
ಮಂಗಳೂರು(ನ. 11): ದಿನೇದಿನೇ ಸಮೃದ್ಧಿಯಾಗಿ ಬೆಳೆಯುತ್ತಿರುವ ಕೋಸ್ಟಲ್'ವುಡ್'ಗೆ ಈಗ ಹೊಚ್ಚಹೊಸ ಚಿತ್ರವೊಂದು ಸೇರ್ಪಡೆಯಾಗುತ್ತಿದೆ. ಕಿಶೋರ್ ಮೂಡಬಿದ್ರೆ ನಿರ್ದೇಶನದ "ಅಪ್ಪೆ ಟೀಚರ್" ಸೆಟ್ಟೇರಿದೆ. ಇಂದು ಇಲ್ಲಿಯ ಪುರಭವನದಲ್ಲಿ ಅಪ್ಪೆ ಟೀಚರ್'ನ ಮುಹೂರ್ತ ನೆರವೇರಿತು. ತುಳು ಭಾಷೆಯ ಈ ಚಿತ್ರಕ್ಕೆ ಸುನೀಲ್ ಮತ್ತು ನಿರೀಕ್ಷಾ ಶೆಟ್ಟಿ ನಾಯಕ-ನಾಯಕಿಯಾಗಿದ್ದಾರೆ. ತುಳುವಿನ ಖ್ಯಾತ ಕಲಾವಿದರು ಚಿತ್ರದಲ್ಲಿದ್ದಾರೆ. ಜೊತೆಗೆ ಸಾಕಷ್ಟು ಹೊಸ ಮುಖಗಳನ್ನು ಪರಿಚಯಿಸಲಾಗುತ್ತಿದೆ. ಹಲವು ಸ್ಯಾಂಡಲ್ವುಡ್, ಕೋಸ್ಟಲ್'ವುಡ್, ಕೊಂಕಣಿ ಚಿತ್ರಗಳು, ಕನ್ನಡ ಧಾರಾವಾಹಿಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದಿರುವ ಕಿಶೋರ್ ಮೂಡಬಿದ್ರೆ ಅವರು ಮೊತ್ತಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅಪ್ಪೆ ಟೀಚರ್'ಗೆ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಕಿಶೋರ್ ಅವರದ್ದೆಯೇ. ಚಿತ್ರವು ಪಕ್ಕಾ ಕಾಮಿಡಿ ಕಥೆ ಹೊಂದಿದ್ದು, ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯುವ ನಿರೀಕ್ಷೆ ಇದೆ.
ಚಿತ್ರ: ಅಪ್ಪೆ ಟೀಚರ್
ಭಾಷೆ: ತುಳು
ತಾರಾಗಣ: ಸುನೀಲ್, ನಿರೀಕ್ಷಾ ಶೆಟ್ಟಿ, ನವೀನ್ ಪಡೀಲ್, ಅರವಿಂದ್ ಬೋಳಾರ, ಭೋಜರಾಜ್ ವಾಮಂಜೂರು, ಉಮೇಶ್ ಮಿಜರ್, ಗೋಪಿನಾಥ್ ಭಟ್, ಉಷಾ ಭಂಡಾರಿ, ಸತೀಶ್ ಬಂಡಾಳೆ, ಸ್ಟಾನಿ ಅಲ್ವಾರೆಸ್, ಲೂಸಿ ಆರನ್ನಾ, ರೋವನ್ಸ್ ಲಂಡನ್, ಸಂದೀಪ್ ಶೆಟ್ಟಿ ಮಣಿಬೆಟ್ಟು, ರಘು ಪಾಂಡೇಶ್ವರ್, ಲತೀಫ್ ಸಣೂರು, ರಂಜನ್ ಬೋಳಾರ, ಮಿಮಿಕ್ರಿ ಶರಣ್, ದಿನೇಶ್ ಕಾಮತ್, ಕಾಮಿಡಿ ಕಿಲಾಡಿ ಹಿತೇಶ್, ಅನೀಶ್, ವಸಂತ್ ಅಮಿನ್, ಸುಜಾತಾ ಶಕ್ತಿನಗರ್, ಸುಜಾತಾ ಮುದ್ರಾಡಿ, 'ಒಂದು ಮೊಟ್ಟೆಯ ಕಥೆ' ಖ್ಯಾತಿಯ ಶೈಲಶ್ರೀ ಮತ್ತಿತರರು.
ಸಂಗೀತ: ವಾಣಿಲ್ ವೆಗಾಸ್
ಕ್ಯಾಮೆರಾ: ಉದಯ್ ಲೀಲಾ
ಸಂಕಲನ: ಪ್ರದೀಪ್ ನಾಯಕ್
ನಿರ್ಮಾಣ: ರತ್ನಾಕರ್ ಕಾಮತ್, ರವಿಶಂಕರ್ ಪೈ
ನಿರ್ದೇಶನ: ಕಿಶೋರ್ ಮೂಡಬಿದ್ರೆ
ಸಹ-ನಿರ್ದೇಶಕರು: ರಾಮದಾಸ್ ಶಶಿತ್ಲು, ಮಣಿ ಕಾರ್ತಿಕೇಯನ್, ಸ್ವಾತಿಕ್ ಹೆಬ್ಬಾರ್, ಸಂದೀಪ್ ಬೇದ್ರಾ ಮತ್ತು ಕರುಣಾಕರ್ ಆಚಾರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.