ಮಜಾ ಟಾಕೀಸ್ ಪವನ್ ಚಿತ್ರಕ್ಕೆ ಮೇಘನಾ ನಿರ್ಮಾಪಕಿ!

Published : Apr 27, 2019, 11:07 AM IST
ಮಜಾ ಟಾಕೀಸ್ ಪವನ್ ಚಿತ್ರಕ್ಕೆ ಮೇಘನಾ ನಿರ್ಮಾಪಕಿ!

ಸಾರಾಂಶ

ನಟಿ ಮೇಘನಾ ರಾಜ್‌ ನಿರ್ಮಾಪಕಿಯೂ ಆಗಿದ್ದಾರೆ. ಸದ್ಯ ‘ಪುಟಾಣಿ ಪಂಟ​ರ್‍ಸ್’ ಎನ್ನುವ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ತಮ್ಮದೇ ಹೆಸರಿನ ಮೇಘನಾ ಸಿನಿಮಾಸ್‌ ಮೂಲಕ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ.

ಮಜಾ ಟಾಕೀಸ್‌ ಖ್ಯಾತಿಯ ಪವನ್‌ಕುಮಾರ್‌ ಕತೆ ಬರೆದು ಮೊದಲ ಬಾರಿ ನಿರ್ದೇಶನದ ಜೊತೆಗೆ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಮೊನ್ನೆಯಷ್ಟೇ ಈ ಚಿತ್ರಕ್ಕೆ ಮುಹೂರ್ತ ನಡೆಯಿತು. ಬೆಂಗಳೂರಿನ ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ನಡೆದ ಚಿತ್ರದ ಮುಹೂರ್ತ ಪತ್ರಿಕಾಗೋಷ್ಟಿಯಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ಮಿಸ್ಟ್ರಿ, ಥ್ರಿಲ್ಲರ್‌ ಕತೆ ಇರಲಿದೆ. ಭವಿಷ್ಯದಲ್ಲಿ ದೇಶವು ಒಳ್ಳೆಯದಾಗಬೇಕೆಂದು ಬಯಸುವ ಮಕ್ಕಳು ಒಂದು ಸಾಹಸಕ್ಕೆ ಕೈ ಹಾಕುತ್ತಾರೆ. ಅದು ಏನೆಂಬುದರ ವಿವರವನ್ನು ತಂಡವು ಗೌಪ್ಯತೆಯನ್ನು ಕಾಪಾಡಿಕೊಂಡಿದೆ. ಹೀಗಾಗಿ ಇದೊಂದು ಮಕ್ಕಳ ಸಾಹಸಮಯ ಸಿನಿಮಾ ಎಂದೇ ಹೇಳಬಹುದು.

ಕಾಮಿಡಿ ಕಥೆಯಲ್ಲಿ ಒಂದಾಯ್ತು ವಿವಾಹಿತ ಜೋಡಿ?

ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಸುಂದರ್‌ರಾಜ್‌ ದಂಪತಿ ಆಗಮಿಸಿ ಮೇಘನಾ ರಾಜ್‌ ಮೊದಲ ನಿರ್ಮಾಣದ ಚಿತ್ರಕ್ಕೆ ಶುಭ ಕೋರಿದರು. ‘ನಾನು ನಟಿ, ಗಾಯಕಿ, ಈಗ ನಿರ್ಮಾಪಕಿ. ಒಳ್ಳೆಯ ಕತೆಯೊಂದನ್ನು ಎಲ್ಲರು ತೆರೆ ಮೇಲೆ ನೋಡಬೇಕೆಂಬ ಕನಸಿನೊಂದಿಗೆ ಈ ಚಿತ್ರವನ್ನು ನಿರ್ಮಿಸುವುದಕ್ಕೆ ಮುಂದಾಗಿರುವೆ. ನನ್ನ ಈ ಕನಸಿಗೆ ಚಿರಂಜೀವಿ ಸರ್ಜಾ ಕೂಡ ಸಾಥ್‌ ನೀಡುತ್ತಿದ್ದಾರೆ. ಮಜಾ ಟಾಕೀಸ್‌ ಪವನ್‌ ಅವರು ಬಂದು ಕತೆ ಹೇಳಿದಾಗ ನನಗೆ ಕತೆ ಹಿಡಿಸಿತು’ ಎಂಬುದು ಮೇಘನಾ ರಾಜ್‌ ಅವರ ಮಾತು.

ಹೇಮಂತ್‌, ಹರಿಪ್ರೀತಮ್‌, ಸುಚಿತ್‌, ದೀಕ್ಷಿತ್‌, ಶಿವಾನಿ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿಕ್ಕವರ ಜತೆ ಸುಂದರ್‌ ರಾಜ್‌, ಪ್ರಮೀಳಾ ಜೋಷಾಯ್‌, ಸ್ಪರ್ಶ ರೇಖಾ, ರಮೇಶ್‌ ಪಂಡಿತ್‌, ರಾಜೇಶ್‌ ನಟರಂಗ, ನಾಗರಾಜ್‌ ಮೂರ್ತಿ, ಮುಖ್ಯಮಂತ್ರಿ ಚಂದ್ರು, ಮೈಕೂ ಚಂದ್ರು ಮುಂತಾದ ಹಿರಿ ಕಲಾವಿದರೂ ಕೂಡ ಇದ್ದಾರೆ.

ಮೇಘನಾ ರಾಜ್‌ ಅವರೊಂದಿಗೆ ಸಹ ನಿರ್ಮಾಪಕರಾಗಿ ಅಶೋಕ್‌ ಸುಲೇಗಾಯ್‌, ಜಿ.ಆರ್‌.ಮೋಹನ್‌ಕುಮಾರ್‌, ರಥಾವರ ನಿರ್ಮಾಪಕ ಧರ್ಮಶ್ರೀ ಮಂಜುನಾಥ್‌, ಗೋಂದರಾಜುಲು ಮತ್ತು ಪ್ರವೀಣ್‌.ಎಂ ಅವರು ಇದ್ದಾರೆ. ಬಿ ಎಸ್‌ ಮೀರಾ ಸಾಹಿತ್ಯದ ಮೂರು ಹಾಡುಗಳಿಗೆ ಕೊಳಲುವಾದಕ ವಸಂತ್‌ಕುಮಾರ್‌.ಎಲ್‌.ಎನ್‌ ಅವರ ಸಂಗೀತ ಇದೆ. ಹೊಸೆಯುತ್ತಿದ್ದಾರೆ. ಸಂತೋಷ್‌ಹರಿತ್ಸ ಅವರು ಕ್ಯಾಮೆರಾ ಹಿಡಿದರೆ, ಕುಮಾರ್‌ ಕೆರಗೋಡು ಸಂಭಾಷಣೆ ಬರೆಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ರೊಮ್ಯಾನ್ಸ್‌ ಎಂದ ರಜತ್;‌ ಎಪಿಸೋಡ್‌ನಲ್ಲಿ ಇಲ್ಲ ಅಂತ ವೀಕ್ಷಕರು ಅಂದ್ಕೊಂಡ್ರೆ ಏನ್‌ ಮಾಡಲಿ?: ರಾಶಿಕಾ
Tithi Movie: ಕೂಲಿ ಕೆಲಸ ಮಾಡ್ತಿದ್ದಾರೆ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾದ ನಾಯಕ ನಟ