ಸ್ಯಾಂಡಲ್‌ವುಡ್‌ಯಿಂದ ಕಿರುತೆರೆಗೆ ಹಾರಿದ ಬೆಲ್ ಬಾಟಮ್ ನಟಿ!

Published : Jun 13, 2019, 12:32 PM IST
ಸ್ಯಾಂಡಲ್‌ವುಡ್‌ಯಿಂದ ಕಿರುತೆರೆಗೆ ಹಾರಿದ ಬೆಲ್ ಬಾಟಮ್ ನಟಿ!

ಸಾರಾಂಶ

ಪ್ರೇಕ್ಷಕರನ್ನು ತಲುಪುದಕ್ಕಾಗಿ ಧಾರಾವಾಹಿಗಳು ಹೊಸ ಹೊಸ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಈಗ ‘ನಾಯಕಿ’ ಧಾರಾವಾಹಿ ಇದಕ್ಕೆ ಹೊಸ ಸೇರ್ಪಡೆ. ಜೂನ್‌ 17ರಿಂದ ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿ ದಿನ ಸಂಜೆ 7 ಗಂಟೆಗೆ ಉದಯ ವಾಹಿನಿಯಲ್ಲಿ ‘ನಾಯಕಿ’ ಧಾರಾವಾಹಿ ಪ್ರಸಾರವಾಗಲಿದೆ. 

ಈ ಧಾರಾವಾಹಿಗೆ ಹೊಸ ರೀತಿಯಲ್ಲಿ ಪ್ರೋಮೋಗಳನ್ನು ಮಾಡಿದ್ದು, ಇದರಲ್ಲಿ ನಟಿ ಹರಿಪ್ರಿಯಾ ನಟಿಸಿದ್ದಾರೆ. ಸಾಮಾನ್ಯವಾಗಿ ಧಾರಾವಾಹಿಗಳ ಪ್ರೋಮೋಗಳಲ್ಲಿ ಆಯಾ ಧಾರಾವಾಹಿ ಕಲಾವಿದರೇ ಕಾಣಿಸಿಕೊಳ್ಳುತ್ತಾರೆ. ಆದರೆ, ಈ ‘ನಾಯಕಿ’ ಬಗ್ಗೆ ಹೇಳುವುದಕ್ಕಾಗಿಯೇ ಮಾಡಿರುವ ಪ್ರೋಮೋದಲ್ಲಿ ನಟಿ ಹರಿಪ್ರಿಯಾ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ.

’ನೀರ್‌ದೋಸೆ’ ಬೆಡಗಿ ಹಾಟ್ ಪೋಟೋಗಳಿಗೆ ಹಾರ್ಟ್ ಬೀಟ್ ಲಬ್ ಡಬ್!

ಶಶಿಧರ್‌ ಕೆ ಧಾರಾವಾಹಿ ನಿರ್ದೇಶಿಸುತ್ತಿದ್ದು, ಸಚಿನ್‌ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಈ ನಾಯಕಿ ಕಷ್ಟಗಳನ್ನು ಕೇವಲ ಎದುರಿಸುವುದಲ್ಲ, ಹೆದರಿಸುವ ದಿಟ್ಟೆ. ಸೌಂದರ್ಯ ಎಂಬ ಬಡ ಹುಡುಗಿ ತನ್ನಕುಡುಕ ಅಪ್ಪನನ್ನ ಸಾಕಲು ಮತ್ತು ತಮ್ಮನನ್ನು ಓದಿಸಲು ಪಡುವ ಕಷ್ಟಗಳ ಸುತ್ತ ಸಾಗುವ ಈ ಕತೆಯಲ್ಲಿ ಹೇಮಾ ಚೌಧರಿ ಅವರದ್ದು ಬಡ್ಡಿ ಬಂಗಾರಮ್ಮ ಪಾತ್ರ ಎಂಬುದು ಮತ್ತೊಂದು ವಿಶೇಷ. ಕಾವ್ಯ, ದೀಪಕ್‌ ಮುಂತಾದವರು ನಟಿಸಿದ್ದಾರೆ.

‘ಗಟ್ಟಿಮೇಳ’‘ರಾಧಾ ರಮಣ’ ಧಾರಾವಾಹಿಯ ಅವನಿ ಲುಕ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದರ್ಶನ್‌ ಡೆವಿಲ್‌ ಸಿನಿಮಾದ ಫಸ್ಟ್ ಡೇ ಫಸ್ಟ್‌ ಶೋ ಹೌಸ್‌ಫುಲ್‌: ಎಷ್ಟು ಕೋಟಿ ಕಲೆಕ್ಷನ್ ಆಗಿದೆ ಗೊತ್ತಾ?
Landlord Movie: ದುನಿಯಾ ವಿಜಯ್‌, ರಚಿತಾ ರಾಮ್‌ ಸಿನಿಮಾದಲ್ಲಿ ವಿಗ್‌ ಹಾಕಿ ನಟಿಸಿದ್ದೇಕೆ ರಾಜ್‌ ಬಿ ಶೆಟ್ಟಿ?