
ಗಾಳಿಪಟ ಸಿನಿಮಾದಲ್ಲಿ 'ಮೊದಲ ಪ್ರೇಮದ ಮಧುರ ಸಿಂಚನಾ' ಎಂದು ಹೇಳುತ್ತಾ ನೀಲಿ ದಾವಣಿಯಲ್ಲಿ ಹುಡುಗರ ಹೃದಯದಲ್ಲಿ ಹೆಜ್ಜೆ ಹಾಕಿದ ನಟಿ ಭಾವನ ಈಗ ನಟನೆಯೊಂದಿಗೆ ನೃತ್ಯ ನಿರ್ದೇಶಕಿಯಾಗಿ ಮತ್ತೊಂದು ಜರ್ನಿ ಶುರು ಮಾಡುತ್ತಿದ್ದಾರೆ.
ನಟಿಯರು ಕೆಲ ವರ್ಷಗಳ ಕಾಲ ಸಿನಿಮಾಗಳಲ್ಲಿ ಮಿಂಚಿ ಆ ನಂತರ ಚಿತ್ರಗಳ ನಿರ್ಮಾಣ ಅಥವಾ ನಿರ್ದೇಶನ ಮಾಡಿಕೊಂಡು ಹೋಗುವುದು ಸಹಜ. ಆದರೆ ಗಾಳಿಪಟ ಚಿತ್ರದ ನಾಯಕಿ ಭಾವನ ವಿಭಿನ್ನ ದಾರಿ ಹಿಡಿದಿದ್ದಾರೆ. ನಿರ್ದೇಶಕಿ ವಿಜಯ ಲಕ್ಷ್ಮಿ ಸಿಂಗ್ ತನ್ನ ಮೂವರು ಹೆಣ್ಣು ಮಕ್ಕಳನ್ನು 'ಯಾನ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಲಾಂಚ್ ಮಾಡುತ್ತಿದ್ದಾರೆ. ಇದೇ ಜೂಲೈ ತಿಂಗಳಲ್ಲಿ ತೆರೆ ಕಾಣುತ್ತಿರುವ 'ಯಾನ' ಚಿತ್ರದ ನೃತ್ಯ ನಿರ್ದೇಶನ ಮಾಡಿದ್ದಾರೆ. ಜೋಶ್ವಾ ಶ್ರೀಧರ್ ಸಂಗೀತ ಸಂಯೋಜನೆ ಮಾಡಿರುವ ಹಾಡನ್ನು ಮಡಿಕೇರಿಯಲ್ಲಿ ಚಿತ್ರೀಕರಣ ಮಾಡಿದ್ದು ಇದನು ಭಾವನ ನಿರ್ದೇಶನ ಮಾಡಿದ್ದಾರೆ.
ನನಗಂತೂ ಕನ್ನಡ ಚಿತ್ರರಂಗದಲ್ಲಿ ಯಾವ ಕೆಟ್ಟ ಅನುಭವ ಆಗಿಲ್ಲ: ಭಾವನಾ ರಾವ್
ನಿರ್ದೇಶಕರು ಹೇಳಿದಂತೆ ನಟಿಸುವುದು ಒಂದು ರೀತಿಯ ಚಾಲೆಂಜ್ ಆದರೆ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿರುವ ಹಾಡುಗಳನ್ನು ನಿರ್ದೇಶಿಸುವುದು ಇನ್ನೊಂದು ಚಾಲೆಂಜ್ ಎನ್ನುತ್ತಾರೆ ನಟಿ ಭಾವನಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.