ಅಭಿಮಾನಿಗಳ ಅಂಗೈನಲ್ಲಿ ಐಂದ್ರಿತಾ, ಹೊಸ ಅವತಾರ್ ಏನ್ ಗೊತ್ತಾ!

By Suvarna News  |  First Published Feb 10, 2020, 11:53 PM IST

ಹೊಸ ಅವತಾರದಲ್ಲಿ ಐಂದ್ರಿತಾ ರೇ/ ವೆಬ್ ಸೀರಿಸ್ ನಲ್ಲಿ ಕಮಾಲ್ ಮಾಡಲಿದ್ದಾರೆ ಸುಂದರಿ/ ಗಂಡ ದಿಗಂತ್ ಜತೆ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್


ಗಂಡ ದಿಗಂತ್ ಅವರೊಂದಿಗೆ ಪೋಟೋ ಶೇರ್ ಮಾಡಿ ಸುದ್ದಿ ಮಾಡುತ್ತಿದ್ದ ನಟಿ ಐಂದ್ರಿತಾ ರೇ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.ಐಂದ್ರಿತಾ ವೆಬ್‌ ಸರಣಿ ಲೋಕಕ್ಕೆ  ಕಾಲಿಟ್ಟಿದ್ದಾರೆ. ಆ ಮೂಲಕ ಡಿಜಿಟಲ್‌ ಕ್ಷೇತ್ರದಲ್ಲೂ ಅಭಿಮಾನಿಗಳಿಗೆ ಮನರಂಜನೆ ನೀಡಲು ತಯಾರಿ ನಡೆಸಿದ್ದಾರೆ.

 ಗ್ಲಾಮರ್ ಬೊಂಬೆ  ಐಂದ್ರಿತಾ ರೇ ಜೀ 5  ನಲ್ಲಿ ಪ್ರಸಾರವಾಗುವ ದಿ ಕ್ಯಾಸಿನೋ ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಹಾರ್ದಿಕ್ ಗಜ್ಜಾರ್ ದಿ ಕ್ಯಾಸಿನೋ ಮೈ ಗೇಮ್ ಮೈ ರೂಲ್ಸ್  ವೆಬ್ ಸಿರೀಸ್  ನಿರ್ದೇಶನ ಮಾಡುತ್ತಿದ್ದಾರೆ, ಈ ವೆಬ್ ಸಿರೀಸ್ ನಲ್ಲಿ ಐಂದ್ರಿತಾ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ.

Tap to resize

Latest Videos

undefined

ಬಿಕಿನಿಗೆ ಬಂದ ಐಂದ್ರಿತಾ..ಅಬ್ಬಬ್ಬಾ ಎಂಥಾ ಲುಕ್

ಇವರ ಜೊತೆಗೆ ಕರ್ನವೀರ್ ಬೊಹ್ರಾ, ಸುದಾಂಶು ಪಾಂಡೆ ಮತ್ತು ಮಂದಾನ ಕರಿಮಿ ಕೂಡ ನಟಿಸಿದ್ದಾರೆ. 10 ಎಪಿಸೋಡ್ ಗಳು ಇರಲಿದ್ದು ಸಸ್ಪೆನ್ಸ್ ಥ್ರಿಲ್ಲರ್ ಕತೆ ಆಧಾರ.

ಈಗಾಗಲೇ ಒಂದು ತಿಂಗಳ ಶೂಟಿಂಗ್ ಮುಗಿದಿದ್ದು ನೇಪಾಳದಲ್ಲಿ ಶೂಟಿಂಗ್ ಮುಂದುವರಿದಿದೆ.

click me!