
ಬೆಂಗಳೂರು (ನ. 05): ಹೆಬ್ಬುಲಿ ಚಿತ್ರದ ನಟಿ ಅಮಲಾ ಪೌಲ್ ಹಸೆಮಣೆ ಏರಲು ಸಿದ್ದರಾಗಿದ್ದಾರೆ.
ಅಮಲಾ ಪೌಲ್ ಗೆ ಈಗಾಗಲೇ ಮದುವೆಯಾಗಿ ಎರಡನೇ ಮದುವೆಯಾಗಲು ಸಿದ್ದರಾಗಿದ್ದಾರೆ ಎನ್ನಲಾಗಿದೆ.ನಿರ್ದೇಶಕ ವಿಜಯ್ ರವರನ್ನು 2014 ರಲ್ಲಿ ವಿವಾಹವಾಗಿದ್ದರು. ಮೂರು ವರ್ಷ ಸಾಂಸಾರಿಕ ಜೀವನ ನಡೆಸುವಷ್ಟರಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಬೇರೆ ಬೇರೆಯಾಗಿದ್ದಾರೆ.
ಗಂಡನಿಂದ ಬೇರ್ಪಟ್ಟ ಅಮಲಾ ಪೌಲ್ ಸಿನಿಮಾದಲ್ಲಿ ಬ್ಯುಸಿಯಾದರು. ಕನ್ನಡದಲ್ಲಿ ಕಿಚ್ಚ ಸುದೀಪ್ ಜೊತೆ ಹೆಬ್ಬುಲಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲೂ ಸಿನಿಮಾ ಮಾಡಿದ್ದಾರೆ. ಇದೀಗ ಮತ್ತೊಂದು ಮದುವೆಯಾಗಲು ಸಿದ್ದರಾಗಿದ್ದಾರೆ. ಹುಡುಗ ಯಾರು ಅನ್ನುವ ಗುಟ್ಟು ಮಾತ್ರ ಬಿಟ್ಟು ಕೊಟ್ಟಿಲ್ಲ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.