
ರಂಗಭೂಮಿ ನಟಿ ಅಕ್ಷತಾ ಪಾಂಡವಪುರ ಮತ್ತೆ ಬೆಳ್ಳಿತೆರೆಗೆ ಮರಳಿದ್ದಾರೆ. ‘ಪಲ್ಲಟ’ ಚಿತ್ರದ ನಂತರ ಕತೆಗಾರ ವಿ.ಎಂ.ಮಂಜುನಾಥ್ ನಿರ್ದೇಶನದ ‘ಇಬೆಲ್ಲ’ ಚಿತ್ರಕ್ಕೆ ನಾಯಕಿ ಆಗಿದ್ದಾರೆ.
ಸಖತ್ ಬೋಲ್ಡ್ ಪಾತ್ರದೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ. ಆ ಚಿತ್ರದ ಮೊದಲ ಫೋಟೋಶೂಟ್ ಹೊರ ಬಿದ್ದಿದ್ದು, ಜಬರ್‌ದಸ್ತ್ ಲುಕ್‌ನಲ್ಲಿ ಗಾಂಜಾ ಹೊಡೆಯುತ್ತಾ ಕುಳಿತಿದ್ದಾರೆ ಅಕ್ಷತಾ.
‘ನಾನು ಗಾಂಜಾ ಬೆಳೆಯುವುದಿಲ್ಲ, ನಾನೇ ಗಾಂಜಾ’ ಎನ್ನುವ ಕಲಾವಿದ ಸಾಲ್ವಡಾರ್ ಡಾಲಿ ಹೇಳಿಕೆಯನ್ನು ಆ ಫೋಟೋ ಮೇಲೆ ದಾಖಲಿಸಿದ್ದಾರೆ ನಿರ್ದೇಶಕರು. ‘ಇದೊಂದು ಮಧ್ಯಮ ವರ್ಗದ ಯುವತಿ ನಿವೇದಿತಾಳ ಕತೆ. ಆಕೆ ಮಾಡೆಲ್. ಹಾಗೆಯೇ ಮಹತ್ವಕಾಂಕ್ಷಿ. ಯಾವುದಕ್ಕೂ ಕ್ಯಾರೆ ಎನ್ನದ ಬೋಲ್ಡ್ ಹುಡುಗಿ. ತನ್ನಿಷ್ಟದ ಬದುಕೇ ಬದುಕು ಎಂದುಕೊಂಡವಳು. ಜತೆಗೆ ತಾನು ಬದುಕುವುದಕ್ಕಾಗಿ ಏನು ಬೇಕಾದ್ರೂ ಮಾಡಬಲ್ಲಳು. ಒಂದು ರೀತಿ ಆಕೆಯ ಆಟೋಬಯೋಗ್ರಫಿ ಅಂತಲೂ ಹೇಳಬಹುದು’ ಎನ್ನುತ್ತಾರೆ ನಿರ್ದೇಶಕ ಮಂಜುನಾಥ್. ಮಂಜುನಾಥ್ ರಂಗಭೂಮಿ ಪ್ರತಿಭೆ.
ಈ ಹಿಂದೆ ತಾವೇ ರಚಿಸಿ, ರಂಗಕ್ಕೆ ಅವಳವಡಿಸಿದ್ದ ‘ಕನಸಿನ ಮನೆ’ ನಾಟಕವನ್ನು ‘ಇಬೆಲ್ಲ’ ಹೆಸರಲ್ಲಿ ಬೆಳ್ಳಿತೆರೆಗೆ ತರುತ್ತಿದ್ದಾರೆ. ಇಬೆಲ್ಲ ಅಂದ್ರೆ ಇರುವೆ-ಬೆಲ್ಲದ ಕತೆ. ನಿರ್ದೇಶಕ ಮಂಜುನಾಥ್ ಸೇರಿ ಆರು ಮಂದಿ ಬರಹಗಾರರು ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕುತ್ತಿದ್ದಾರೆ. ವಾಸು ದೀಕ್ಷಿತ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ಜಾನ್ ದೇವರಾಜ್ ಕಲಾ ನಿರ್ದೇಶನ ಹಾಗೂ ಸುಮುಖ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಆಗಸ್ಟ್ ಮೊದಲ ವಾರದಿಂದ ಚಿತ್ರೀಕರಣ ಶುರುವಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.