ಟ್ರೋಲ್ ಮಾಡಿದವರಿಗೆ ಆರ್ಯ ಬಡಾಯಿ ಕೊಟ್ಟ ಉತ್ತರವೇನು?: ವೈರಲ್ ಆಯ್ತು ನಟಿಯ ಮಾತು!

Published : May 19, 2026, 06:07 PM IST
Arya Badai

ಸಾರಾಂಶ

ಅಮೆರಿಕದಲ್ಲಿ ನಡೆದ ಶೋ ಒಂದರಲ್ಲಿ ಮಾಡಿದ ಡ್ಯಾನ್ಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಟ್ರೋಲ್ ಮಾಡಲಾಗ್ತಿತ್ತು. ಇದಕ್ಕೆ ನಟಿ ಆರ್ಯ ಬಡಾಯಿ ಉತ್ತರ ಕೊಟ್ಟಿದ್ದಾರೆ. ಕಾಲಿಗೆ ಗಾಯವಾಗಿದ್ದರೂ ನಾನು ಡ್ಯಾನ್ಸ್ ಮಾಡಿದ್ದೆ ಅಂತ ಹೇಳಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ನೆಗೆಟಿವ್ ಪ್ರಚಾರಕ್ಕೆ ನಟಿ ಆರ್ಯ ಬಡಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಅಮೆರಿಕದಲ್ಲಿ ನಡೆದ ಶೋ ಒಂದರಲ್ಲಿ ಆರ್ಯ ಅವರ ಡ್ಯಾನ್ಸ್ ಮತ್ತು ಸ್ಕಿಟ್ ವಿಡಿಯೋಗಳನ್ನು ಇಟ್ಟುಕೊಂಡು ಅವರನ್ನು ಕೆಟ್ಟದಾಗಿ ಟ್ರೋಲ್ ಮಾಡಲಾಗುತ್ತಿದೆ. "ಆರ್ಯ ಮುಂದೆ ಖಡ್ಗಮೃಗ ಕೂಡ ಸೋಲುತ್ತೆ", "ಮಾತಾಡಿದ ಹಾಗೆ ಡ್ಯಾನ್ಸ್ ಮಾಡೋಕಾಗಲ್ಲ", "ಶೋಗೆ ಡ್ಯಾನ್ಸ್ ಮಾಡೋಕೆ ಬೇರೆ ಯಾರೂ ಸಿಗಲಿಲ್ವಾ?" ಎಂಬಂತಹ ತಲೆಬರಹಗಳೊಂದಿಗೆ ವಿಡಿಯೋಗಳು ವೈರಲ್ ಆಗಿದ್ದವು.

ಈ ಟ್ರೋಲ್‌ಗಳಿಗೆ ಆರ್ಯ ಈಗ ಉತ್ತರ ನೀಡಿದ್ದು, ಸದ್ಯ ಅವರ ಮಾತುಗಳು ಚರ್ಚೆಯಾಗುತ್ತಿವೆ. "ಈ ಬಗ್ಗೆ ಯಾವುದೇ ರೀಲ್ ಅಥವಾ ಪೋಸ್ಟ್ ಮಾಡಲು ನನಗೆ ಇಷ್ಟವಿರಲಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ನನ್ನ ಪರ್ಫಾರ್ಮೆನ್ಸ್ ವಿಡಿಯೋ ಬಗ್ಗೆ ಹರಿದಾಡುತ್ತಿದ್ದ ಕೆಲವು ಕೆಟ್ಟ ಕಾಮೆಂಟ್‌ಗಳು ನನ್ನ ಗಮನಕ್ಕೆ ಬಂದು, ನನ್ನನ್ನು ಸಂಪೂರ್ಣವಾಗಿ ಕುಗ್ಗಿಸಿಬಿಟ್ಟವು" ಎಂದು ಆರ್ಯ ಹೇಳಿದ್ದಾರೆ. ಅಂದು ತನಗೆ ಮೊಣಕಾಲಿಗೆ ಗಾಯವಾಗಿತ್ತು ಮತ್ತು ಕಾಲು ಊದಿಕೊಂಡಿತ್ತು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.

"4 ಪರ್ಫಾರ್ಮೆನ್ಸ್‌ಗಳು, 6 ಸ್ಟೇಜ್‌ಗಳು, 3 ಗಂಟೆಗಳ ಸುದೀರ್ಘ ಕಾರ್ಯಕ್ರಮ... ಇದರ ಬಗ್ಗೆ ಒಂದು ರೀಲ್ ಅಥವಾ ಪೋಸ್ಟ್ ಹಾಕುವ ಯಾವುದೇ ಆಸೆ ನನಗಿರಲಿಲ್ಲ. ಆದರೆ ನನ್ನ ಒಂದು ಪರ್ಫಾರ್ಮೆನ್ಸ್ ವಿಡಿಯೋಗೆ ಬಂದ ಕೆಟ್ಟ ಕಾಮೆಂಟ್‌ಗಳು ನನ್ನನ್ನು ತುಂಬಾ ಘಾಸಿಗೊಳಿಸಿದವು. ಅದರ ಬಗ್ಗೆ ಹೆಚ್ಚು ಮಾತಾಡಲು ನನಗಿಷ್ಟವಿಲ್ಲ, ಆದರೆ ಅದು ಕೊಟ್ಟ ನೋವು ಮಾತ್ರ ತುಂಬಾ ಆಳವಾದದ್ದು. ಹಾಗಾಗಿ ನನ್ನ ಮನಸ್ಸನ್ನು ಸಮಾಧಾನ ಮಾಡಿಕೊಳ್ಳಲು ಈ ವಿಡಿಯೋ ಮಾಡುತ್ತಿದ್ದೇನೆ. ಈಗ ನನಗೆ ನನ್ನ ಬಗ್ಗೆಯೇ ಹೆಮ್ಮೆ ಎನಿಸುತ್ತಿದೆ. ನನ್ನ ಇಡೀ ಕಲಾವಿದರ ತಂಡಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅವರು ನನ್ನ ಜೊತೆ ಗಟ್ಟಿಯಾಗಿ ನಿಂತರು, ನನ್ನನ್ನು ನೋಡಿಕೊಂಡರು, ನನ್ನ ಆರೋಗ್ಯ ವಿಚಾರಿಸಿದರು, ನನಗೋಸ್ಕರ ಅಪರಿಚಿತರ ಜೊತೆ ಜಗಳವಾಡಿದರು. ಅವರು ನನಗಾಗಿ ಮಾಡದ ಸಹಾಯವಿಲ್ಲ" ಎಂದು ಆರ್ಯ ಹೇಳಿದ್ದಾರೆ.

ಕಾಲು ಮಡಚಲು ಕೂಡ ಕಷ್ಟವಾಗುತ್ತಿತ್ತು

"ನನ್ನ ಮೊಣಕಾಲಿಗೆ ಪೆಟ್ಟಾಗಿತ್ತು. ಕಾಲಿನಲ್ಲಿ ನೀರು ತುಂಬಿಕೊಂಡು ಊದಿಕೊಂಡಿರುವುದನ್ನು ನೀವು ನೋಡಬಹುದು. ನನ್ನ ಕಾಲು ಮೂಲತಃ ಹೀಗಿಲ್ಲ, ಫ್ಲೂಯಿಡ್ ತುಂಬಿಕೊಂಡಿದ್ದರಿಂದ ಊತ ಬಂದಿದೆ. ಊತದ ಜೊತೆಗೆ ವಿಪರೀತ ನೋವು ಮತ್ತು ಕಾಲು ಮಡಚಲು ಕೂಡ ಕಷ್ಟವಾಗುತ್ತಿತ್ತು. ಆದರೆ ನಾವು ಶೋ ಮುಂದುವರಿಸಲೇಬೇಕಿತ್ತು. ಈ ಪಯಣದಲ್ಲಿ ನನ್ನ ಜೊತೆಗಿದ್ದಿದ್ದು ನನ್ನ ನೀಕ್ಯಾಪ್ ಮಾತ್ರ. ನೀಕ್ಯಾಪ್ ಹಾಕುವುದು, ಐಸ್ ಪ್ಯಾಕ್ ಇಡುವುದು, ಎನರ್ಜಿಗಾಗಿ ಎರಡು ರೆಡ್ ಬುಲ್ ಕುಡಿಯುವುದು, ಅಷ್ಟೇ. ಹೀಗೆಯೇ ನಾನು ಇಡೀ ಶೋ ಮಾಡಿದ್ದು" ಎಂದು ಆರ್ಯ ನೋವಿನಿಂದ ಹೇಳಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
ವಿಜಯಲಕ್ಷ್ಮೀ, ಪವಿತ್ರಾ ಗೌಡರಿಂದ ಜೈಲುವರೆಗೆ: ದರ್ಶನ್ ಜೀವನದ ವಿವಾದಗಳು ಏನೇನಿದೆ ಗೊತ್ತಾ?