
ನವದೆಹಲಿ: ಬಾಲಿವುಡ್ ತಾರೆಯರಾದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ವಿವಾಹ ಕುರಿತ ಊಹಾಪೋಹಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.
ವರದಿಯೊಂದನ್ನು ನಂಬುವುದಾದರೆ, ತಾರಾ ಜೋಡಿಯು ತಮ್ಮ ಆಪ್ತರಲ್ಲಿ ಮದುವೆ ದಿನಾಂಕ ಹಂಚಿಕೊಂಡಿದ್ದಾರಂತೆ. ಆ ಪ್ರಕಾರ, ನವೆಂಬರ್ 12- - 16ರ ನಡುವೆ ಮದುವೆ ನಡೆಯಲಿದೆ ಎನ್ನಲಾಗಿದೆ.
ಈ ದಿನಗಳಲ್ಲಿ ಇತರ ಯಾವುದೇ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳದಂತೆ ರಣವೀರ್ ಮತ್ತು ದೀಪಿಕಾ ತಮ್ಮ ಆಪ್ತರಿಗೆ ಮುನ್ಸೂಚನೆ ನೀಡಿದ್ದಾರೆ. ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾರಂತೆ ರಣವೀರ್-ದೀಪಿಕಾ ಮದುವೆಯೂ ಇಟಲಿಯಲ್ಲೇ ನಡೆಯಲಿದೆ.
ಮದುವೆ ತುಂಬಾ ಖಾಸಗಿಯಾಗಿ ನಡೆಯಲಿದ್ದು, ಬಳಿಕ ಮುಂಬೈಯಲ್ಲಿ ಅದ್ದೂರಿ ಸತ್ಕಾರ ಕೂಟ ನಡೆಯಲಿದೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.