
ಬಾಲಿವುಡ್ ಧಡಕ್ ಹುಡುಗಿ ಜಾಹ್ನವಿ ಕಪೂರ್ ರೋಲ್ ಮಾಡಲ್ ಆಕೆ ತಾಯಿ ಶ್ರೀದೇವಿ. ಸೂಪರ್ ಸ್ಟಾರ್‌ಗಳ ಜೊತೆ ಹಿಟ್ ಚಿತ್ರಗಳನ್ನು ಮಾಡುತ್ತಾ ಎವರ್ ಗ್ರೀನ್ ನಟಿ ಎಂದೇ ಖ್ಯಾತರಾದ ಶ್ರೀದೇವಿ ಸಿನಿಮಾ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರ ಸಿಕ್ಕಾಪಟ್ಟೆ ಬೇಸರ ತಂದಿತ್ತು.
ವೈರಲ್ ಚೆಕ್: ಮೋದಿ ಬೆಂಬಲಿಸಿ ಜಾಹ್ನವಿ ಟ್ವೀಟ್ ಮಾಡಿದ್ರಾ?
ಹೌದು ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಬಾಹುಬಲಿ ಚಿತ್ರಕ್ಕೆ ಶ್ರೀದೇವಿಗೆ ಶಿವಗಾಮಿಕ್ಕೆ ಪಾತ್ರ ಮಾಡುವಂತೆ ಆಫರ್ ನೀಡಿದರು. ಯೋಚನೆ ಮಾಡದೆ ನನಗೆ ಈ ಸಿನಿಮಾ ಬೇಡವೆಂದು ಶ್ರೀದೇವಿ ದೂರ ಉಳಿದರು. ಆ ನಂತರ ಈ ಪಾತ್ರಕ್ಕೆ ರಮ್ಯಾ ಕೃಷ್ಣ ಆಯ್ಕೆಯಾಗಿ ಚಿತ್ರದಲ್ಲಿ ಅವರ ಪಾತ್ರ ಹಿಟ್ ಆಗಿತ್ತು.
ಶ್ರೀದೇವಿಯ ಸಿನಿಮಾ ನೋಡಿ ಜಾಹ್ನವಿ ಮಾತೇ ಬಿಟ್ಟಿದ್ದಳಂತೆ!
ಕೆಲ ತಿಂಗಳುಗಳ ಹಿಂದೆ ರಾಜಮೌಳಿ ತಮ್ಮ ಹೊಸ ಚಿತ್ರಕ್ಕಾಗಿ ಜಾಹ್ನವಿ ಕಪೂರ್‌ಗೆ ಆಫರ್ ನೀಡಲಾಗಿತ್ತು. ಬಟ್ ಈ ಆಫರನ್ನು ರಿಜೆಕ್ಟ್ ಮಾಡಿ ಜಾಹ್ನವಿ ರಾಜಮೌಳಿ ಚಿತ್ರದಿಂದ ದೂರ ಉಳಿದರು. ರಾಜಮೌಳಿ ಚಿತ್ರದಲ್ಲೇ ನಟಿಸುವ ಅವಕಾಶ ಸಿಕ್ಕರೆ ಸಾಕು ಎಂದು ಕಾಯುವ ಜನರು ಇದ್ದಾರೆ. ಆದರೆ ಜಾಹ್ನವಿ ರಿಜೆಕ್ಟ್ ಮಾಡಿರುವುದರಿಂದ ಅಮ್ಮ ಮಾಡಿದ ತಪ್ಪನ್ನೇ ಮಗಳು ಮಾಡುತ್ತಿದ್ದಾಳೆ ಎಂದು ಬಿ-ಟೌನ್‌ನಲ್ಲಿ ಮಾತಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.