
ಬೆಂಗಳೂರು (ಜ. 26): ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಸಿನಿ ಪ್ರೇಕ್ಷಕರಿಗೆ ಹೊಸಬರೇನಲ್ಲ. ಕಣ್ಸನ್ನೇ ಮೂಲಕವೇ ಪಡ್ಡೆ ಹುಡುಗರ ನಿದ್ದೆಗಡಸಿದವರು.
ಪ್ರಿಯಾ ವಾರಿಯರ್ ನಿನ್ನೆ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ನೀವು ಕನ್ನಡ ಸಿನಿಮಾ ನೋಡುತ್ತೀರಾ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದರು. ಆಗ ನಗುತ್ತಲೇ ಉತ್ತರಿಸಿದ ಪ್ರಿಯಾ ಈಗಷ್ಟೇ ಕನ್ನಡ ಚಿತ್ರಗಳನ್ನುನೋಡಲು ಪ್ರಾರಂಭಿಸಿದ್ದೇನೆ. ಇತ್ತೀಚಿಗೆ ಕೆಜಿಎಫ್ ನೋಡಿದ್ದೇನೆ ಎಂದರು.
ಪ್ರಿಯಾ ವಾರಿಯರ್ ರಾಕಿ ಭಾಯ್ ’ಕೆಜಿಎಫ್’ ನೋಡಿದರಂತೆ. ಕೆಜಿಎಫ್ ನ್ನು ಕೊಂಡಾಡಿದ ಪ್ರಿಯಾ ಆ ಚಿತ್ರದ ಡೈಲಾಗ್ ಒಂದನ್ನು ಹೇಳಿ ರಂಜಿಸಿದರು. ಪ್ರಿಯಾ ವಾರಿಯರ್ ನಟನೆಯ ’ಓರು ಅಡಾರ್ಲವ್’ ಸಿನಿಮಾದ ಆಡಿಯೋ ಬಿಡುಗಡೆಗೆ ನಿನ್ನೆ ಬೆಂಗಳೂರಿಗೆ ಬಂದಿದ್ದರು. ಈ ಸಿನಿಮಾ ವ್ಯಾಲಂಟೈನ್ಸ್ ಡೇ ದಿನ ರಿಲೀಸಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.