
ಮಣಿಕರ್ಣಿಕಾ ಚಿತ್ರವು ಬಿಡುಗಡೆ ಆದ ಮೊದಲ ದಿನವೇ 8.75 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆದರೆ, ಬಿಡುಗಡೆಗಿದ್ದ ಅಡ್ಡಿ ಆತಂಕಗಳನ್ನು ಮೆಟ್ಟಿ ನಿಲ್ಲಲು ಬಾಲಿವುಡ್ ತಮ್ಮ ನೆರವಿಗೆ ಬರಲಿಲ್ಲವೆಂದು ಕಂಗನಾ ಅಳಲು ತೋಡಿಕೊಂಡಿದ್ದರು. ಮಾಧ್ಯಮಗಳ ಮುಂದೆ ಇಂಥ ಚಿತ್ರಕ್ಕೆ ಬಾಲಿವುಡ್ ನಟ-ನಟಿಯರಿಂದಲೇ ಸಹಾಯ ಹಾಗೂ ಪ್ರೊತ್ಸಾಹ ಸಿಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
'ಮಣಿಕರ್ಣಿಕಾ' ಬಿಡುಗಡೆಗೆ ಕರಣಿ ಸೇನಾ ವಿರೋಧ ವ್ಯಕ್ತಪಡಿಸಿತ್ತು. ಇಂಥ ಸಂದರ್ಭದಲ್ಲಿ ಕಂಗನಾಗೆ ಬಾಲಿವುಡ್ ಚಿತ್ರರಂಗ ಬೆನ್ನೆಲುಬಾಗಿ ನಿಲ್ಲಬೇಕಿತ್ತು. ಆ್ಯಟ್‌ಲೀಸ್ಟ್ ಆಲಿಯಾ ಭಟ್ ಹಾಗೂ ಆಮೀರ್ ಖಾನ್ ಆದರೂ ಬರುತ್ತಾರೆಂಬ ನಿರೀಕ್ಷೆ 'ಬಾಲಿವುಡ್ ಕ್ವೀನ್'ಗಿತ್ತು. ಎಲ್ಲವೂ ಹುಸಿಯಾದಾಗ ತಮ್ಮ ನೋವನ್ನು ಖಾಸಗೀ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿಯೂ ಹೊರ ಹಾಕಿದ್ದರು.
ಇದೀಗ ಕಂಗನಾ ಆರೋಪಕ್ಕೆ 'ಗಲ್ಲಿ ಬಾಯ್' ಚಿತ್ರದ ಪ್ರಮೋಷನ್ ವೇಳೆ ಪತ್ರಕರ್ತರು ಕೇಳಿದಾಗ, 'ಕಂಗನಾ ನನ್ನನ್ನು ದ್ವೇಷಿಸೋಲ್ಲ ಎಂಬ ನಂಬಿಕೆ ನನಗಿದೆ. ನಾನು ಅಂಥ ಕೆಲಸವನ್ನು ಎಂದೂ ಮಾಡಿಲ್ಲ. ಅವರಿಗೆ ಬೇಸರ ತರುವಂಥ ಕೆಲಸ ಮಾಡೋಲ್ಲ, ಅಕಸ್ಮಾತ್ ಅವರು ಆ ರೀತಿ ಫೀಲ್ ಮಾಡಿಕೊಂಡರೆ, ಕ್ಷಮೆ ಕೇಳುವೆ,' ಎಂದಿದ್ದಾರೆ.
'ಅಷ್ಟೇ ಅಲ್ಲ ಒಬ್ಬ ನಟಿಯಾಗಿ ನಾನು ಕಂಗನಾಳನ್ನು ಆರಾಧಿಸುತ್ತೇನೆ. ಆಕೆಯ ನೇರ ಮಾತು ನನಗಿಷ್ಟ. ಮಣಿಕರ್ಣಿಕಾ ರಿಲೀಸ್‌ಗಿದ್ದ ತೊಂದರೆ ಬಗ್ಗೆ ನನಗೆ ತಿಳಿದಿರಲಿಲ್ಲ. ನಾನು ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿ ಇದ್ದೆ,' ಎಂದು ಕಂಗನಾ ಆಕ್ರೋಶಕ್ಕೆ ಆಲಿಯಾ ಉತ್ತರಿಸಿದ್ದಾರೆ.
ಚಿತ್ರ ವಿಮರ್ಶೆ: ತೆರೆ ಮೇಲೆ ಅದ್ಭುತವಾಗಿ ಮೂಡಿ ಬಂದಿದೆ ’ಮಣಿಕರ್ಣಿಕಾ’
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.