರಿತು ಕೇಳಲು ಗಣೇಶ್ ಅವರನ್ನು ಸಂಪರ್ಕಿಸಿ ದಾಗ ‘ಇನ್ನೂ ಫೈನಲ್ ಆಗಿಲ್ಲ’ ಎಂದಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಂದು IIFA ವೇದಿಕೆಯಲ್ಲಿ ಯಶ್ ಆಡಿದ್ದ ಮಾತೇನು? ಇಂದು 'ವಿಷಕಾರಿ' ಆಗಿರೋ ರಾಕಿಂಗ್ ಸ್ಟಾರ್ ಮಾಡಿದ್ದೇನು?
ಮ್ಯಾಚ್‌ ಫಿಕ್ಸಿಂಗ್‌ ಇಲ್ಲ, BBK 12 ಅಶ್ವಿನಿ ಗೌಡರ ಈ ಆಸೆ ಈಡೇರಲ್ಲ: ನಾರಾಯಣಗೌಡ್ರು ಒಪನ್‌ ಹೇಳಿಕೆ