ಹೊರಗಡೆ ನೀರು ಕುಡಿಯದಂತೆ ಜನರಿಗೆ ಎಚ್ಚರಿಸಿದ ನಟಿ!

By Web DeskFirst Published May 30, 2019, 12:32 PM IST
Highlights

ದಯವಿಟ್ಟು ಹೊರಗಡೆ ನೀರು ಕುಡಿಯಬೇಡಿ ಎಂದು ಜನರೊಂದಿಗೆ ಮನವಿ ಮಾಡಿಕೊಂಡ ‘ಗೊಂಬೆಗಳ ಲವ್’ ನಟಿ ಪಾವನ.

ಮಳೆಗಾಲ ಶುರುವಾದರೆ ಸಾಕು ಡೆಂಗ್ಯೂ, ಚಿಕೂನ್ ಗುನ್ಯಾ ಚರ್ಮ ಕಾಯಿಲೆ... ಜ್ವರ, ನೆಗಡಿ ಹೀಗೆ ಒಂದಲ್ಲಾ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರೆ ಬಗ್ಗೆ ಸರ್ಕಾರದಿಂದ ಜಾಗೃತಿ ವಿಡಿಯೋ ಬಂದರೂ ಅದನ್ನು ನಂಬುವುದಕ್ಕಿಂತ ನಟ-ನಟಿಯರ ಮಾತುಗಳಿಂದ ಪ್ರಭಾವಿತರಾಗುವುದು ಗ್ಯಾರೆಂಟಿ.

‘ಗೊಂಬೆಗಳ ಲವ್’ ಖ್ಯಾತಿಯ ಪಾವನ ಮಳೆಗಾಲದಲ್ಲಿ ಹೊರಗಡೆ ನೀರು ಕುಡಿದು ಅನಾರೋಗ್ಯಕ್ಕೀಡಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕುವ ಮೂಲಕ ಜನ ಜಾಗೃತಿ ಮೂಡಿಸಿದ್ದಾರೆ. ತೀವ್ರ ಇನ್ ಫೆಕ್ಷನ್ ಆಗಿದ್ದು ವೈದ್ಯರ ಸಲಹೆ ಮೇರೆಗೆ 2 ತಿಂಗಳುಗಳ ಕಾಲ ಹೈ ಆಂಟಿ ಬಯೊಟಿಕ್ ತೆಗೆದುಕೊಳ್ಳಬೇಕಿದೆ ಎಂದಿದ್ದಾರಂತೆ!

 

click me!