ನಟಿ ರಾಧಿಕ ಕುಮಾರಸ್ವಾಮಿ ಈಗ ಏನ್ಮಾಡ್ತಿದ್ದಾರೆ ಗೊತ್ತಾ?

Published : Nov 13, 2017, 10:16 PM ISTUpdated : Apr 11, 2018, 01:06 PM IST
ನಟಿ ರಾಧಿಕ ಕುಮಾರಸ್ವಾಮಿ ಈಗ ಏನ್ಮಾಡ್ತಿದ್ದಾರೆ ಗೊತ್ತಾ?

ಸಾರಾಂಶ

ಸ್ಯಾಂಡಲ್'ವುಡ್'ನ ಸ್ವೀಟಿ ರಾಧಿಕಾ ಕುಮಾರಸ್ವಾಮಿ 'ಸ್ವೀಟಿ' ಹಾಗೂ 'ರುದ್ರತಾಂಡವ' ನಂತರ ಮತ್ತೆಲ್ಲೂ ಕಾಣಿಸಿಕೊಂಡಿಲ್ಲ. ನಿನ್ನೆಯಷ್ಟೇ ಬರ್ತ್'ಡೇ ಆಚರಿಸಿಕೊಂಡಿರುವ ರಾಧಿಕಾ ಕುಮಾರಸ್ವಾಮಿ ಮಾಧ್ಯಮದ ಮುಂದೆ ಬಂದಿಲ್ಲ. ರಾಧಿಕಾ ಕುಮಾರ ಸ್ವಾಮಿ ವೈವಿಧ್ಯಮಯವಾದ ವಿಷಯಗಳ ಜೊತೆ ಪ್ರಯೋಗ ಮಾಡುವಲ್ಲಿ ನಿಪುಣೆ.

ಬೆಂಗಳೂರು (ನ.13):  ಸ್ಯಾಂಡಲ್'ವುಡ್'ನ ಸ್ವೀಟಿ ರಾಧಿಕಾ ಕುಮಾರಸ್ವಾಮಿ 'ಸ್ವೀಟಿ' ಹಾಗೂ 'ರುದ್ರತಾಂಡವ' ನಂತರ ಮತ್ತೆಲ್ಲೂ ಕಾಣಿಸಿಕೊಂಡಿಲ್ಲ. ನಿನ್ನೆಯಷ್ಟೇ ಬರ್ತ್'ಡೇ ಆಚರಿಸಿಕೊಂಡಿರುವ ರಾಧಿಕಾ ಕುಮಾರಸ್ವಾಮಿ ಮಾಧ್ಯಮದ ಮುಂದೆ ಬಂದಿಲ್ಲ. ರಾಧಿಕಾ ಕುಮಾರ ಸ್ವಾಮಿ ವೈವಿಧ್ಯಮಯವಾದ ವಿಷಯಗಳ ಜೊತೆ ಪ್ರಯೋಗ ಮಾಡುವಲ್ಲಿ ನಿಪುಣೆ.

ಸದ್ಯ ರವಿಚಂದ್ರನ್ ನಿರ್ದೇಶನದ ರಾಜೇಂದ್ರ ಪೊನ್ನಪ್ಪ ಸಿನಿಮಾದಲ್ಲಿ ನಟಿಸುತ್ತಿರುವ ರಾಧಿಕಾ ತಮ್ಮ ಮತ್ತೊಂದು ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಿಂದೆ 'ಅಣ್ಣ-ತಂಗಿ' 'ತವರಿಗೆ ಬಾ ತಂಗಿ' ಚಿತ್ರದಲ್ಲಿ  ಒಟ್ಟಿಗೆ ಕಾಣಿಸಿಕೊಂಡಿದ್ದ ಶಿವರಾಜ್ ಕುಮಾರ್ ಹಾಗೂ ರಾಧಿಕ ಕುಮಾರಸ್ವಾಮಿ ಇದೀಗ ಮತ್ತೊಂದು ಸಿನಿಮಾ ಮಾಡುತ್ತಿದ್ದು,  ಈ ಚಿತ್ರಕ್ಕೆ ಸಾಯಿ ಪ್ರಕಾಶ್ ಅವ್ರು ಆಕ್ಷನ್ ಕಟ್ ಹೇಳಲಿದ್ದಾರೆ.  ಇನ್ನು  ಈ ಸಿನಿಮಾ ಮಾರ್ಚ್ ತಿಂಗಳಲ್ಲಿ ಸೆಟ್ಟೇರಲಿದೆ.  ಸೆಂಚ್ಯುರಿ ಸ್ಟಾರ್ ಶಿವಣ್ಣ ತಮ್ಮ ಡೇಟ್ಸ್ ನೀಡಿದ್ದು, ತಮಗೆ ಸಂತೋಷವಾಗಿದೆ ಎಂದು ರಾಧಿಕಾ ಹೇಳಿದ್ದಾರೆ.

ಈ ಚಿತ್ರದ ಜೊತೆಗೆ ರಾಧಿಕಾ ಮತ್ತೊಂದು ಹಾರರ್ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ತಮ್ಮ ಸಹೋದರ ಹಾರರ್ ಸಿನಿಮಾಗಾಗಿ ರಾಧಿಕ ಬಳಿ ಕಥೆ ಹೇಳಿದ್ದಾರೆ.  ಆ ವಸ್ತುವನ್ನಿಟ್ಟುಕೊಂಡು ಸಿನಿಮಾಗಾಗಿ ಚಿತ್ರಕಥೆ ಹಾಗೂ ಸಂಭಾಷಣೆ ತಯಾರಾಗುತ್ತಿದ್ದು,  ಎಲ್ಲವೂ ಒಂದು ಹಂತಕ್ಕೆ ಬಂದ ನಂತರ ಅಧಿಕೃತವಾಗಿ ಪ್ರಕಟಿಸುವುದಾಗಿ ರಾಧಿಕಾ ತಿಳಿಸಿದ್ದಾರೆ. ಅಂದಹಾಗೆ ಇದೇ ಮೊದಲ ಬಾರಿಗೆ ಹಾರರ್ ಸಿನಿಮಾವನ್ನ ನಿರ್ಮಿಸಿ ನಟಿಸುತ್ತಿರೋ ರಾಧಿಕ, ಪ್ರೇಕ್ಷಕರಿಗೆ ಮನರಂಜನೆ ನೀಡುವಂತಹ ಅಂಶಗಳನ್ನು ಇಟ್ಟುಕೊಂಡು ಹಾರರ್ ಚಿತ್ರದ ಮೂಲಕ ಹೊಸಲುಕ್'ನಲ್ಲಿ ಕಮ್ ಬ್ಯಾಕ್ ಆಗಲಿದ್ದಾರಂತೆ. ಒಟ್ಟಾರೆ ಇಷ್ಟು ದಿನ ಗ್ಲಾಮರ್  ಹಾಟ್ ಗೆಟಪ್, ಹೋಮ್ಲಿ ಲುಕ್​ನಲ್ಲಿ ಕಂಗೊಳಿಸಿದ ರಾಧಿಕ ಹಾರರ್ ಲುಕ್'ನಲ್ಲೂ  ಸಿನಿಪ್ರೇಕ್ಷಕರನ್ನ ಬೆಚ್ಚಿಬಿಳಿಸೋದಕ್ಕೆ ಸಜ್ಜಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಅಬ್ಬಬ್ಬಾ, ಕೊನೆಗೂ ಸುದೀಪ್​ ಎದುರೇ ಕಾವ್ಯಾಗೆ ಪ್ರಪೋಸ್​ ಮಾಡಿದ ಗಿಲ್ಲಿ- ಮದ್ವೆ ಊಟ ಯಾವಾಗ?
ಯಶ್ To ಪ್ರಭಾಸ್‌: 2025ರಲ್ಲಿ ಒಂದೂ ಸಿನಿಮಾ ರಿಲೀಸ್ ಮಾಡದೆ ನಿರಾಸೆ ಮೂಡಿಸಿದ ಟಾಪ್ ಹೀರೋಗಳು!