
ಬೆಂಗಳೂರು(ಜೂ.7): ಚಂದನವನದ ಬೆಡಗಿ ರಾಧಿಕಾ ಪಂಡಿತ್ ತಮ್ಮ ಫೇಸ್‌ಬುಕ್‌ನಲ್ಲಿ ಮಾಡಿದ ಪೋಸ್ಟ್‌ವೊಂದು ಇದೀಗ ಭಾರೀ ಸುದ್ದಿಯಲ್ಲಿದೆ. ತಮ್ಮ ಫೆವರಿಟ್ ಸಿಹಿ ತಿನಿಸಾದ ಅಂಬೆ ಕೋಳು ಕುರಿತು ರಾಧಿಕಾ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಕಾಡು ಮಾವಿನ ಹಣ್ಣಿನಿಂದ ತಯಾರಿಸುವ ಅಂಬೆ ಕೋಳು ಎಂಬ ಸಿಹಿ ತಿನಿಸಿನ ಕುರಿತು ಪೋಸ್ಟ್ ಮಾಡಿರುವ ರಾಧಿಕಾ, ಅದರ ಜೊತೆಗಿನ ತಮ್ಮ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಅಲ್ಲದೇ ಅಂಬೆ ಕೋಳು ಎಂಬುದು ಕೊಂಕಣಿ ಭಾಗದ ಜನಪ್ರೀಯ ಸಿಹಿ ತಿನಿಸಾಗಿದ್ದು, ತಾವು ಇದರ ಅಭಿಮಾನಿ ಎಂದು ರಾಧಿಕಾ ಹೇಳಿದ್ದಾರೆ.
ಈ ಪೋಸ್ಟ್ ಮೂಲಕ ತಮ್ಮ ಬಾಲ್ಯದ ದಿನಗಳ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿರುವ ರಾಧಿಕಾ, ಚಿಕ್ಕಂದಿನಲ್ಲಿ ಬೇಸಿಗೆ ಕಾಲದಲ್ಲಿ ಅಂಬೆ ಕೋಳನ್ನು ಸವಿಯುತ್ತಿದ್ದ ದಿನಗಳನ್ನು ನೆನೆದಿದ್ದಾರೆ. ಈಗಲೂ ತಮಗೆ ಅಂಬೆ ಕೋಳು ಎಂದರೆ ಪಂಚಪ್ರಾಣ ಎಂದಿರುವ ರಾಧಿಕಾ, ಮಾವಿನ ಹಣ್ಣಿನಿಂದ ಮಾಡಿದ ಯಾವ ತಿನಿಸು ನಿಮಗಿಷ್ಟ ಎಂದು ತಮ್ಮ ಅಭಿಮಾನಿಗಳನ್ನು ಕೇಳಿದ್ದಾರೆ.
ಇದಕ್ಕೆ ಅಷ್ಟೇ ಸ್ವಾರಸ್ಯಕರವಾಗಿ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು, ಅಂಬೆ ಕೋಳಿಗೆ ವಿವಿಧ ಪ್ರಾಂತ್ಯದಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.