’ಪುಟ್ಟಗೌರಿ’ ಮನೆಗೆ ಹಬ್ಬಕ್ಕೂ ಮೊದಲೇ ಬಂದ ಪುಟಾಣಿ ಗಣೇಶ!

Published : Sep 01, 2019, 02:13 PM IST
’ಪುಟ್ಟಗೌರಿ’ ಮನೆಗೆ ಹಬ್ಬಕ್ಕೂ ಮೊದಲೇ ಬಂದ ಪುಟಾಣಿ ಗಣೇಶ!

ಸಾರಾಂಶ

ಕಿರುತೆರೆಯ ಖ್ಯಾತ ನಟಿ ನಯನಾ ತಾಯಿಯಾಗಿದ್ದಾರೆ. ಗಣೇಶ ಚತುರ್ಥಿಗೂ ಮೊದಲೇ ಮುದ್ದು ಮುದ್ದು ಗಣೇಶ ಮನೆಗೆ ಬಂದಿದ್ದಾನೆ. 

ಪುಟ್ಟಗೌರಿ, ಸತ್ಯಂ ಶಿವಂ ಸುಂದರಂ ನಟಿ ನಯನಾ ಮನೆಗೆ ಗಣೇಶ ಹಬ್ಬಕ್ಕೂ ಮೊದಲೇ ಪುಟಾಣಿ ಗಣೇಶ ಆಗಮಿಸಿದ್ದಾರೆ. ನಯನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 

ನಯನಾ ಪತಿ ವೆಂಕಟೇಶ್ ಪ್ರಸಾದ್ ಈ ಸಂತಸವನ್ನು ಹಂಚಿಕೊಂಡಿದ್ದಾರೆ. ‘ನಮ್ಮ ಮನೆಗೆ ಪುಟಾಣಿ ಅತಿಥಿ ಆಗಮಿಸಿದ್ದಾನೆ. ನಯನಾಗೆ ನಾರ್ಮಲ್ ಹೆರಿಗೆಯಾಗಿದೆ. ಅಮ್ಮ- ಮಗು ಕ್ಷೇಮವಾಗಿದ್ದಾರೆ. ವೈದ್ಯರ ಸಲಹೆ ಮೇರೆಗೆ ನಯನಾ ಮೊಬೈಲ್ ಬಳಸುತ್ತಿಲ್ಲ. ಸದ್ಯದಲ್ಲೇ ಹಿಂತಿರುಗಲಿದ್ದಾರೆ. ನಿಮ್ಮೆಲ್ಲರ ಹಾರೈಕೆ ಧನ್ಯವಾದಗಳು’ ಎಂದಿದ್ದಾರೆ. 

’ಚಿಕ್ಕಮ್ಮ’ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟವರು ನಯನಾ. ಆ ನಂತರ ಮನೆದೇವ್ರು, ಗಾಳಿಪಟ, ಪುಟ್ಟಗೌರಿ ಮದುವೆ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಬ್ರೇಕ್ ತೆಗೆದುಕೊಂಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಿರುತೆರೆ ನಟ-ನಟಿಯರ ಮೊದಲ ಕ್ರಷ್​ ಯಾರು? ಕೊನೆಗೂ ರಿವೀಲ್​ ಮಾಡಿದ್ರು ಬಹುದೊಡ್ಡ ಸಿಕ್ರೇಟ್​
ಕೇಕ್​ ಕಟ್​ ಮಾಡಿ ರಕ್ಷಿತಾ ಶೆಟ್ಟಿ ಪ್ರೇಮಿಗಳ ದಿನ ಆಚರಣೆ: ಕೊನೆಗೂ ಗುಟ್ಟು ರಟ್ಟು ಮಾಡಿದ Bigg Boss ಪುಟ್ಟಿ ಹೇಳಿದ್ದೇನು?