ದಕ್ಷಿಣ ಭಾರತದ ಬೇಡಿಕೆ ನಟಿ, ಕನ್ನಡತಿ ಅನುಷ್ಕಾ ಶೆಟ್ಟಿ ಮದುವೆಗೆ ಸಿದ್ಧರಾಗಿದ್ದಾರಂತೆ. ಈ ಹಿಂದೆ ಕೂಡ ಅನುಷ್ಕಾ ಮದುವೆ ವಿಚಾರ ಹಲವು ಸಾರಿ ಚರ್ಚೆಗೆ ಬಂದಿತ್ತು. ಆದರೆ ಈ ಬಾರಿ ಅನುಷ್ಕಾ ಅವರೇ ಅಪ್ ಲೋಡ್ ಮಾಡಿರುವ ಫೋಟೋ ಬೇರೆಯದೆ ಕತೆ ಹೇಳುತ್ತಿದೆ.
ಹೈದರಾಬಾದ್[ಅ.29] ಅನುಷ್ಕಾ ಶೆಟ್ಟಿ ಮದುವೆ ಮಾಡಿಕೊಳ್ಳುತ್ತಿದ್ದಾರೆ.. ಹೌದಾ..ಹುಡುಗ ಯಾರು ಇದು ಅಭಿಮಾನಿಗಳನ್ನು ಒಳಗೊಂಡು ಎಲ್ಲರನ್ನು ಕಾಡುವ ಪ್ರಶ್ನೆ.
ಇನ್ ಸ್ಟಾಗ್ರಾಂನಲ್ಲಿ ಅನುಷ್ಕಾ ಫೋಟೋ ಒಂದನ್ನು ಹಾಕಿಕೊಂಡಿದ್ದು ಕಾಲುಂಗುರ ತೊಡುತ್ತಿರುವ ರೀತಿಯಲ್ಲಿದೆ. ಇದಕ್ಕೆ ಯಾವುದೇ ಶೀರ್ಷಿಕೆ ಅಗತ್ಯವಿಲ್ಲ ಎಂದು ಅನುಷ್ಕಾ ಬರೆದಿದ್ದಾರೆ.
ಸೊಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗಿದೆ. ಹಾಗಾದರೆ ಅನುಷ್ಕಾರ ಮದುವೆಯಾಗಲಿರುವ ಆ ಅದೃಷ್ಟವಂತ ಯಾರು? ಬಾಹುಬಲಿ ಪ್ರಭಾಸ್ ಜತೆ ಅನುಷ್ಕಾ ಮುಕ್ತವಾಗಿ ಇರುವ ವಿಚಾರ ಹೊಸತೇನೂ ಅಲ್ಲ. ಆದರೆ ಇಬ್ಬರು ಪ್ರೀತಿಯಲ್ಲಿಯೇ ಬಿದ್ದಿದ್ದಾರೆ ಎಂದು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿಲ್ಲ.