ಸಾಂಪ್ರದಾಯಿಕ ಸೀಮಂತದಲ್ಲಿ ಮಿಂಚಿದ ಕಿರುತೆರೆ ನಟಿ!

Published : May 30, 2019, 11:23 AM ISTUpdated : May 30, 2019, 11:24 AM IST
ಸಾಂಪ್ರದಾಯಿಕ ಸೀಮಂತದಲ್ಲಿ ಮಿಂಚಿದ ಕಿರುತೆರೆ ನಟಿ!

ಸಾರಾಂಶ

ಬ್ಯೂಟಿ ಆ್ಯಂಡ್ ಬೋಲ್ಡ್ ದಿಶಾ ಮದನ್ ಸಾಂಪ್ರದಾಯಿಕ ಶೈಲಿಯಲ್ಲಿ ಸೀಮಂತ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸೀಮಂತ ಫೋಟೋಗಳು ವೈರಲ್ ಆಗುತ್ತಿದೆ.

ಕಿರುತೆರೆಯ ಖ್ಯಾತ ಧಾರಾವಾಹಿ ‘ಕುಲವಧು’ ಮೂಲಕ ಜರ್ನಿ ಶುರುಮಾಡಿದ ದಿಶಾ ಮದನ್ ಈಗ ಆನ್‌ಲೈನ್‌ ಜಗತ್ತಿನ ನಾಯಕಿ. ಕೆಲ ತಿಂಗಳುಗಳ ಹಿಂದೆ ‘We are Pregnant’ ಎಂದು ಹೇಳುವ ಮೂಲಕ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು.

ಇತ್ತೀಚಿಗಷ್ಟೆ ಸೀಮಂತ ಕಾರ್ಯಕ್ರಮ ಮಾಡಿಕೊಂಡಿದ್ದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಾಡರ್ನ್ ಆ್ಯಂಡ್ ಟ್ರೆಂಡಿ ಇದ್ದರೂ ಸಾಂಪ್ರದಾಯಿಕವಾಗಿ ಸೀಮಂತ ಮಾಡಿಕೊಂಡಿದ್ದಾರೆ. ಸೀಮಂತ ಕಾರ್ಯಕ್ರಮದಲ್ಲಿ ಮೈಸೂರಿನ ಹರಿಕಥೆ ಹಾಡುವರು ಹಾಗೂ ಬಳೆಗಾರರು ಸೇರಿ ಹೆಚ್ಚು ಬೆರಗು ತಂದಿದ್ದಾರೆ. ಸದ್ಯಕ್ಕೆ 7 ನೇ ತಿಂಗಳಲ್ಲಿರುವ ದಿಶಾ ಆಗಸ್ಟ್ ನಲ್ಲಿ ಅತಿಥಿ ಆಗಮನಕ್ಕೆ ಕಾಯುತ್ತಿದ್ದಾರೆ.

 

ಇನ್ನು ‘ಕುಲವಧು’ ಧಾರಾವಾಹಿ ನಂತರ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು ಆನಂತರ ಆನ್‌ಲೈನ್‌ ಪ್ರಪಂಚದಲ್ಲಿ ಟಿಕ್ ಟಾಕ್, ಮೂಸಿಕಲಿ ಹಾಗೂ ಯೂಟ್ಯೂಬ್ ವಿಡಿಯೋ ಮಾಡುವ ಮೂಲಕ ಜನರಿಗೆ ಹತ್ತಿರವಾದರು. ಅಷ್ಟೇ ಅಲ್ಲದೆ ಶಿವರಾಜ್ ಕುಮಾರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ವೆಬ್ ಸೀರಿಸ್ ನಲ್ಲಿ ಅಭಿನಯಿಸಿದ್ದರು. ಆಗಸ್ಟ್ ತಿಂಗಳಲ್ಲಿ Sakkat Studio ಚಾನೆಲ್ ನಲ್ಲಿ ರಿಲೀಸ್ ಆಗಲಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Darshan The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ ದರ್ಶನ್‌ ಮೆಸೇಜ್
BBK 12: ಕನ್ನಡ ಬಿಗ್‌ಬಾಸ್ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ದೂರು ನೀಡಿದ ವೀಕ್ಷಕರು