'ಕೆಲವು ಗಂಡಸರು ನನ್ನನ್ನು ಹಿಂಬಾಲಿಸುತ್ತಿದ್ದಾರೆ': ನಟಿ ಕೃತಿ ಸನೋನ್ ಪೋಸ್ಟ್ ವೈರಲ್

Published : Sep 27, 2026, 03:29 PM IST
Kriti Sanon

ಸಾರಾಂಶ

ಬಾಲಿವುಡ್ ನಟಿ ಕೃತಿ ಸನೋನ್ 'ಡಾಟರ್ಸ್ ಡೇ' ದಿನ ಹೆಣ್ಣುಮಕ್ಕಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಪ್ರತಿದಿನ ಪಡುವ ಪಾಡು ಹಾಗೂ ಭಯವಿಲ್ಲದೆ ಬದುಕುವ ವಾತಾವರಣ ನಿರ್ಮಾಣವಾಗಬೇಕೆಂಬ ಆಶಯವನ್ನು ಅವರು ಹಂಚಿಕೊಂಡಿದ್ದಾರೆ.

ದೇಶದಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಬಗ್ಗೆ ದಿನೇ ದಿನೇ ಆತಂಕ ಹೆಚ್ಚಾಗುತ್ತಿದೆ. ಈ ಬಗ್ಗೆ ಬಾಲಿವುಡ್ ನಟಿ ಕೃತಿ ಸನೋನ್ ಧ್ವನಿ ಎತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಸುರಕ್ಷಿತವಾಗಿರಲು ಪ್ರತಿದಿನ ಏನೆಲ್ಲಾ ಕಷ್ಟಪಡಬೇಕು ಅನ್ನೋದರ ಬಗ್ಗೆ ಸಮಾಜ ಯೋಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. 'ಡಾಟರ್ಸ್ ಡೇ' (ಮಗಳ ದಿನ) ಪ್ರಯುಕ್ತ ಅವರು ಒಂದು ಪೋಸ್ಟ್ ಹಾಕಿದ್ದಾರೆ. "ಯಾರೋ ನನ್ನನ್ನು ಫಾಲೋ ಮಾಡ್ತಿದ್ದಾರೆ ಅಂತ ನಿಮ್ಮ ಮಗಳು ಕಾಲ್ ಮಾಡಿ ಹೇಳಿದ್ರೆ ಹೇಗಿರುತ್ತೆ ಊಹಿಸಿಕೊಳ್ಳಿ. ರಾತ್ರಿ ಹೊತ್ತು ಒಬ್ಬಳೇ ಮನೆಗೆ ನಡೆದುಕೊಂಡು ಹೋಗುವಾಗ, ಪದೇ ಪದೇ ಹಿಂದಿರುಗಿ ನೋಡುವ ಪರಿಸ್ಥಿತಿ ಬಂದರೆ? ಮನೆ ತಲುಪುವ ಮುನ್ನವೇ ಫೋನ್ ಬ್ಯಾಟರಿ ಡೆಡ್ ಆದ್ರೆ? ಒಮ್ಮೆ ಯೋಚಿಸಿ" ಎಂದು ಕೃತಿ ಬರೆದುಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕೃತಿ ಸನೋನ್, "ಈ ಡಾಟರ್ಸ್ ಡೇ ದಿನ, ನಿಮ್ಮ ಮಗಳು ನಿಮಗೆ ಕರೆ ಮಾಡಿ 'ಕೆಲವು ಗಂಡಸರು ನನ್ನನ್ನು ಹಿಂಬಾಲಿಸುತ್ತಿದ್ದಾರೆ' ಎಂದು ಹೇಳುವುದನ್ನು ಊಹಿಸಿಕೊಳ್ಳಿ. ರಾತ್ರಿ ಅವಳು ಒಬ್ಬಳೇ ಮನೆಗೆ ನಡೆಯುವಾಗ, ಭಯದಿಂದ ಹಿಂದಿರುಗಿ ನೋಡುವುದನ್ನು ಕಲ್ಪಿಸಿಕೊಳ್ಳಿ. ಮನೆ ಸೇರುವ ಮುನ್ನ ಅವಳ ಫೋನ್ ಸ್ವಿಚ್ ಆಫ್ ಆದರೆ ಹೇಗಿರುತ್ತೆ? ಈಗ ಇದನ್ನೆಲ್ಲಾ ಸ್ವಲ್ಪ ಆಳವಾಗಿ ಯೋಚಿಸಿ..." ಎಂದು ಅವರು ಬರೆದಿದ್ದಾರೆ.

ಮಹಿಳೆಯರ ದಿನನಿತ್ಯದ ಸುರಕ್ಷತಾ ಕ್ರಮಗಳ ಬಗ್ಗೆ ಕೃತಿ ಮಾತು

ಮಹಿಳೆಯರು ತಮ್ಮ ಸುರಕ್ಷತೆಗಾಗಿ ಪ್ರತಿದಿನ ಏನೆಲ್ಲಾ ಮಾಡ್ತಾರೆ ಅನ್ನೋದನ್ನು ಕೃತಿ ಬಿಚ್ಚಿಟ್ಟಿದ್ದಾರೆ. ಲೈವ್ ಲೊಕೇಶನ್ ಶೇರ್ ಮಾಡುವುದು, ಪೆಪ್ಪರ್ ಸ್ಪ್ರೇ ಇಟ್ಟುಕೊಳ್ಳುವುದು, ನಡೆದುಕೊಂಡು ಹೋಗುವ ಬದಲು ಕ್ಯಾಬ್ ಬುಕ್ ಮಾಡುವುದು ಮತ್ತು ಪ್ರಯಾಣಿಸುವಾಗ ಯಾರಿಗಾದರೂ ಕಾಲ್ ಮಾಡಿಕೊಂಡೇ ಇರುವುದು - ಇವೆಲ್ಲವೂ ಈಗ ಮಹಿಳೆಯರ ಜೀವನಶೈಲಿಯ ಒಂದು ಭಾಗವೇ ಆಗಿಬಿಟ್ಟಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

"ಯಾವತ್ತು ಒಬ್ಬ ಮಗಳು ರಾತ್ರಿ ಹೊತ್ತು ನಿರ್ಭಯವಾಗಿ ಒಬ್ಬಳೇ ಮನೆಗೆ ನಡೆದುಕೊಂಡು ಹೋಗ್ತಾಳೋ, ಕತ್ತಲಾದ ಮೇಲೆ ಪಾರ್ಕ್‌ನಲ್ಲಿ ಕೂರುತ್ತಾಳೋ, ತನಗೆ ಇಷ್ಟವಾದ ಬಟ್ಟೆ ಹಾಕಿಕೊಳ್ಳುತ್ತಾಳೋ, ಭಯವಿಲ್ಲದೆ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಸುತ್ತಾಳೋ... ತನ್ನ ಮೇಲೆ ದಾಳಿಯಾಗಬಹುದು ಎಂಬ ಭಯವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಇರುತ್ತಾಳೋ... ಆ ದಿನ ನಾವು ನಿಜವಾದ 'ಡಾಟರ್ಸ್ ಡೇ' ಆಚರಿಸಬೇಕು," ಎಂದು ಅವರು ಹೇಳಿದ್ದಾರೆ.

ಭಯವಿಲ್ಲದ ಭವಿಷ್ಯಕ್ಕಾಗಿ ಒಂದು ಸಂದೇಶ

ಮನೆಗೆ ಸುರಕ್ಷಿತವಾಗಿ ತಲುಪಿದ ಮೇಲೆ 'ನಾನು ರೀಚ್ ಆದೆ' ಎಂದು ತಮ್ಮ ಕುಟುಂಬಕ್ಕೆ ಕರೆ ಮಾಡಿ ಹೇಳುವ ಪ್ರತಿಯೊಬ್ಬ ಮಗಳಿಗೂ ಕೃತಿ ಒಂದು ಸಂದೇಶ ನೀಡಿದ್ದಾರೆ. ಮುಂದೆ ಇಂಥದ್ದೊಂದು ಭರವಸೆ ನೀಡುವ ಅಗತ್ಯವೇ ಬಾರದಂತಹ ವಾತಾವರಣ ನಿರ್ಮಾಣವಾಗಲಿ ಎಂದು ಅವರು ಆಶಿಸಿದ್ದಾರೆ.

"ಮನೆಗೆ ಕರೆ ಮಾಡಿ 'ನಾನು ರೀಚ್ ಆದೆ' ಎಂದು ಹೇಳುವ ಪ್ರತಿಯೊಬ್ಬ ಮಗಳಿಗೂ... ಮುಂದೊಂದು ದಿನ ನೀವು ಹೀಗೆ ಹೇಳುವ ಅಗತ್ಯವೇ ಇಲ್ಲದ ಜಗತ್ತಿನಲ್ಲಿ ಬದುಕುವಂತಾಗಲಿ. ನಮ್ಮ ಹೆಣ್ಣುಮಕ್ಕಳು ಅಂಥದ್ದೊಂದು ಜಗತ್ತಿಗೆ ಅರ್ಹರು! ಮತ್ತು ಆ ಜಗತ್ತನ್ನು ನಾವು ಅವರಿಗೆ ಕೊಡಲೇಬೇಕು!" ಎಂದು ಅವರು ಮಾತು ಮುಗಿಸಿದ್ದಾರೆ.

ಇನ್ನು ಇತ್ತೀಚಿನ ಘಟನೆಗಳ ನಂತರ ಮಹಿಳೆಯರ ಸುರಕ್ಷತೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮತ್ತೆ ಆತಂಕ ಶುರುವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸ್ವಾತಂತ್ರ್ಯ ಮತ್ತು ಭದ್ರತೆಯ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ಕೃತಿ ಸನೋನ್ ಅವರ ಈ ಪೋಸ್ಟ್ ಮತ್ತಷ್ಟು ಧ್ವನಿಗೂಡಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ರಾಮಾಯಣ-1' ಪೋಸ್ಟರ್ ಔಟ್.. ಜೈಕಾರ ಪಡೆದ 'ಮೂರು ಲೋಕಗಳ ಅಧಿಪತಿ ರಾವಣ' ಯಶ್!
ಮಗಳ ದೇಹ ಸೇರುವ ತಾಯಿ ಆತ್ಮ; ಇದುವೇ ನೋಡಿ ಕನ್ನಡದ ಹಾರರ್ ಸಿನಿಮಾ! ಸೇಡಿನ ರೋಚಕ ಕತೆ