ಪ್ರಿಯಾ ಹಾಸನ್ ಈಗ 'ಬಿಂದಾಸ್ ಹುಡುಗಿ'

Published : Feb 28, 2017, 10:10 AM ISTUpdated : Apr 11, 2018, 01:13 PM IST
ಪ್ರಿಯಾ ಹಾಸನ್ ಈಗ 'ಬಿಂದಾಸ್ ಹುಡುಗಿ'

ಸಾರಾಂಶ

ಜಂಭದ ಹುಡುಗಿ' ಪ್ರಿಯಾ ಹಾಸನ್ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದು ಗೊತ್ತೇ ಇದೆ. ನಂತರ ನಿರ್ದೇಶಕಿಯೂ ಆಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ ಕೆಲವೇ ಮಹಿಳೆರಲ್ಲಿ ಪ್ರಿಯಾ ಒಬ್ಬರೆನಿಸಿಕೊಂಡರು.

ಜಂಭದ ಹುಡುಗಿ' ಪ್ರಿಯಾ ಹಾಸನ್ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದು ಗೊತ್ತೇ ಇದೆ. ನಂತರ ನಿರ್ದೇಶಕಿಯೂ ಆಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ ಕೆಲವೇ ಮಹಿಳೆರಲ್ಲಿ ಪ್ರಿಯಾ ಒಬ್ಬರೆನಿಸಿಕೊಂಡರು.

ಇದೀಗ ಇವರ ಬಿಂದಾಸ್ ಹುಡುಗಿ ಚಿತ್ರಕ್ಕೆ ಹಾಡುಗಳ ಚಿತ್ರೀಕರಣ ನಡೆಯುತ್ತಿದೆ. ನೆಲಮಂಗಲದ ಬಳಿ ಚಿತ್ರತಂಡ ಹಾಡಿಗಾಗಿ ಹೊಸ ಪಟ್ಟಣದ ಸೆಟ್ ಹಾಕಿಸಿತ್ತು. ಆ ಸೆಟ್ನಲ್ಲಿ ಮಾರುಕಟ್ಟೆ ಹಾಗೂ ಜಾತ್ರೆಯ ಸಂಭ್ರಮವೂ ಇತ್ತು. ಇದೇ ಸಂದರ್ಭದಲ್ಲಿ ನಾಯಕಿ ಪ್ರಿಯಾ ಹಾಸನ್ ನಾಗೇಂದ್ರ ಪ್ರಸಾದ್ ರಚಿಸಿದ ಗೀತೆಗೆ ಸಂಗಡಿಗರೊಂದಿಗೆ ಹೆಜ್ಜೆ ಹಾಕಿದರು.

ನಾಯಕಿಯನ್ನು ಪರಿಚಯಿಸುವ ಹಾಗೂ ಶೀರ್ಷಿಕೆ ಗೀತೆಯೂ ಆಗಿರುವ ಈ ಹಾಡಿಗೆ ಶಿವಾಜಿ ನೃತ್ಯ ಸಂಯೋಜಿಸಿದ್ದಾರೆ. ಗೌರಮ್ಮ ಹಾಗೂ ಮೋಹನ್ ಗೌಡ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಆರ್.ಗಿರಿ ಛಾಯಾಗ್ರಹಣ, ಬಾಬು ಸಂಕಲನ, ಕೌರವ ವೆಂಕಟೇಶ್ ಸಾಹಸ, ಬಿ.ಎ.ಮಧು ಸಂಭಾಷಣೆ ಹಾಗೂ ಜಯಂತ್ ಕಾಯ್ಕಿಣಿ ಮತ್ತು ನಾಗೇಂದ್ರ ಪ್ರಸಾದ್ ಗೀತೆ ರಚನೆಯಿದೆ. ಜಯಂತಿ, ಗಿರಿಜಾ ಲೊಕೇಶ್, ಶರಣ್ ಮುಂತಾದವರು ತಾರಾಗಣದಲ್ಲಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪಣ ತೊಟ್ಟು, ಹಠ ಸಾಧಿಸಿದ ಛಲಗಾರ್ತಿ Ashwini Gowda; ಇದಕ್ಕೆ ಭೇಷ್‌ ಹೇಳಲೇಬೇಕು!
ಹುಡುಗರ ಹೃದಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಟಾಕ್ಸಿಕ್ ಗ್ಲಾಮರ್ ಗೊಂಬೆ ಯಾರು?