ವೇದಿಕೆ ಮೇಲೆ ನೂಕಾಟ..ತಳ್ಳಾಟ.. ಅನುಶ್ರೀ ಕೆಳಗಿಳಿಯಬೇಕಾಯ್ತು!

Published : Feb 10, 2020, 08:40 PM ISTUpdated : Feb 10, 2020, 08:46 PM IST
ವೇದಿಕೆ ಮೇಲೆ ನೂಕಾಟ..ತಳ್ಳಾಟ.. ಅನುಶ್ರೀ ಕೆಳಗಿಳಿಯಬೇಕಾಯ್ತು!

ಸಾರಾಂಶ

 ಅನುಶ್ರೀ ಸುತ್ತ ಮುಗಿಬಿದ್ದ ಅಭಿಮಾನಿಗಳು/ ಸೆಲ್ಫಿಗಾಗಿ ಹೋರಾಟ/ ವೇದಿಕೆ ಮೇಲೆ ಗೊಂದಲದ ವಾತಾವರಣ ನಿರ್ಮಾಣ/ ಬಿಗಿ ಭದ್ರತೆ ನಡುವೆ ಅನುಶ್ರೀ ಕೆಳಗಿಳಿಸಿದ ಗಾರ್ಡ್ ಗಳು

ಮುದ್ದೇಬಿಹಾಳ(ಫೆ. 10)  ಖ್ಯಾತ ನಿರೂಪಕಿ ಅನುಶ್ರೀ ಕಾರ್ಯಕ್ರಮದ ನಿಮಿತ್ತ ವಿಜಯಪುರಕ್ಕೆ ತೆರಳಿದ್ದರು.  ಆದರೆ ಅಲ್ಲಿ ಅಭಿಮಾನಿಗಳು ಮುಗಿ ಬಿದ್ದಿದ್ದರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಚಲನಚಿತ್ರ ನಿರ್ದೇಶಕ ಕಲಂದರ ದೊಡಮನಿ ಅವರ ನೇತೃತ್ವದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಕಲಾ ಜಾತ್ರೆ ಕಾರ್ಯಕ್ರಮದಲ್ಲಿ ಅನುಶ್ರೀಗೆ ಅಭಿಮಾನಿಗಳು ಮುತ್ತಿಗೆ ಹಾಕಿದ್ದರು.

ಅನುಶ್ರೀ ಒಂದು ದಿನದ ಸಂಭಾವನೆ ಎಷ್ಟು?

ಅನುಶ್ರೀ ವೇದಿಕೆಗೆ ಬರುತ್ತಿದ್ದಂತೆಯೇ ಮುಗಿಬಿದ್ದು ಸೆಲ್ಫಿಮತ್ತು ಆಟೋಗ್ರಾಫ್ ಪಡೆದುಕೊಳ್ಳುವಲ್ಲಿ ಮುಂದಾದರು. ಈ ವೇಳೆ ತಳ್ಳಾಟ-ನೂಕಾಟ ನಡೆದು ಅಂತಿಮವಾಗಿ ಪೊಲೀಸರು ಮತ್ತು ಗಾರ್ಡ್ ಗಳು ಮಧ್ಯ ಪ್ರವೇಶ ಮಾಡಬೇಕಾಗಿ ಬಂದಿತು.

ಹರಸಾಹಸ ಮಾಡಿ ಅನುಶ್ರೀ ಸುತ್ತ ನೆರೆದಿದ್ದವರನ್ನು ಚದುರಿಸಲಾಯಿತು. ಬಿಗಿ ಭದ್ರತೆಯಲ್ಲಿ ಅನುಶ್ರೀ ಅವರನ್ನು ವೇದಿಕೆಯಿಂದ ಕೆಳಗೆ ಇಳಿಸಿ ಕಳುಹಿಸಲಾಯಿತು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?