
ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ‘ದಿ ಪ್ಯಾರಡೈಸ್’ ಸಿನಿಮಾ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ‘ದಸರಾ’ ಖ್ಯಾತಿಯ ನಿರ್ದೇಶಕ ಶ್ರೀಕಾಂತ್ ಒಡೆಲಾ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದು, ಕಯಾದು ಲೋಹರ್ ನಾಯಕಿಯಾಗಿ ನಟಿಸಿದ್ದಾರೆ. ಆದರೆ ಸದ್ಯ ಸದ್ದು ಮಾಡುತ್ತಿರುವ ವಿಚಾರ ಏನೆಂದರೆ, ಈ ಪಾತ್ರಕ್ಕೆ ಕಯಾದು ಮೊದಲ ಆಯ್ಕೆಯಾಗಿರಲಿಲ್ಲವಂತೆ. ಅದಕ್ಕೂ ಮುನ್ನ ಒಬ್ಬ ಸ್ಟಾರ್ ನಟಿಗೆ ಚಿತ್ರತಂಡ ಆಫರ್ ನೀಡಿತ್ತಂತೆ. ಆದರೆ ಆಕೆ ಸಿನಿಮಾ ಮಾಡಲು ‘ನೋ’ ಎಂದಿದ್ದರಿಂದ ಕಯಾದು ಲೋಹರ್‌ಗೆ ಅವಕಾಶ ಸಿಕ್ಕಿದೆ ಎನ್ನಲಾಗುತ್ತಿದೆ.
ಬಾಕ್ಸ್ ಆಫೀಸ್‌ನಲ್ಲಿ ‘ದಿ ಪ್ಯಾರಡೈಸ್’ ಅಬ್ಬರ
ನಾನಿ ನಟನೆಯ ‘ದಿ ಪ್ಯಾರಡೈಸ್’ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಮಾತ್ರ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಚಿತ್ರತಂಡದ ಅಧಿಕೃತ ಮಾಹಿತಿಯ ಪ್ರಕಾರ, ಬಿಡುಗಡೆಯಾದ ಎರಡು ದಿನಗಳಲ್ಲಿ ಸಿನಿಮಾ ಬರೋಬ್ಬರಿ 114 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
‘ದಸರಾ’ ಖ್ಯಾತಿಯ ಶ್ರೀಕಾಂತ್ ಒಡೆಲಾ ನಿರ್ದೇಶಿಸಿರುವ ಈ ಆ್ಯಕ್ಷನ್ ಎಂಟರ್‌ಟೈನರ್‌ನಲ್ಲಿ ನಾನಿ ‘ಜಡಲ್’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಕಯಾದು ಲೋಹರ್ ‘ಸುಬ್ಬು’ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಜೊತೆಗೆ ಮೋಹನ್ ಬಾಬು, ರಾಘವ್ ಜುಯೆಲ್, ಸಂಪೂರ್ಣೇಶ್ ಬಾಬು, ಸೋನಲ್ ಕುಲಕರ್ಣಿ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಕಯಾದು ಲೋಹರ್ ಮೊದಲ ಆಯ್ಕೆಯಾಗಿರಲಿಲ್ಲ!
‘ದಿ ಪ್ಯಾರಡೈಸ್’ ಸಿನಿಮಾ ಸಕ್ಸಸ್ ನಡುವೆ ಇದೀಗ ಸಿನಿಮಾಗೆ ಸಂಬಂಧಿಸಿದ ಮತ್ತೊಂದು ಕುತೂಹಲಕಾರಿ ವಿಚಾರ ಹೊರಬಿದ್ದಿದೆ. ಚಿತ್ರದ ‘ಸುಬ್ಬು’ ಪಾತ್ರಕ್ಕಾಗಿ ನಿರ್ದೇಶಕ ಶ್ರೀಕಾಂತ್ ಒಡೆಲಾ ಹಾಗೂ ನಿರ್ಮಾಪಕರ ಮೊದಲ ಆಯ್ಕೆ ಕಯಾದು ಲೋಹರ್ ಆಗಿರಲಿಲ್ಲ ಎನ್ನಲಾಗುತ್ತಿದೆ. ಮತ್ತೊಬ್ಬ ಸ್ಟಾರ್ ನಟಿಗೆ ಈ ಪಾತ್ರವನ್ನು ಆಫರ್ ಮಾಡಲಾಗಿತ್ತು. ಆದರೆ ಆ ನಟಿ ಸಿನಿಮಾವನ್ನು ರಿಜೆಕ್ಟ್ ಮಾಡಿದ ಬಳಿಕ ಚಿತ್ರತಂಡ ಕಯಾದು ಲೋಹರ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿತು ಎಂಬ ಸುದ್ದಿ ಹರಿದಾಡುತ್ತಿದೆ.
ಆ ಸ್ಟಾರ್ ನಟಿ ಯಾರು ಗೊತ್ತಾ?
ಅಷ್ಟಕ್ಕೂ ನಾನಿ ಜೊತೆ ನಟಿಸುವ ಅವಕಾಶವನ್ನು ಕೈಬಿಟ್ಟ ಆ ಸ್ಟಾರ್ ನಟಿ ಯಾರು ಎಂಬ ಪ್ರಶ್ನೆ ಈಗ ಅಭಿಮಾನಿಗಳಲ್ಲಿ ಮೂಡಿದೆ. ಆ ನಟಿ ಬೇರಾರೂ ಅಲ್ಲ, ಬಾಲಿವುಡ್‌ನ ಕ್ರೇಜಿ ನಟಿ ಜಾನ್ವಿ ಕಪೂರ್ ಎನ್ನಲಾಗುತ್ತಿದೆ. ಜೂ. ಎನ್‌ಟಿಆರ್ ನಟನೆಯ ‘ದೇವರ’ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಜಾನ್ವಿ ಕಪೂರ್, ಬಳಿಕ ರಾಮ್ ಚರಣ್ ಅಭಿನಯದ ‘ಪೆದ್ದಿ’ ಸಿನಿಮಾದಲ್ಲೂ ನಟಿಸಿದ್ದಾರೆ. ಇದೇ ಸಮಯದಲ್ಲಿ ‘ದಿ ಪ್ಯಾರಡೈಸ್’ ಸಿನಿಮಾಗಾಗಿ ಕೂಡ ಚಿತ್ರತಂಡ ಜಾನ್ವಿ ಅವರನ್ನು ಸಂಪರ್ಕಿಸಿತ್ತಂತೆ.
ಆ ಒಂದೇ ಕಾರಣಕ್ಕೆ ‘ನೋ’ ಎಂದಿದ್ದರಂತೆ!
ಆದರೆ ಆಗಲೇ ಜಾನ್ವಿ ಕಪೂರ್ ‘ಪೆದ್ದಿ’ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ಕಾರಣ, ‘ದಿ ಪ್ಯಾರಡೈಸ್’ ಸಿನಿಮಾದ ಆಫರ್ ಅನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಅವರು ನಾನಿ ಸಿನಿಮಾದಿಂದ ಹಿಂದೆ ಸರಿದಿದ್ದು, ನಂತರ ಚಿತ್ರತಂಡ ‘ಸುಬ್ಬು’ ಪಾತ್ರಕ್ಕಾಗಿ ಕಯಾದು ಲೋಹರ್ ಅವರನ್ನು ಆಯ್ಕೆ ಮಾಡಿಕೊಂಡಿತು ಎಂಬ ಮಾಹಿತಿ ಹರಿದಾಡುತ್ತಿದೆ.
ಆದರೆ ‘ದಿ ಪ್ಯಾರಡೈಸ್’ನಲ್ಲಿ ಕಯಾದು ಲೋಹರ್ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿಲ್ಲ ಎಂಬ ಮಾತು ಕೂಡ ಕೇಳಿಬರುತ್ತಿದೆ. ಹೀಗಾಗಿ ಜಾನ್ವಿ ಕಪೂರ್ ಈ ಪಾತ್ರದಲ್ಲಿ ನಟಿಸಿದ್ದರೆ ಸಿನಿಮಾದಲ್ಲಿ ಅವರ ಪಾತ್ರ ಹೇಗಿರುತ್ತಿತ್ತು? ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತಿತ್ತು? ಎಂಬ ಚರ್ಚೆಯೂ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.
‘ದಿ ಪ್ಯಾರಡೈಸ್’ ಸಿನಿಮಾವನ್ನು ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ (SLV Cinemas) ಬ್ಯಾನರ್‌ನಲ್ಲಿ ಸುಧಾಕರ್ ಚೆರುಕೂರಿ ನಿರ್ಮಿಸಿದ್ದಾರೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಇನ್ನು ತೆಲುಗು ಮಾತ್ರವಲ್ಲದೆ ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ‘ದಿ ಪ್ಯಾರಡೈಸ್’ ಸಿನಿಮಾ ಬಿಡುಗಡೆಯಾಗಿದ್ದು, ವಿವಿಧೆಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾನಿ ಹಾಗೂ ಶ್ರೀಕಾಂತ್ ಒಡೆಲಾ ಕಾಂಬಿನೇಷನ್‌ನ ಈ ಸಿನಿಮಾ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ತನ್ನ ಓಟ ಮುಂದುವರಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.