
15ನೇ ವಯಸ್ಸಿನಲ್ಲಿಯೇ ಮಾಡೆಲಿಂಗ್ ಜಗತ್ತಿಗೆ ಬಂದು ಶ್ರೀಮಂತ ವೃದ್ಧನಿಂದ ಅ*ತ್ಯಾಚಾರಕ್ಕೆ ಒಳಗಾಗಿ ಗರ್ಭ ಧರಿಸಿ ಪಡಬಾರದ ಪಾಡು ಪಟ್ಟಿರುವ ಖ್ಯಾತ ನಟಿಯ ಸ್ಟೋರಿ ಇದು. ಖ್ಯಾತ ಹಾಲಿವುಡ್ ತಾರೆ ಪ್ಯಾರಿಸ್ ಹಿಲ್ಟನ್ ಅವರು ತಮ್ಮ ಭಯಾನಕ ಕಥೆಯನ್ನು ಆತ್ಮಕಥನದಲ್ಲಿ ಬರೆದಿದ್ದು, ಇದರಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ನಟಿಯ ಜೊತೆ ಉದ್ಯಮಿ, ಮಾಡೆಲ್ ಮತ್ತು ಟಿವಿ ತಾರೆಯೂ ಆಗಿರುವ ಪ್ಯಾರಿಸ್ ಹಿಲ್ಟನ್, ತಮಗೆ 15 ವರ್ಷದವಳಿರುವಾಗಲೇ ಆಗಿರುವ ಭಯಾನಕ ಕಥೆಯನ್ನು ಹೇಳಿಕೊಂಡಿದ್ದಾರೆ. ಈ ಕುರಿತು ಅವರು ತಮ್ಮ ಆತ್ಮಚರಿತ್ರೆ 'ಪ್ಯಾರಿಸ್: ದಿ ಮೆಮೊಯಿರ್'ಯಲ್ಲಿ ತಿಳಿಸಿದ್ದಾರೆ. ಅವರ ಈ ಪುಸ್ತಕ ಕಳೆದ ವರ್ಷ ಬಿಡುಗಡೆಯಾಗಿದೆ. ಈ ಪುಸ್ತಕದ ಕುರಿತು ನಡೆದ ಸಂದರ್ಶನವೊಂದರಲ್ಲಿ, ಹದಿಹರೆಯದಲ್ಲಿ ನಡೆದ ಅ*ತ್ಯಾಚಾರ, ಮೊದಲ ಲೈಂಗಿಕ ಅನುಭವ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಪ್ಯಾರಿಸ್ ಚಿಕ್ಕ ವಯಸ್ಸಿನಲ್ಲಿಯೇ ಮಾಡೆಲಿಂಗ್ ಜಗತ್ತಿಗೆ ಬಂದವರು. ಆದ್ದರಿಂದ ಸಹಜವಾಗಿ ಎಲ್ಲರ ಕಣ್ಣು ಅವರ ಮೇಲೆ ಇತ್ತು. ಅವರಿಗೆ ಇನ್ನೂ 15 ವರ್ಷವಾಗಿದ್ದಾಗ ನಡೆದಿತ್ತೊಂದು ಭಯಾನಕ ಘಟನೆ. ಅದರ ಕುರಿತು ಅವರು ಹೇಳಿಕೊಂಡಿದ್ದಾರೆ. 'ನಾನು ಸ್ನೇಹಿತನೊಂದಿಗೆ ಮಾಲ್‌ಗೆ ಹೋಗಿದ್ದೆ. ಅಲ್ಲೊಬ್ಬ ದೊಡ್ಡ ಶ್ರೀಮಂತ ವೃದ್ಧರಿಬ್ಬರು. ಹೀಗೆ ಸಹಜವಾಗಿ ಎಲ್ಲರ ಜೊತೆ ಮಾತನಾಡುವಾಗ ಅವರ ಬಳಿಯೂ ಮಾತನಾಡಿದೆ. ಆ ಸಮಯದಲ್ಲಿ ಅವರು ಅವರ ಪೇಜರ್ ನಂಬರ್ ಕೊಟ್ಟರು. ಆಗಾಗ್ಗೆ ನಾನು ಮಾತನಾಡುತ್ತಿದೆ. ಅವರು ವೃದ್ಧರಾಗಿದ್ದರಿಂದ ಅವರ ಮೇಲೆ ಯಾವ ಸಂದೇಹವೂ ನನಗೆ ಬಂದಿರಲಿಲ್ಲ. ಒಂದು ದಿನ ಅವರು ನನ್ನನ್ನು ತಮ್ಮ ಮನೆಗೆ ಆಹ್ವಾನಿಸಿದರು. ಆದರೆ ಇದಕ್ಕೆ ಕಾರಣ ತಿಳಿದಿರಲಿಲ್ಲ. ನನಗೆ ವೈನ್ (wine) ನೀಡಿದರು. ನಾನು ಅದನ್ನು ಸೇವಿಸುವುದಿಲ್ಲ ಎಂದೆ. ಆದರೆ ಖುದ್ದು ಅದನ್ನು ತಯಾರು ಮಾಡಿದ್ದು, ಸ್ವಲ್ಪವಾದರೂ ಕುಡಿ ಎಂದು ಬಲವಂತ ಮಾಡಿದರು. ನಾನು ಕುಡಿದೆ' ಎಂದು ಪ್ಯಾರಿಸ್ ಹೇಳಿದ್ದಾರೆ.
ನಂತರ ಆದ ಭಯಾನಕತೆಯನ್ನು ಅವರು ವಿವರಿಸಿದ್ದಾರೆ. 'ಅಸಲಿಗೆ ಅದರಲ್ಲಿ ಅವರು ಮಾದಕ ದ್ರವ್ಯ ಮಿಕ್ಸ್ ಮಾಡಿದ್ದರು. ನನಗೆ ಅದನ್ನು ಕುಡಿದ ತಕ್ಷಣ ತಲೆತಿರುಗುವಿಕೆ ಮತ್ತು ನಡುಗುವಿಕೆ ಶುರುವಾಯಿತು. ಮುಂದೆ ಏನು ಆಯಿತೋ ಗೊತ್ತಿಲ್ಲ. ಮೂರ್ಛೆ ಬಂದದ್ದಷ್ಟೇ ಗೊತ್ತು. ಕೆಲವು ಗಂಟೆಗಳ ನಂತರ ಎಚ್ಚರಗೊಂಡಾಗ ನನ್ನನ್ನು ಆ ವೃದ್ಧ ರೇಪ್ ಮಾಡಿದ್ದು ತಿಳಿಯಿತು. ಆತ ಇನ್ನೂ ನನ್ನ ಮೈಮೇಲೆ ಇದ್ದ. ಏನಾಯಿತು ಎಂದು ನಿದ್ದೆ ಮಂಪರಿನಲ್ಲಿ ನೋಡುತ್ತಿದ್ದಾಗ ನೀನು ಕನಸು ಕಾಣುತ್ತಿರುವೆ, ನಿನಗೆ ಏನೂ ಆಗಲಿಲ್ಲ ಎಂದು ಹೇಳಿದ. ನನಗೂ ಏನಾಯಿತು ಎಂದೇ ತಿಳಿಯಲಿಲ್ಲ. ಸಂಪೂರ್ಣ ಪ್ರಜ್ಞೆ ಬಂದ ಮೇಲೆ ವಿಷಯ ತಿಳಿಯಿತು' ಎಂದಿದ್ದಾರೆ ಪ್ಯಾರಿಸ್. ಇದಾದ ಬಳಿಕ ಹೈಸ್ಕೂಲ್ ಟೀಚರ್ ಕೂಡ ತನ್ನನ್ನು ಮೋಹಿಸಿ ಅ* ತ್ಯಾಚಾರ ಎಸಗಲು ಪ್ರಯತ್ನಿಸಿರುವ ವಿಷಯವನ್ನು ತಿಳಿಸಿದ್ದಾರೆ. ಒಮ್ಮೆ ಟೀಚರ್ ನನ್ನನ್ನು ಕಾರಿನಲ್ಲಿ ಕುಳ್ಳರಿಸಿಕೊಂಡರು. ಮನೆಗೆ ಡ್ರಾಪ್ ಕೊಡುತ್ತಾರೆ ಎಂದು ಹೋದೆ. ಆದರೆ ಮನೆ ಹತ್ತಿರ ಬರುತ್ತಲೇ ಏಕಾಏಕಿ ಚುಂಬಿಸಲು ಪ್ರಾರಂಭಿಸಿದರು. ಆದರೆ ಆ ಸಮಯದಲ್ಲಿ ನನ್ನ ಹೆತ್ತವರು ಅಲ್ಲಿ ಇದ್ದುದನ್ನು ನೋಡಿ ಹಾಗೆಯೇ ಹೋದರು ಎಂದಿದ್ದಾರೆ.
ನಂತರ ತಮ್ಮ 20ನೇ ವಯಸ್ಸಿನಲ್ಲಿಯೇ ಗರ್ಭಿಣಿಯಾದ ಕುರಿತು ಪ್ಯಾರಿಸ್ ಹೇಳಿಕೊಂಡಿದ್ದಾರೆ. ಇದು ತುಂಬಾ ಅಸಹ್ಯಪಡುವ ವಿಷಯ. ಈ ಬಗ್ಗೆ ನಾನು ಮಾತನಾಡಲು ಇಷ್ಟಪಡುವುದಿಲ್ಲ. ಆದರೆ ಆ ಸಮಯದಲ್ಲಿ ನನಗೆ ಮಗು ಬೇಡವಾಗಿತ್ತು. ಅದು ಆದ ಬಗೆ ಕೂಡ ಹೇಳಿಕೊಳ್ಳಲು ಆಗದ್ದು. ಆದ್ದರಿಂದ ಗರ್ಭಪಾತ ಮಾಡಿಸಿದೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.