
ಮುಂಬೈ (ಆ. 10): ಸಿನಿಮಾ, ಸಿರಿಯಲ್ ಕಲಾವಿದರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲ ದಿನಗಳ ಹಿಂದೆ ಬಾಹುಬಲಿ ನಟ ಮಧು ಪ್ರಕಾಶ್ ಪತ್ನಿ ಭಾರತಿ ನೇಣಿಗೆ ಶರಣಾಗಿದ್ದರು. ಈ ಘಟನೆ ಮರೆಯುವಷ್ಟರಲ್ಲೇ ಇನ್ನೊಂದು ಅಂತದ್ದೇ ಘಟನೆ ನಡೆದಿದೆ.
ನ್ಯಾಷನಲ್ ಅವಾರ್ಡನ್ನು ಸೇನೆಗೆ ಸಲ್ಲಿಸಿದ ‘ಉರಿ’ ನಟ
ಮರಾಠಿ ನಟಿ ಪ್ರಗ್ನ್ಯಾ (45) ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರ ಪತಿ ಉದ್ಯಮಿಯಾಗಿದ್ದರು. ಬ್ಯುಸಿನೆಸ್ ನಲ್ಲಿ ತೀವ್ರ ನಷ್ಟ ಅನುಭವಿಸಿದ್ದರಿಂದ ಅನಿವಾರ್ಯವಾಗಿ ಇವರು ಬಣ್ಣ ಹಚ್ಚಿದರು. ಇವರು ಗಳಿಸಲು ಆರಂಭಿಸಿದರೂ ಮನೆ ಪರಿಸ್ಥಿತಿ ಸುಧಾರಿಸದ ಕಾರಣ ಮನನೊಂದು 18 ವರ್ಷದ ಮಗಳನ್ನೂ ಸಾಯಿಸಿ ಪ್ರಗ್ನ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಹೀಗಿತ್ತು ನೋಡಿ!
ಪತಿ ಪ್ರಕಾಶ್ ವರ್ಮಾ ಜಿಮ್ ಗೆ ತೆರಳಿದ್ದ ವೇಳೆ ಪ್ರಗ್ನ್ಯಾ ನೇಣಿಗೆ ಶರಣಾಗಿದ್ದಾರೆ. ಪ್ರಕಾಶ್ ಜಿಮ್ ನಿಂದ ಬಂದು ಬಾಗಿಲು ತಟ್ಟಿದಾಗ ಎಷ್ಟೊತ್ತಾದರೂ ಬಾಗಿಲು ತೆಗೆಯದೇ ಇದ್ದಾಗ ಬಾಗಿಲು ಪಡೆದು ಮನೆಯೊಳಗೆ ಹೋಗಿದ್ದಾರೆ. ಆಗ ತಾಯಿ-ಮಗಳಿಬ್ಬರೂ ನೇಣಿಗೆ ಶರಣಾಗಿದ್ದು ಗೊತ್ತಾಗಿದೆ. ಮನೆಯಲ್ಲಿನ ಆರ್ಥಿಕ ಸಂಕಷ್ಟವೇ ಪ್ರಗ್ನ್ಯಾ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.